ಮೈಸೂರಲ್ಲಿ ಮೊದಲ ಆಷಾಢ ಶುಕ್ರವಾರ ಸಂಭ್ರಮ – ಚಾಮುಂಡೇಶ್ವರಿ ದರ್ಶನಕ್ಕೆ ಭಕ್ತಸಾಗರ

Public TV
1 Min Read

– ಲಕ್ಷ್ಮಿ ಅಲಂಕಾರದಲ್ಲಿ ಕಂಗೊಳಿಸಿದ ಚಾಮುಂಡೇಶ್ವರಿ

ಮೈಸೂರು: ನಗರದಲ್ಲಿ ಆಷಾಢ ಶುಕ್ರವಾರ (Ashada Shukravara) ಸಂಭ್ರಮ ಮನೆ ಮಾಡಿದೆ. ಮೊದಲ ಆಷಾಢ ಶುಕ್ರವಾರ ಹಿನ್ನೆಲೆ ಚಾಮುಂಡಿಬೆಟ್ಟಕ್ಕೆ (Chamundeshwari Hills) ಅಪಾರ ಸಂಖ್ಯೆಯಲ್ಲಿ ಭಕ್ತಸಾಗರ ಹರಿದುಬಂದಿದೆ.

ಚಾಮುಂಡೇಶ್ವರಿಗೆ ಲಕ್ಷ್ಮಿ ಅಲಂಕಾರ ಮಾಡಲಾಗಿದೆ. ದೇವಾಲಯವನ್ನ ವಿಶೇಷ ಹೂಗಳಿಂದ ಅಲಂಕರಿಸಲಾಗಿದೆ. ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ಭಕ್ತರು ದರ್ಶನ ಪಡೆದರು. ಇದನ್ನೂ ಓದಿ: ಘಟಪ್ರಭಾ ತಟದಲ್ಲಿ ಪ್ರವಾಹ ಭೀತಿ – ಮುಧೋಳ ತಾಲೂಕಿನ ಸೇತುವೆ ಜಲಾವೃತ ಸಾಧ್ಯತೆ

ಈ ಬಾರಿ 300 ರೂ., 2000 ರೂ. ಟಿಕೆಟ್ ಹಾಗೂ ಧರ್ಮದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. 2000 ರೂ. ಟಿಕೆಟ್‌ಗೆ ಪ್ರಸಾದ ಕಿಟ್ ಸಹ ನೀಡಲಾಗುವುದು. ಚಾಮುಂಡಿಬೆಟ್ಟಕ್ಕೆ ಖಾಸಗಿ ವಾಹನಗಳಿಗೆ ನಿರ್ಬಂಧ ಆಗಿದೆ.

ಲಲಿತ್ ಮಹಲ್ ಹೆಲಿಪ್ಯಾಡ್‌ನಿಂದ ಬಸ್ ವ್ಯವಸ್ಥೆ ಮಾಡಲಾಗಿದೆ. ಮೆಟ್ಟಿಲು ಮೂಲಕ ಬರುವ ಭಕ್ತರಿಗೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ. ಒಂದು ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಭಕ್ತರು ಬರುವ ನಿರೀಕ್ಷೆ ಇದೆ. ಇದನ್ನೂ ಓದಿ: 1 ಲಕ್ಷ ಕ್ಯೂಸೆಕ್‌ ಒಳ ಹರಿವು – ಕೃಷ್ಣಾ ನದಿ ತೀರದಲ್ಲಿ ಪ್ರವಾಹ ಭೀತಿ

ಮಾಜಿ ಸಚಿವ ಹೆಚ್‌.ಡಿ.ರೇವಣ್ಣ ಹಾಗೂ ಪುತ್ರ ಸೂರಜ್‌ ರೇವಣ್ಣ ಅವರು ಸಹ ಚಾಮುಂಡಿ ಬೆಟ್ಟಕ್ಕೆ ತೆರಳಿ ದೇವಿಯ ದರ್ಶನ ಪಡೆದಿದ್ದಾರೆ.

Share This Article