ಇಕ್ಬಾಲ್ ಅನ್ಸಾರಿ ಹನುಮ ಮಾಲಾಧಾರಿಗಳಿಗೆ ಸ್ವಾಗತ ಕೋರಿ ಬ್ಯಾನರ್ – ಶ್ರೀರಾಮಸೇನೆ ಆಕ್ಷೇಪ

Public TV
1 Min Read

ಕೊಪ್ಪಳ: ಹನುಮ ಜನ್ಮಸ್ಥಳ ಕೊಪ್ಪಳದ (Koppala) ಆನೆಗೊಂದಿ ಬಳಿ ಇರುವ ಅಂಜನಾದ್ರಿ ಬೆಟ್ಟದಲ್ಲಿ (Anjanadri Hills) ನಾಳೆ ಹನುಮ ಭಕ್ತರ (Devotees) ಸಮಾಗಮ ಆಗಲಿದೆ. ರಾಜ್ಯದ ಮೂಲೆ ಮೂಲೆ ಮೂಲೆಗಳಿಂದ ಸಾವಿರಾರು ಭಕ್ತರು ಹನುಮ ಮಾಲೆ ವಿರ್ಸಜನೆಗೆ ಬರುತ್ತಿದ್ದಾರೆ.

ಮಧ್ಯರಾತ್ರಿ 1 ಗಂಟೆಯಿಂದಲೇ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಭಕ್ತರು ಸರತಿ ಸಾಲಿನಲ್ಲಿ ನಿಂತು ಈಗಾಗಲೇ ದರ್ಶನ ಪಡೆಯುತ್ತಿದ್ದಾರೆ. ಗಂಟೆ, ಗಂಟೆಗೂ ಭಕ್ತರ ಸಂಖ್ಯೆಯಲ್ಲಿ ಹೆಚ್ಚಾಗುತ್ತಿದ್ದು, ಬಾಗಲಕೋಟೆ, ಧಾರವಾಡ, ವಿಜಯಪುರ, ಬೆಳಗಾವಿ ಭಕ್ತರು ಸಾಗರೋಪದಿಯಲ್ಲಿ ಆಗಮಿಸುತ್ತಿದ್ದಾರೆ. ಜೈಶ್ರೀರಾಮ್, ಜೈ ಹನುಮಾನ್ ಘೋಷಣೆಗಳು ಮಾರ್ದನಿಸುತ್ತಿದೆ. ಇದನ್ನೂ ಓದಿ: ಶ್ರೀರಂಗಪಟ್ಟಣದಲ್ಲಿ ಕೇಸರಿ ರಣಕಹಳೆ- ಜಾಮಿಯಾ ಮಸೀದಿ ಸ್ಥಳದಲ್ಲೇ ಹನುಮ ದೇಗುಲಕ್ಕೆ ಸಂಕಲ್ಪ

ಈ ಮಧ್ಯೆ, ಗಂಗಾವತಿಯ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ (Iqbal Ansari) ಹನುಮ ಮಾಲಾಧಾರಿಗಳಿಗೆ ಸ್ವಾಗತ ಕೋರಿ ಬ್ಯಾನರ್ ಹಾಕಿಸಿದ್ದಾರೆ. ಇದಕ್ಕೆ ಶ್ರೀರಾಮಸೇನೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಇದೆಲ್ಲಾ ಚುನಾವಣೆ ಗಿಮಿಕ್ ಅಂತ ಕಿಡಿಕಾರಿದೆ. ಗಂಗಾವತಿಯಲ್ಲಿ ದೇವಸ್ಥಾನಗಳನ್ನು ಕೆಡವಿ ಮಸೀದಿಗಳನ್ನು ಕಟ್ಟಿದ್ದಿರಿ ಎಂದು ಗೊತ್ತಿದೆ. ಈಶ್ವರನ ದೇವಾಲಯ ಇವತ್ತಲ್ಲ ನಾಳೆ ನಾವು ತೆಗೆಯುತ್ತೇವೆ ನಿಮಗೆ ತಾಕತ್ ಇದ್ರೆ ತಡೆಯಿರಿ. ನಾವು ಯಾವತ್ತು ಮಸೀದಿಗೆ ಬಂದಿಲ್ಲ. ನೀವು ವೋಟಿನ ಆಸೆಗೆ ಶಾಲು ಹಾಕೊಂಡು ಕುತ್ಕೋತಿರಾ ಅಂತ ಶ್ರೀರಾಮಸೇನೆಯ ಸಂಜೀವ ಮರಡಿ ವಾಗ್ದಾಳಿ ನಡೆಸಿದ್ದಾರೆ. ಇನ್ನು ಯಾವುದೇ ಅಹಿತಕರ ಘಟನೆ ನಡೆಯದಂತೆ ಬೆಟ್ಟದ ಸುತ್ತಲೂ ಸಿಸಿ ಕ್ಯಾಮೆರಾ ಅಳವಡಿಕೆ ಹಾಗೂ ಪೊಲೀಸ್ ಬಿಗಿ ಭದ್ರತೆ ಮಾಡಲಾಗಿದೆ. ಇದನ್ನೂ ಓದಿ: ಕುಕ್ಕರ್ ಬ್ಲಾಸ್ಟ್ ಕೇಸ್‍ನಲ್ಲಿ NIAಗೆ ಸ್ಫೋಟಕ ಮಾಹಿತಿ- ಉಗ್ರನ ಅಕೌಂಟ್‍ಗೆ ಬರ್ತಿತ್ತು ಡಾಲರ್

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *