ತುಮಕೂರು | ಕೆರೆಗೆ ಬಿದ್ದು ತಂದೆ, ಮಗಳು ಸೇರಿ ಮೂವರು ಸಾವು

Public TV
1 Min Read

ತುಮಕೂರು: ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಸಮೀಪದ ಯರೇಕಟ್ಟೆ ಗ್ರಾಮದ ಕೆರೆಗೆ ಬಿದ್ದು ತಂದೆ, ಮಗಳು ಸೇರಿ ಮೂವರು ಇಂದು ಸಂಜೆ ಸಾವನ್ನಪ್ಪಿದ್ದಾರೆ.

ಯರೇಕಟ್ಟೆ ಗ್ರಾಮದ ವೆಂಕಟೇಶ್ (47), ಮಗಳು ಶ್ರಾವ್ಯ (12) ಹಾಗೂ ವೆಂಕಟೇಶ್ ಅಣ್ಣನ ಮಗನ ಮಗಳು ಪುಣ್ಯ (11) ಮೃತ ದುರ್ದೈವಿಗಳು. ಇದನ್ನೂ ಓದಿ: ದೀಪಾವಳಿ ಸಂಭ್ರಮದಲ್ಲಿ ಅವಘಡ – ಬೆಂಗ್ಳೂರಲ್ಲಿ 68 ಮಂದಿ ಕಣ್ಣಿಗೆ ಗಾಯ

ಸಂಜೆ 6 ಗಂಟೆಗೆ ಗ್ರಾಮದ ಬಳಿಯ ಕೆರೆ ಕಡೆ ಮೂವರು ಹೋಗಿದ್ದಾರೆ. ಕೆರೆಯಲ್ಲಿ ನೀರು ಮುಟ್ಟಲು ಹೋಗಿ ಶ್ರಾವ್ಯ ಹಾಗೂ ಪುಣ್ಯ ಕಾಲು ಜಾರಿ ಕೆರೆಗೆ ಬಿದ್ದಿದ್ದಾರೆ. ಮತ್ತೊಬ್ಬಳು ಬುದ್ಧಿಮಾಂದ್ಯಳಾಗಿದ್ದು ಮನೆಗೆ ಬಂದು ಕೆರೆಗೆ ಬಿದ್ದಿರುವ ವಿಷಯ ತಿಳಿಸಿದ್ದಾರೆ. ಕೂಡಲೇ ವೆಂಕಟೇಶ್ ಹಾಗೂ ಮಂಜುನಾಥ್ ರಕ್ಷಣೆಗೆ ತೆರಳಿದ್ದಾರೆ. ಈ ವೇಳೆ ವೆಂಕಟೇಶ್ ಕಾಲು ಜಾರಿ ಕೆರೆಗೆ ಬಿದ್ದಿದ್ದಾರೆ. ವೆಂಕಟೇಶ್ ಹಾಗೂ ಶ್ರಾವ್ಯ ಮೃತಪಟ್ಟಿದ್ದರೆ, ಪುಣ್ಯ ಹುಳಿಯಾರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.

ಹಂದನಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಭಾರತೀಯ ಸೇನೆಗೆ ಬ್ರಹ್ಮೋಸ್ ಕ್ಷಿಪಣಿ ಬ್ರಹ್ಮಾಸ್ತ್ರ – ಶೀಘ್ರದಲ್ಲೇ ಮಿಸೈಲ್ ಸಾಮರ್ಥ್ಯ 800 ಕಿಮೀಗೆ ಹೆಚ್ಚಳ

Share This Article