ಯುಗಾದಿ ಹಬ್ಬದ ದಿನವೇ ದುರಂತ – ನದಿಗೆ ಈಜಲು ಹೋಗಿದ್ದ 3 ಬಾಲಕರು ನೀರುಪಾಲು

Public TV
0 Min Read

ಬಾಗಲಕೋಟೆ: ಯುಗಾದಿ ಹಬ್ಬದ ದಿನವೇ ದುರಂತವೊಂದು ಸಂಭವಿಸಿದೆ. ಕೃಷ್ಣಾ ನದಿಗೆ ಈಜಲು ಹೋಗಿದ್ದ ಮೂವರು ಬಾಲಕರು ನೀರುಪಾಲಾಗಿದ್ದಾರೆ.

ಸೀತಿಮನಿ ಗ್ರಾಮದ ಬಳಿ ಇರುವ ಕೃಷ್ಣಾ ನದಿಯಲ್ಲಿ ಘಟನೆ ನಡೆದಿದ್ದು, ಸೋಮಶೇಖರ್ ದೇವರಮನಿ (15), ಪರನಗೌಡ ಬೀಳಗಿ (17), ಮಲ್ಲಪ್ಪ ಬಗಲಿ (16) ಮೃತಪಟ್ಟಿದ್ದಾರೆ.

ಬಾಲಕ ಸೋಮಶೇಖರ್‌ನ ಮೃತದೇಹ ಪತ್ತೆಯಾಗಿದೆ. ಬಾಗಲಕೋಟೆ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿಶಾಮಕ ದಳದಿಂದ ಉಳಿದ ಬಾಲಕರಿಗಾಗಿ ಹುಡುಕಾಟ ನಡೆದಿದೆ.

ಬಾಲಕರು ಬಾಗಲಕೋಟೆ ಇಲ್ಯಾಳ ಗ್ರಾಮದ ನಿವಾಸಿಗಳಾಗಿದ್ದಾರೆ. ಯುಗಾದಿ ಪಾಡ್ಯದ ದಿನವೇ ಸೂತಕದ ಛಾಯೆ ಆವರಿಸಿದೆ.

Share This Article