ಶಾಸಕರಿಗೆ ಡಿನ್ನರ್‌ – ಡಿಕೆಶಿ ಜೊತೆ ಮೂವರು ಸಚಿವರು ಮುನಿಸು?

By
1 Min Read

ಬೆಂಗಳೂರು: ಡಿಕೆ ಶಿವಕುಮಾರ್‌ (DK Shivakumar) ಜೊತೆ ಮೂವರು ಸಚಿವರು ಮುನಿಸು ಮುಂದುರಿಸಿದ್ದಾರಾ ಹೀಗೊಂದು ಪ್ರಶ್ನೆ ಈಗ ಎದ್ದಿದೆ. ಡಿಕೆಶಿ ಆಯೋಜಿಸಿದ್ದ ಭೋಜನ ಕೂಟದಿಂದ ಈ ಪ್ರಶ್ನೆ ಈಗ ಸೃಷ್ಟಿಯಾಗಿದೆ.

ಡಿಸಿಎಂ ಡಿ.ಕೆ.ಶಿವಕುಮಾರ್ ಕೆಪಿಸಿಸಿ (KPCC) ಅಧ್ಯಕ್ಷರಾಗಿ 5 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕರಿಗೆ ಹೋಟೆಲಿನಲ್ಲಿ ಗುರುವಾರ ರಾತ್ರಿ ಭೋಜನ ಕೂಟ (Dinner) ಆಯೋಜಿಸಿದ್ದರು.

ಈ ಡಿನ್ನರ್‌ಗೆ ಸಿದ್ದರಾಮಯ್ಯ (Siddaramaiah) ಸೇರಿದಂತೆ ಹಲವು ಸಚಿವರು ಭಾಗಿಯಾಗಿದ್ದರು. ಆದರೆ ಸಿದ್ದರಾಮಯ್ಯ ಕ್ಯಾಬಿನೆಟ್‌ನಲ್ಲಿ ಪವರ್‌ಫುಲ್‌ ಮಂತ್ರಿಗಳಾಗಿರುವ ಮೂವರು ಈ ಸಭೆಗೆ ಗೈರಾಗಿದ್ದರು. ಇದನ್ನೂ ಓದಿ: ಗ್ಯಾರಂಟಿಗಳಿಗೆ SCSP – TSP ಹಣ ಬಳಕೆ – ದಲಿತರ ಎಷ್ಟು ಕೋಟಿ ಹಣ ಬಳಕೆ? ಇಲ್ಲಿದೆ ಲೆಕ್ಕ..

 

ಡಿಕೆಶಿ ಜೊತೆ ದೊಡ್ಡ ಮಟ್ಟದ ಬಂಡಾಯದ ಬಾವುಟ ಹಾರಿಸಿದ್ದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಡಿನ್ನರ್‌ನಲ್ಲಿ ಭಾಗಿಯಾಗಿದ್ದರು. ಸತೀಶ್ ಜಾರಕಿಹೋಳಿ ಜೊತೆ ಡಿಕೆಶಿ ವಿರುದ್ದ ಬಂಡಾಯ ಸಾರಿದ್ದ ಗೃಹ ಸಚಿವ ಪರಮೇಶ್ವರ್, ಸಮಾಜ ಕಲ್ಯಾಣ ಸಚಿವ ಮಹದೇವಪ್ಪ, ಸಹಕಾರಿ ಸಚಿವ ಕೆಎನ್‌ ರಾಜಣ್ಣ ಆಗಮಿಸರಲಿಲ್ಲ.  ಇದನ್ನೂ ಓದಿ: ನಡು ರಸ್ತೆಯಲ್ಲೇ ಹೊತ್ತಿ ಉರಿದ ಮಹೀಂದ್ರಾ ಥಾರ್

ಈ ಮೂಲಕ ಭೋಜನ ಕೂಟದಲ್ಲೂ ಡಿಕೆಶಿಯಿಂದ ಮೂವರು ಸಚಿವರು ಅಂತರ ಕಾಯ್ದುಕೊಂಡಿದ್ದಾರೆ. ಕಳೆದ ವಾರ ಡಿಕೆ ಶಿವಕುಮಾರ್‌ ಅವರು ಕೆಎನ್‌ ರಾಜಣ್ಣ ಅವರ ಭೇಟಿಗಾಗಿ ಕಚೇರಿಗೆ ಬಂದಿದ್ದರು. ಆದರೆ ಡಿಕೆಶಿ ಬರುತ್ತಿರುವ ವಿಷಯ ತಿಳಿದಿದ್ದರೂ ರಾಜಣ್ಣ ಅವರು ತಮ್ಮ ವೈಯಕ್ತಿಕ ಕೆಲಸಕ್ಕಾಗಿ ಕಚೇರಿಯಿಂದ ಬೇಗನೇ ಹೊರ ನಡೆದಿದ್ದರು.

 

Share This Article