ಇಂಟರ್‌ನ್ಯಾಷನಲ್ ನಂಬರ್‌ನಿಂದ ಬೆದರಿಕೆ ಕರೆ, ನಾನು ಹೆದರಲ್ಲ: ಪ್ರಿಯಾಂಕ್ ಖರ್ಗೆ

Public TV
3 Min Read

– RSS ಸೋ ಕಾಲ್ಡ್ ಒಂದು ಸಂಸ್ಥೆ ಅಷ್ಟೇ
– ಐ ಲವ್ RSS ಅನ್ನೋವ್ರು ದೇಶದ್ರೋಹಿಗಳು

ಬೆಂಗಳೂರು: ವ್ಯವಸ್ಥೆ ವಿರುದ್ಧ ಧ್ವನಿ ಎತ್ತಿದಾಗ ಕರೆಗಳು ಬಂದಿವೆ. ಗಾಂಧೀಜಿ, ಅಂಬೇಡ್ಕರ್‌ಗೆ ಬಿಟ್ಟಿಲ್ಲ, ಇನ್ನು ಇವರು ನಮ್ಮನ್ನು ಬಿಡುತ್ತಾರಾ? ಯಾವುದೇ ಕರೆ ಬಂದರೂ ಹೆದರುವುದಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ತಿರುಗೇಟು ನೀಡಿದ್ದಾರೆ.

ಬೆದರಿಕೆ ಕರೆ (Threat Call) ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿಂದಿ, ಇಂಗ್ಲೀಷ್‌ನಲ್ಲಿ ಮಾತಾನಾಡುತ್ತಾರೆ. ನೋ ಕಾಲರ್ ಐಡಿ, ಅಂತರಾಷ್ಟ್ರೀಯ ನಂಬರ್ ಇದೆ. ಕೆಟ್ಟ ಭಾಷೆಯಿಂದ ನಮಗೆ, ಕುಟುಂಬದವರಿಗೆ, ಕುಟುಂಬದವರ ಪರಿಸ್ಥಿತಿ ಬಗ್ಗೆ ಮಾತಾನಾಡುತ್ತಾರೆ. ಇದು ಸಹಜ, ವಿರೋಧ ಪಕ್ಷದಲ್ಲಿ ಇದ್ದಾಗಲೂ ಎರಡ್ಮೂರು ಬಾರಿ ದೂರು ಕೊಟ್ಟಿದ್ದೆ. ಬೊಮ್ಮಾಯಿ ಇದ್ರು, ತನಿಖೆ ಮಾಡಿಸಿದರು. ಆಗ ಇದು ಹೊರ ದೇಶದಿಂದ ಬರುತ್ತಿವೆ ಅಂದರು. ಈಗಲೂ ಅದೇ ನಡೆದಿದೆ ಎಂದರು. ಇದನ್ನೂ ಓದಿ: ನಂಜೇಗೌಡಗೆ ತಾತ್ಕಾಲಿಕ ರಿಲೀಫ್‌ – ಶಾಸಕ ಸ್ಥಾನದಿಂದ ಅಸಿಂಧುಗೊಳಿಸಿದ್ದ ಆದೇಶಕ್ಕೆ ಸುಪ್ರೀಂ ತಡೆ

ಹಿಂದೆ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಬೆದರಿಕೆ ಕರೆ ಬಂದಿತ್ತು, ಈಗಲೂ ದೂರು ಇದೆ. ಎಫ್‌ಐಆರ್ ರಿಜಿಸ್ಟರ್ ಮಾಡಬಹುದು, ಆದರೆ ಕಂಡು ಹಿಡಿಯೋದು ಕಷ್ಟ. ನಾವ್ಯಾಕೆ ಈ ಸಿದ್ಧಾಂತದಿಂದ ಹಿಂದೆ ಸರಿಯಲಿ? ಈ ತತ್ವದಿಂದ ಗಾಂಧೀಜಿ ಬಲಿ ತೆಗೆದುಕೊಂಡಿಲ್ವಾ? ಸಂವಿಧಾನದಲ್ಲಿ ನಮಗೆ ನಂಬಿಕೆ ಇದೆ. ಇದು ನನ್ನ ಸಿದ್ಧಾಂತ, ನಾನು ಮಾತನಾಡಿದ್ದೇನೆ. ಪಕ್ಷದಿಂದ ಸಪೋರ್ಟ್ ಇಲ್ಲ ಅಂತ ಯಾರು ಹೇಳಿದ್ದು? ಸಿಎಂ ಹಾದಿಯಾಗಿ ಎಲ್ಲರೂ ಸಪೋರ್ಟ್ ಮಾಡಿದ್ದಾರೆ ಎಂದು ಸಮರ್ಥಿಸಿಕೊಂಡರು. ಇದನ್ನೂ ಓದಿ: ಸಿದ್ದಕಟ್ಟೆ ಕೊಡಂಗೆ: ವೀರ ವಿಕ್ರಮ ಜೋಡುಕರೆ 2ನೇ ವರ್ಷದ ‘ರೋಟರಿ ಕಂಬಳ’ ಕ್ಕೆ ಚಾಲನೆ

ಪತ್ರ ಬರೆದು 48 ತಾಸು ಅಷ್ಟೇ ಆಗಿರೋದು. ಇಲ್ಲಿ ಆರ್‌ಎಸ್‌ಎಸ್ (RSS) ಮಾತನಾಡುತ್ತಿಲ್ಲ, ಬಿಜೆಪಿ ಮಾತನಾಡುತ್ತಿದೆ. ಸದನದಲ್ಲಿ ಆರ್‌ಎಸ್‌ಎಸ್ ಬಗ್ಗೆ ಮಾತಾಡಿದರೆ ಇಡೀ ಸದನ ಮುಗಿಸುತ್ತಾರೆ. ಆರ್‌ಎಸ್‌ಎಸ್ ಸೋ ಕಾಲ್ಡ್ ಒಂದು ಸಂಸ್ಥೆ ಅಷ್ಟೇ. ರಿಜಿಸ್ಟಾರ್ ಆಗದಿರೋ ಸಂಸ್ಥೆ ಅಷ್ಟೇ ಇದು. ಎಲ್ಲೇ ಕಾರ್ಯಕ್ರಮ ಮಾಡಿದರೂ ಪರ್ಮಿಷನ್ ತೆಗದುಕೊಳ್ಳಲೇಬೇಕು. ಇವರು ಯಾಕೆ ಪರ್ಮಿಷನ್ ತೆಗೆದುಕೊಂಡಿಲ್ಲ? ಇದು ನನ್ನ ಡಿಮ್ಯಾಂಡ್ ಅಲ್ಲ ಇದು ನನ್ನ ಸಲಹೆ. ನಾನು ಒಂದು ಕರೆ ಕೊಟ್ಟು ಅಂಬೇಡ್ಕರ್ ಕಾರ್ಯಕ್ರಮ ಮಾಡೋಣ ಅಂದರೆ ಬಿಡುತ್ತೀರಾ? ನಮ್ಮ ಸರ್ಕಾರ ಇರೋದಕ್ಕೆ ನಾನು ಸಲಹೆ ನೀಡಿದ್ದು. ಬಳಿಕ ಬೇರೆ ಸರ್ಕಾರಕ್ಕೆ ನಂತರ ಪತ್ರ ಬರೆಯೋಣ ಎಂದು ಹೇಳಿದರು. ಇದನ್ನೂ ಓದಿ: GBA ರಚನೆ ಕುರಿತು ನೀವು ಎತ್ತಿರುವ ಪ್ರಶ್ನೆ ಸೂಕ್ತವಾಗಿದೆ, ಹೈಕೋರ್ಟ್‌ನಲ್ಲಿ ಪ್ರಶ್ನಿಸಿ: ಅರ್ಜಿದಾರರಿಗೆ ಸುಪ್ರೀಂ ನಿರ್ದೇಶನ

ನಮ್ಮ ಆಚರಣೆ ಬಗ್ಗೆ ತಂದೆ ತಾಯಿ ಕಲಿಸುತ್ತಾರೆ. ಸರ್ಕಾರಿ ಶಾಲೆಯಲ್ಲಿ ಹೋಗುವವರು ಬಡ ಮಕ್ಕಳು. ಅಲ್ಲಿ ಹೋಗಿ ದೊಣ್ಣೆ ಬೀಸೋದು, ಆ ಮಕ್ಕಳಿಗೆ ಕಲಿಸೋದು ಎಷ್ಟು ಸರಿ? ಇದಕ್ಕೆ ನಮ್ಮ ಮಕ್ಕಳು ಯಾಕೆ ಬಲಿಯಾಗಬೇಕು? ಮೊದಲು ಮನೆ ಮಕ್ಕಳಿಗೆ ಇದನ್ನ ಹೇಳಿಕೊಡಿ. ಬಿಜೆಪಿ ನಾಯಕರ ಮಕ್ಕಳಿಗೆ ದೊಣ್ಣೆ ಕೊಟ್ಟು ಕಲಿಸಲಿ. ಅವರ ಮನೆ ಮಕ್ಕಳು ಯಾವಾಗ ಧರ್ಮ ರಕ್ಷಣೆಗೆ, ಗೋ ರಕ್ಷಣೆಗೆ ಇಳೀತಾರೆ ಹೇಳಲಿ. ಐ ಲವ್ ಆರ್‌ಎಸ್‌ಎಸ್ ಅನ್ನೋವ್ರು ದೇಶ ದ್ರೋಹಿಗಳು. ಇದು ಬೆದರಿಕೆ ಅಲ್ಲ, ಬೆದರಿಕೆ ಕರೆ ಅಷ್ಟೆ. ಜನ ಇದ್ದಾರೆ, ಸರ್ಕಾರ ನಮ್ಮ ಪರ ಇದೆ, ಅಷ್ಟು ಸಾಕು ಎಂದು ಟಾಂಗ್ ಕೊಟ್ಟರು.  ಇದನ್ನೂ ಓದಿ: ಸಿಎಂ, ಡಿಸಿಎಂ ಮನೆಗೆ ಬಾಂಬ್‌ ಬೆದರಿಕೆ ಬೆನ್ನಲ್ಲೇ ಅಲರ್ಟ್‌ – ಪ್ರಕರಣ ಭೇದಿಸಲು SIT ರಚಿಸಿದ ಸರ್ಕಾರ

Share This Article