ಲಾರಿ, ಓಮ್ನಿ ಮುಖಾಮುಖಿ ಡಿಕ್ಕಿ- ಕೆಲ್ಸ ಮುಗ್ಸಿ ವಾಪಸ್ಸಾಗ್ತಿದ್ದ ಮೂವರ ದುರ್ಮರಣ

Public TV
1 Min Read

ಬಾಗಲಕೋಟೆ: ಲಾರಿ ಮತ್ತು ಓಮ್ನಿ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲಿಯೇ ಮೂವರು ಮೃತಪಟ್ಟಿರುವ ಘಟನೆ ಜಿಲ್ಲೆಯ ಮುಧೋಳ ನಗರದಲ್ಲಿ ನಡೆದಿದೆ.

ಕಾಶಿಂಸಾಬ ಮುಜಾವರ(42) ಅಪ್ರಿನಾ ಕಾಶಿಂಸಾಬ ಮುಜಾವರ(25) ಮತ್ತು ಶಭಾನಾ ನೂರ ಅಹಮದ್(38) ಮೃತ ದುರ್ದೈವಿಗಳು. ಮುಧೋಳ ವಿಜಯಪುರ-ಬೆಳಗಾವಿ ರಾಜ್ಯ ಹೆದ್ದಾರಿ ಮುಧೋಳ ನಗರದ ಕೆ.ಆರ್.ಲಕ್ಕಂ ಶಾಲೆಯ ಬಳಿ ಈ ಅಪಘಾತ ಸಂಭವಿಸಿದೆ. ಮೃತರು ವಿಜಯಪುರ ಜಿಲ್ಲೆಯ ಕಲಕೇರಿ ಗ್ರಾಮದವರು ಎಂದು ತಿಳಿದು ಬಂದಿದೆ.

ಮೂವರು ಕಾರಿನಲ್ಲಿ ದುಡಿಯಲು ಗೋವಾಕ್ಕೆ ಹೋಗಿದ್ದು, ಕೆಲಸ ಮುಗಿಸಿ ಗೋವಾದಿಂದ ತಮ್ಮ ಊರು ವಿಜಯಪುರಕ್ಕೆ ಓಮ್ನಿ ಕಾರಿನಲ್ಲಿ ಹೊರಟಿದ್ದರು. ಈ ವೇಳೆ ರಾಜ್ಯ ಹೆದ್ದಾರಿ ಮುಧೋಳ ನಗರದ ಕೆ.ಆರ್.ಲಕ್ಕಂ ಶಾಲೆಯ ಬಳಿ ವೇಗವಾಗಿ ಬಂದ ಲಾರಿಯೊಂದು ಡಿಕ್ಕಿ ಹೊಡೆದಿದೆ. ಪರಿಣಾಮ ವಾಹನದಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮುಧೋಳ ಪೊಲೀಸರು ಮತ್ತು ಬಾಗಲಕೋಟೆ ಎಸ್‍ಪಿ ಸಿ.ಬಿ ರಿಷ್ಯಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *