ಮಸ್ಕತ್: ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆ ಹೆಚ್ಚುತ್ತಿದ್ದು ಹಾರ್ಮುಜ್ ಜಲಸಂಧಿಯಲ್ಲಿ (trait of Hormuz) ಹಡಗುಗಳ ಸಂಚಾರಕ್ಕೆ ಭಾರೀ ತೊಂದರೆ ಉಂಟಾಗಿದೆ. ಇದರ ನಡುವೆ ಒಮಾನ್‌ನ (Oman Tankers) ಮೂರು ದೊಡ್ಡ ಹಡಗುಗಳು ಇರಾನ್ (Iran) ಸಮುದ್ರ ಬಳಸದೇ ಹಾರ್ಮುಜ್ ಜಲಸಂಧಿಯನ್ನು ಪ್ರವೇಶಿಸಿವೆ.
ಎರಡು ದೊಡ್ಡ ತೈಲ ಸುಪರ್ ಟ್ಯಾಂಕರ್‌ಗಳು ಮತ್ತು ಒಂದು ಎಲ್‌ಪಿಜಿ ಹೊತ್ತ ಹಡಗಗಳು ಒಮಾನ್ ಕರಾವಳಿಯ ಹೊಸ ಮಾರ್ಗದ ಮೂಲಕ ಹಾರ್ಮುಜ್ ಕಾಲುವೆಯ ಪೂರ್ವ ಭಾಗಕ್ಕೆ ಪ್ರವೇಶಿಸಿವೆ. ಸಾಮಾನ್ಯವಾಗಿ ಇರಾನ್‍ನ ಕರಾವಳಿ ಮೂಲಕ ಹಾದುಹೋಗುವ ಬದಲು, ಈ ಹಡಗುಗಳು ಒಮಾನ್ (Oman) ತೀರದ ಕಡೆಗೆ ಸಂಚರಿಸಿವೆ. ಈ ಮೂರು ಹಡಗುಗಳೂ ಒಮಾನ್ ಶಿಪ್ಪಿಂಗ್ ಕಂಪನಿಯದ್ದಾಗಿವೆ. ಇದನ್ನೂ ಓದಿ: ಹಾರ್ಮುಜ್ ಜಲಸಂಧಿಯಲ್ಲಿ ಟೋಲ್ ಸಂಗ್ರಹಿಸುವ ಯೋಜನೆಗೆ ಇರಾನ್ ಒಪ್ಪಿಗೆ – ಅಮೆರಿಕ, ಇಸ್ರೇಲ್ ಹಡಗುಗಳಿಗೆ ನಿಷೇಧ
ನ್ಯಾವಿಗೇಷನ್ ಸವಾಲು ಮತ್ತು ಹೆಚ್ಚುತ್ತಿರುವ ಉದ್ವಿಗ್ನತೆಯಿಂದಾಗಿ ಹಾರ್ಮುಜ್ ಕಾಲುವೆಯ ಮೂಲಕ ಪ್ರಯಾಣವು ದಿನೇದಿನೇ ಕಷ್ಟಕರವಾಗುತ್ತಿದೆ. ಇರಾನ್ ಕೆಲವು ವಿದೇಶಿ ಹಡಗುಗಳನ್ನು ತನ್ನ ಮಾರ್ಗದ ಮೂಲಕ ಹಾದುಹೋಗಲು ಅನುಮತಿಸುತ್ತಿದೆ. ಆದರೂ ಕಟ್ಟುನಿಟ್ಟಾದ ಷರತ್ತುಗಳೊಂದಿಗೆ ಮತ್ತು ಶುಲ್ಕ ವಿಧಿಸಿ ಅನುಮತಿ ನೀಡುತ್ತಿದೆ. ಇರಾನ್ ಒಂದು ಹಡಗಿಗೆ ಒಂದು ಬಾರಿ ಪ್ರಯಾಣಕ್ಕೆ ಗರಿಷ್ಠ 18.52 ಕೋಟಿ ರೂ. ಶುಲ್ಕ ವಿಧಿಸುವ ಸಾಧ್ಯತೆ ಇದೆ. ಇದರಿಂದಾಗಿ ಶಿಪ್ಪಿಂಗ್ ಕಂಪನಿಗಳು ಸುರಕ್ಷಿತ ಅಥವಾ ಕಡಿಮೆ ವೆಚ್ಚದ ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿವೆ.
ಒಮಾನ್ ಹಡಗುಗಳ ಪ್ರಯಾಣ ಸಾಂಪ್ರದಾಯಿಕ ಮಾರ್ಗವನ್ನು ತಪ್ಪಿಸಿ, ಹೊಸ ಸಮುದ್ರ ಮಾರ್ಗ ಬಳಕೆಗೆ ಕಾರಣವಾಗಬಹುದು ಎನ್ನಲಾಗಿದೆ. ಇದನ್ನೂ ಓದಿ: ಹಾರ್ಮುಜ್ ಸಮುದ್ರ ಬಾಂಬ್‌ಗಳಿಂದ ತಪ್ಪಿಸಿ ಬದಲಿ ಮಾರ್ಗ ಬಳಸಿ ಭಾರತಕ್ಕೆ ಹಡಗು ಬಂದಿದ್ದೇಗೆ?

