ನಾಡಬಾಂಬ್ ಸ್ಫೋಟಗೊಂಡು ಹಸುವಿನ ಬಾಯಿ ಛಿದ್ರ ಕೇಸ್ – ಮೂವರು ಆರೋಪಿಗಳ ಬಂಧನ

1 Min Read

ರಾಮನಗರ: ನಾಡಬಾಂಬ್ ಸ್ಫೋಟಗೊಂಡು (Land Bomb Explosion) ಹಸುವಿನ (Cow) ಬಾಯಿ ಛಿದ್ರಗೊಂಡ ಪ್ರಕರಣ ಸಂಬಂಧ ಕಾಡುಹಂದಿ ಬೇಟೆಗಾಗಿ ನಾಡಬಾಂಬ್ ಇಟ್ಟಿದ್ದ ಮೂವರು ಆರೋಪಿಗಳನ್ನ ಬಂಧನ ಮಾಡಲಾಗಿದೆ.

ಕೃಷ್ಣಮೂರ್ತಿ (45), ಶಿವಕುಮಾರ್ (23), ಶಿವನಪ್ಪ (46) ಬಂಧಿತ ಆರೋಪಿಗಳು. ಕನಕಪುರ ತಾಲೂಕಿನ ಆಲನಾಥ ಗ್ರಾಮದ ಬಳಿ ಜ.3ರಂದು ಈ ಘಟನೆ ನಡೆದಿತ್ತು. ರೈತ ಶಿವನೇಗೌಡ ಎಂಬುವವರು ಹಸುವನ್ನ ಮೇಯಲು ಬಿಟ್ಟಿದ್ದಾಗ ಬಾಯಿಗೆ ನಾಡಬಾಂಬ್ ಸಿಲುಕಿ ಸ್ಫೋಟಗೊಂಡು, ಹಸು ಬಾಯಿ ಛಿದ್ರಛಿದ್ರವಾಗಿತ್ತು. ಕಿಡಿಗೇಡಿಗಳ ಕೃತ್ಯಕ್ಕೆ ಹಸು ನರಳಾಡಿ ಎರಡು ದಿನಗಳ ಬಳಿಕ ಸಾವನ್ನಪ್ಪಿತ್ತು. ಈ ಸಂಬಂಧ ರೈತ ಶಿವನೇಗೌಡ ಕೋಡಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇದನ್ನೂ ಓದಿ: ಶೂಟೌಟ್‌ ಪ್ರಕರಣದಲ್ಲಿ ದಿನಕ್ಕೊಂದು ಟ್ವಿಸ್ಟ್‌ – ವಿಡಿಯೋನಲ್ಲಿದ್ದ ಬಹುತೇಕರು ಬಳ್ಳಾರಿಯವರೇ ಅಲ್ವಾ?

ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ್ದ ಕೋಡಿಹಳ್ಳಿ ಪೊಲೀಸರು, ಕಾಡು ಪ್ರಾಣಿಗಳ ಬೇಟೆಗೆ ನಾಡಬಾಂಬ್ ಇಟ್ಟಿದ್ದ ಮೂವರ ಬಂಧಿಸಿ, ಎರಡು ಜೀವಂತ ನಾಡಬಾಂಬ್‌ಗಳನ್ನ ವಶಕ್ಕೆ ಪಡೆದಿದ್ದಾರೆ. ಕೋಡಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಚಾರ್ಮಾಡಿ ಘಾಟಿಯಲ್ಲಿ ಒಂಟಿ ಸಲಗ ಪ್ರತ್ಯಕ್ಷ – ಕಿಲೋ ಮೀಟರ್‌ಗಟ್ಟಲೇ ಟ್ರಾಫಿಕ್‌ ಜಾಮ್‌!

Share This Article