ಮಂಗಳೂರು: ಮಾದಕವಸ್ತು MDMA ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರು ಪೆಡ್ಲರ್ಗಳನ್ನು (Drug Peddlers) ಮಂಗಳೂರು ಸಿಸಿಬಿ ಪೊಲೀಸರು (CCB Police) ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಬೆಂಗಳೂರಿಂದ ಮಾದಕವಸ್ತು ಎಂಡಿಎಂಎ ತಂದು ಮಂಗಳೂರಿನ ತಲಪಾಡಿಯಲ್ಲಿ ಮಾರಾಟ ಮಾಡಲು ಆರೋಪಿಗಳು ಯತ್ನಿಸಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಮಂಗಳೂರು ಸಿಸಿಬಿ ಪೊಲೀಸರು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಇದನ್ನೂ ಓದಿ: ಯಾದಗಿರಿಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ – ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ. ನಷ್ಟ
ಉಳ್ಳಾಲದ ಮುಸ್ತಫಾ ಸೀದಿಯಬ್ಬ (34), ಮೈಯದ್ದಿ (28), ಮೊಹಮ್ಮದ್ ಶಿಫಾನ್ (28) ಬಂಧಿತರು. ಬಂಧಿತರಿಂದ 11,90 ಲಕ್ಷ ರೂಪಾಯಿ ಮೌಲ್ಯದ 118.13 ಗ್ರಾಂ ಮಾದಕವಸ್ತು ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ.
ಈ ಡ್ರಗ್ಸ್ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಮಾಹಿತಿ ಇದೆ. ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಕಾರ್ಯ ಮುಂದುವರಿದಿದೆ. ಇದನ್ನೂ ಓದಿ: ವಿಜಯ್ ರ್ಯಾಲಿಯಲ್ಲಿ ದುರಂತ – ಸ್ಥಳದಲ್ಲಿ ಕುಸಿದು ಬಿದ್ದು ವ್ಯಕ್ತಿ ಸಾವು

