ಆಸ್ತಿ ವಿವಾದ – ಗರ್ಭಿಣಿ ಸೇರಿದಂತೆ ಮೂವರನ್ನು ಬೆಂಕಿಗೆ ಹಾಕಿದ ದುರುಳರು

Public TV
2 Min Read

ಪಾಟ್ನಾ: ಎಂಟು ತಿಂಗಳ ಗರ್ಭಿಣಿ ಸೇರಿದಂತೆ ಒಂದೇ ಕುಟುಂಬದ ಮೂವರು ಸದಸ್ಯರನ್ನು ಆಸ್ತಿ ವಿವಾದಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ಕೊಲ್ಲಲು ಪ್ರಯತ್ನಿಸಿದ ಘಟನೆ ಬಿಹಾರದ ದರ್ಭಾಂಗಾದಲ್ಲಿ ನಡೆದಿದೆ.

ಅಕ್ರಮವಾಗಿ ನಮ್ಮ ಜಾಗದಲ್ಲಿ ಬೇರೆ ಕುಟುಂಬ ವಾಸಿಸುತ್ತಿದೆ ಎಂದು ವ್ಯಕ್ತಿಯೊಬ್ಬ ಬುಲ್ಡೋಜರ್‍ನಿಂದ ಮನೆ ಬಿಳಿಸಲು ಸೂಚಿಸಿದ್ದಾನೆ. ಈ ವೇಳೆ ಎರಡು ಕುಟುಂಬಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ದುಷ್ಕರ್ಮಿಗಳು ಮನೆಯಲ್ಲಿ ವಾಸಿಸುತ್ತಿದ್ದವರ ಮೇಲೆ ಬೆಂಕಿ ಹಚ್ಚಿದ್ದಾರೆ. ಗರ್ಭಿಣಿ ಎಂಬುದನ್ನು ನೋಡದೇ ಆಕೆಯ ಮೇಲೂ ಬೆಂಕಿ ಹಚ್ಚಿ ಸುಟ್ಟಿದ್ದಾರೆ. ಆದರೆ ಇವರನ್ನು ಕಡ ಸ್ಥಳೀಯರು ತಕ್ಷಣ ಆಸ್ಪತ್ರೆಗೆ ಸೇರಿಸಿದ್ದಾರೆ. ಪ್ರಸ್ತುತ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದು, ಆರೋಪಿಗಳಿಗಾಗಿ ಹುಡುಕುತ್ತಿದ್ದಾರೆ.

Three injured after being set on fire in Darbhanga - The Dani Post

ಗಾಯಗೊಂಡವರನ್ನು ಸಂಜಯ್ ಝಾ(31), ಪಿಂಕಿ(36) ಮತ್ತು ನಿಕ್ಕಿ ಕುಮಾರಿ(20) ಎಂದು ಗುರುತಿಸಲಾಗಿದೆ. ಪ್ರಸ್ತುತ ಇವರನ್ನು ಚಿಕಿತ್ಸೆಗಾಗಿ ಆಸತ್ರೆಗೆ ದಾಖಲಿಸಲಾಗಿದ್ದು, ನಿಕ್ಕಿ ಹುಷಾರಾಗಿ ಮನೆಗೆ ಮರಳಿದ್ದಾರೆ. ಆದರೆ ಎಂಟು ತಿಂಗಳ ಗರ್ಭಿಣಿ, ಪಿಂಕಿ ಮತ್ತು ಸಂಜಯ್ ಅವರನ್ನು ದರ್ಭಾಂಗಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಪಾಟ್ನಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಲಾಗಿದೆ.

ದರ್ಭಾಂಗ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಪ್ರಸಾದ್ ಈ ಕುರಿತು ಮಾತನಾಡಿದ್ದು, ಪ್ರಾಥಮಿಕ ತನಿಖೆಯಲ್ಲಿ ಈ ಘಟನೆಯು ಆಸ್ತಿ ವಿವಾದದಿಂದ ಈ ಕೃತ್ಯ ಸಂಭವಿಸಿದೆ ಎಂದು ಎನ್ನಲಾಗುತ್ತಿದೆ. ಆಸ್ತಿಗಾಗಿ ಜಗಳ ನಡೆಯುವ ವೇಳೆ ಕುಟುಂಬದ ಮೂವರಿಗೆ ಬೆಂಕಿ ಹಚ್ಚಲಾಗಿದ್ದು, ಗಾಯಗಳಾಗಿವೆ ಎಂದು ತಿಳಿಸಿದ್ದಾರೆ.

ಪ್ರಸ್ತುತ ನಾವು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಲಾಗಿದೆ. ಶೀಘ್ರದಲ್ಲೇ ಈ ಕೃತ್ಯ ಮಾಡಿದ ದುಷ್ಕರ್ಮಿಗಳನ್ನು ಗುರುತಿಸಲಾಗುವುದು. ಈ ಕೃತ್ಯದ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದ್ದು, ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ನಿಕ್ಕಿ ಪ್ರತಿಕ್ರಿಯಿಸಿದ್ದು, ಈ ಹಿಂದೆಯೇ ನಾವು ಪೊಲೀಸರಿಗೆ ಭದ್ರತೆಗಾಗಿ ಪದೇ-ಪದೇ ಮನವಿ ಮಾಡಿಕೊಂಡಿದ್ದೆವು. ಆದರೆ ಈ ಬಗ್ಗೆ ಪೆÇಲೀಸರು ಕಿವಿಗೊಡುತ್ತಿಲ್ಲ ಎಂದು ಆರೋಪಿಸಿದರು. ಈ ಕೃತ್ಯದಲ್ಲಿ ಶಿವಕುಮಾರ್ ಝಾ ಭಾಗಿಯಾಗಿದ್ದಾರೆ ಎಂದು ಸೂಚಿಸಿದ್ದಾರೆ.

ಎಂಟು ತಿಂಗಳ ಗರ್ಭಿಣಿ, ನನ್ನ ಸಹೋದರ ಸಂಜಯ್ ಮತ್ತು ಅಕ್ಕ ಪಿಂಕಿ ಅವರ ದೇಹ ಬೆಂಕಿಯಿಂದ ಶೇ.80 ರಷ್ಟು ಹೆಚ್ಚು ಸುಟ್ಟು ಗಾಯಗಳಾಗಿವೆ ಎಂದು ಉಲ್ಲೇಖಿಸಿದ ಅವರು, ಈ ಆಸ್ತಿಯನ್ನು ಶಿವಕುಮಾರ್ ಅವರು ಅಕ್ರಮವಾಗಿ ಖರೀದಿಸಿದ್ದಾರೆ. ಈ ಸುದ್ದಿ ತಿಳಿದ ನಂತರ ನಾವು ಪೊಲೀಸರಿಗೂ ತಿಳಿಸಿದ್ದು, ಅವರು ನಿರ್ಲಕ್ಷ್ಯ ತೋರಿಸಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ:  ವಿವಾದಾತ್ಮಕ ಸ್ಟೇಟಸ್ ಹಾಕಿದ ಯುವಕ – ಹತ್ತು ಜನ ಅರೆಸ್ಟ್!

ಗುರುವಾರ ಮಧ್ಯಾಹ್ನ ದರ್ಬಾಂಗಾ ಎಸ್‍ಎಸ್‍ಪಿ ಅವರನ್ನು ಭೇಟಿ ಮಾಡಲು ಹೋಗಿದ್ದೆವು. ಎಸ್‍ಎಸ್‍ಪಿ ನಮ್ಮನ್ನು ಭೇಟಿಯಾಗಲಿಲ್ಲ. ನನ್ನ ಸಹೋದರಿಯೊಂದಿಗೆ ಫೋನ್ ನಲ್ಲಿ ಮಾತನಾಡಿ ಸಹಾಯ ಮಾಡುತ್ತೇವೆಂದು ಭರವಸೆ ನೀಡಿದ್ದರು ಎಂದು ತಿಳಿಸಿದ್ದಾರೆ.

ಆಸ್ತಿ ವಿವಾದ ನಡೆಯುತ್ತಿದ್ದ ಜಾಗದಲ್ಲೇ ಕಳೆದ ನಾಲ್ಕು ದಶಕಗಳಿಂದ ಈ ಕುಟುಂಬ ವಾಸಿಸುತ್ತಿದೆ. ಆದರೆ 2017 ರಲ್ಲಿ, ಶಿವಕುಮಾರ್ ಝಾ ಅವರು ಈ ಆಸ್ತಿಯನ್ನು ಅಕ್ರಮವಾಗಿ ಖರೀದಿಸಿದ್ದಾರೆ. 2019 ರಿಂದ ಈ ವಿವಾದದ ಕೇಸ್ ಪಾಟ್ನಾ ಹೈಕೋರ್ಟ್‍ನಲ್ಲಿ ನಡೆಯುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *