ಬೆಳಗಾವಿ: ಗಂಡನನ್ನು (Husband) ಕೊಲ್ಲದಿದ್ರೆ ಆತ್ಮಹತ್ಯೆ ಮಾಡ್ಕೋತಿನಿ ಅಂತ ಬ್ಲ್ಯಾಕ್‍ಮೇಲ್ ಮಾಡಿ ಪ್ರಿಯಕರನಿಂದ ಪತಿಯನ್ನು ಕೊಲೆ ಮಾಡಿಸಿದ್ದ ಪಾಪಿ ಪತ್ನಿ (Wife) ಸೇರಿ ಹಾಗೂ ಮೂವರು ಆರೋಪಿಗಳನ್ನು ರಾಮದುರ್ಗ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಕಮಲವ್ವ, ಪ್ರಿಯಕರ ಸಾಬಪ್ಪ ಮಾದರ್ ಆತನ ಸ್ನೇಹಿತ ಫಕ್ಕೀರಪ್ಪ ಕಣವಿ ಎಂದು ಗುರುತಿಸಲಾಗಿದೆ. ರಾಮದುರ್ಗ ತಾಲೂಕಿನ ಜುನಿಪೇಟೆ ಗ್ರಾಮದ ಹರ್ಲಾಪುರದಿಂದ ರಾಮಾಪುರಕ್ಕೆ ಸಂಪರ್ಕಿಸುವ ರಸ್ತೆಯಲ್ಲಿ ಮಹಿಳೆಯ ಪತಿ ಈರಪ್ಪ ಆಡಿನ್ ಕೊಲೆಯಾಗಿತ್ತು. ವಾರದ ಹಿಂದೆ ಕತ್ತು ಹಿಸುಕಿ ಕೊಂದು ಶವ ಬಿಸಾಕಿ ಪತ್ನಿ ತವರುಮನೆ ಸೇರಿದ್ದಳು. ಇದನ್ನೂ ಓದಿ: ಬಿಷ್ಣೋಯ್ ಹೆಸರಲ್ಲಿ ಬೆದರಿಕೆ ಹಾಕಿ ಒಂದು ಕೋಟಿಗೆ ಡಿಮ್ಯಾಂಡ್ – ತಿಹಾರ್ ಜೈಲಲ್ಲಿ ಫ್ರೆಂಡ್ಸ್ ಆಗಿದ್ದ ಗ್ಯಾಂಗ್ ಅಂದರ್!
ಕ್ಯಾಂಟಿನ್‍ನಲ್ಲಿ ಕೆಲಸ ಮಾಡ್ತಿದ್ದ ಕಮಲವ್ವಗೆ ಪರಿಚಯವಾಗಿದ್ದ ವಿಕಲಾಂಗ ಸಾಬಪ್ಪ ಮಾದರ್ ಜೊತೆ ಅನೈತಿಕ ಸಂಬಂಧವಿತ್ತು. ಆತನ ಬಳಿ, ಗಂಡನ ಕಿರುಕುಳಕ್ಕೆ ಬೇಸತ್ತು, ಆತನ ಕೊಲೆಗೆ ಕಮಲವ್ವ ಸೂಚಿಸಿದ್ದಳು. ಕೊಲೆಗೂ ಮುನ್ನಾ ದಿನ 30ಬಾರಿ ಕರೆ ಮಾಡಿದ್ದ ಕಮಲವ್ವ. ಗಂಡನನ್ನ ಕೊಲೆ ಮಾಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಳು.
ಜು.7ರಂದು ಗಂಡನಿಗೆ ಕುಡಿಸಿ ಬಳಿಕ ನಿರ್ಜನ ಪ್ರದೇಶಕ್ಕೆ ಕಮಲವ್ವ ಕರೆದುಕೊಂಡು ಹೋಗಿದ್ದಳು. ಬಳಿಕ ಪ್ರಿಯಕರ ಹಾಗೂ ಆತನ ಸ್ನೇಹಿತ ಸೇರಿ ಈರಪ್ಪನ ಕತ್ತಿಗೆ ಟವೆಲ್ ಬಿಗಿದು ಸಾಯಿಸಿದ್ದರು.
ಶವ ಪತ್ತೆಯಾಗುತ್ತಿದ್ದಂತೆ ಕೊಲೆ ಕೇಸ್ ದಾಖಲಿಸಿಕೊಂಡಿದ್ದ ರಾಮದುರ್ಗ ಠಾಣೆ ಪೊಲೀಸರು, ಹೆಂಡತಿ ಫೋನ್ ಹಿಸ್ಟರಿ ಚೆಕ್ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿತ್ತು. ಇದನ್ನೂ ಓದಿ: ಯುಎಇಯಲ್ಲಿ ಕೇರಳದ ಮಹಿಳೆ ಆತ್ಮಹತ್ಯೆ; ಪತಿ, ಅತ್ತೆ-ಮಾವ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ