ಶವಯಾತ್ರೆ ವೇಳೆ ವಿದ್ಯುತ್ ಸ್ಪರ್ಶದಿಂದ 3 ಸಾವು; ಶವ ಹೊತ್ತಿದ್ದವರೇ ಹೆಣವಾದ್ರು

Public TV
1 Min Read

ಕೋಲಾರ: ಅನಾರೋಗ್ಯದಿಂದ ಮೃತಪಟ್ಟ ಮಹಿಳೆಯ ಅಂತಿಮ ಶವ ಯಾತ್ರೆ ವೇಳೆ ಶವಕ್ಕೆ ಸಿಂಗರಿಸಿದ್ದ ಪಲ್ಲಕ್ಕಿಗೆ ವಿದ್ಯುತ್ ಸ್ಪರ್ಶವಾಗಿ, ಶವ ಪಲ್ಲಕ್ಕಿ ಹೊರುತ್ತಿದ್ದ ಮೂವರು ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ (Andhra Pradesh) ಚಿತ್ತೂರಲ್ಲಿ ನಡೆದಿದೆ.

ಕೋಲಾರದ (Kolara) ಗಡಿ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಕುಪ್ಪಂನಲ್ಲಿ ಶುಕ್ರವಾರ ಸಂಜೆ ಈ ಘಟನೆ ನಡೆದಿದ್ದು, ಕುಪ್ಪಂ ನಗರದ 5 ನೇ ವಾರ್ಡ್‌ನ ತಂಬಿಗಾನಪಲ್ಲಿ ರಾಣಮ್ಮ (65) ಮೃತಪಟ್ಟಿದ್ದರು. ಮಹಿಳೆ ಅಂತ್ಯಸಂಸ್ಕಾರಕ್ಕೆ ಕಬ್ಬಿಣದಿಂದ ಮಾಡಿದ ಪಲ್ಲಕ್ಕಿ ಹೊತ್ತು ತೆರಳುತ್ತಿದ್ದ ವೇಳೆ ಕರೆಂಟ್ ಶಾಕ್ ಹೊಡೆದಿದೆ. ಕಬ್ಬಿಣದಿಂದ ಶವ ಹೊರಲು ಮಾಡಿದ್ದ ಪಲ್ಲಕ್ಕಿಗೆ ವಿದ್ಯುತ್ ತಂತಿ ತಗುಲಿ ಅವಘಡ ಸಂಭವಿಸಿದೆ. ಇದನ್ನೂ ಓದಿ: ರಾತ್ರಿ ಮಲಗಲು ಜಾಗ ಸಿಗದೆ ಸ್ಮಶಾನದಲ್ಲೇ ಟೆಂಟ್ ಹಾಕಿದ ವಿದೇಶಿಗರು – ಹೌಹಾರಿದ ಜನ

ವಿದ್ಯುತ್ ಸ್ಪರ್ಶದಿಂದ ಅಂತಿಮ ಶವಯಾತ್ರೆಯಲ್ಲಿ ಶವಕ್ಕೆ ಹೆಗಲು ಕೊಟ್ಟಿದ್ದ ಮುನೆಪ್ಪ (45), ತಿರುಪತಿ ರಾವ್ (28), ರವೀಂದ್ರ (30) ಮೃತಪಟ್ಟಿದ್ದಾರೆ.

ತೀವ್ರ ಅಸ್ವಸ್ಥರಾಗಿದ್ದ ಮೂರು ಜನರನ್ನ ಕುಪ್ಪಂ ಮೆಡಿಕಲ್ ಕಾಲೇಜಿಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೂರು ಜನರು ಸಾವನ್ನಪ್ಪಿರುವ ಕುರಿತು ವೈದ್ಯರ ಸ್ಪಷ್ಟಪಡಿಸಿದ್ದಾರೆ. ಕುಪ್ಪಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇದನ್ನೂ ಓದಿ: ಎಂಜಿನಿಯರ್‌ ವಿದ್ಯಾರ್ಥಿನಿ, ಪೇಂಟರ್‌ ನಡುವೆ ಪ್ರೀತಿ – ಮನೆ ಬಿಟ್ಟು ಹೋಗಿ ತಾಳಿ ಕಟ್ಟಿಸಿಕೊಂಡ್ಳು; ಆಮೇಲೆ ನೀನು ಬೇಡ ಅಂದ್ಲು

Share This Article