ಒಂದೇ ವೇದಿಕೆಯಲ್ಲಿ ನವರಸ ನಾಯಕ ಹಾಗೂ ವಿದೇಶಿ ಕನ್ನಡಿಗರು: ಗ್ರ್ಯಾಂಡ್ ಸಕ್ಸಸ್ ಕಂಡ ವರ್ಚ್ಯುಯಲ್ ಕಾರ್ಯಕ್ರಮ..!!

Public TV
2 Min Read

ವರಸ ನಾಯಕ ಜಗ್ಗೇಶ್ ಅಭಿನಯದ ಮೋಸ್ಟ್ ಎಕ್ಸ್ ಪೆಕ್ಟೆಡ್ ‘ತೋತಾಪುರಿ’ ಸಿನಿಮಾ ಬಗ್ಗೆ ಈಗಾಗಲೇ ಸಾಕಷ್ಟು ಮಾಹಿತಿ ಸಿಕ್ಕಾಗಿದೆ, ಸಾಕಷ್ಟು ಕ್ರೇಜ್ ಕೂಡ ಸೃಷ್ಟಿಯಾಗಿದೆ. ಅದರ ಜೊತೆಗೆ ಬಾಗ್ಲು ತೆಗಿ ಮೇರಿ ಜಾನ್ ಸೂಪರ್ ಡೂಪರ್ ಹಿಟ್ ಆಗಿದೆ. ಈ ಖುಷಿಯನ್ನು ಸೆಲೆಬ್ರೇಟ್ ಮಾಡಲು ಅನಿವಾಸಿ ಕನ್ನಡಿಗರು ನವರಸ ನಾಯಕನ ಜೊತೆ ಒಟ್ಟಾಗಿದ್ದು ಈಗ ನಯಾ ಸಮಾಚಾರ. ಎಸ್, ವಿದೇಶದಲ್ಲಿರುವ ಕನ್ನಡಿಗರು, ಜಗ್ಗೇಶ್ ಅಭಿಮಾನಿಗಳು ಇಂದು ಗ್ರ್ಯಾಂಡ್ ವರ್ಚ್ಯುಯಲ್ ಕಾಮಿಡಿ ಕಾರ್ಯಕ್ರಮ ಹಮ್ಮಿಕೊಂಡು ನವರಸ ನಾಯಕ ಜಗ್ಗೇಶ್ ಜೊತೆ ಮಾತುಕತೆ ನಡೆಸಿದ್ದಾರೆ.

‘ಗ್ರ್ಯಾಂಡ್ ವರ್ಚ್ಯುಯಲ್ ಕಾಮಿಡಿ’ ಹೆಸರಿಗೆ ತಕ್ಕಂತೆ ಸಖತ್ ಅದ್ಧೂರಿಯಾಗಿ ನೆರವೇರಿದ್ದು, ಬೃಹತ್ ಸೆಟ್ ನಲ್ಲಿ ಅರಳಿದ ಎಲ್ ಇ ಡಿ ಪರದೆ ಮೇಲೆ ಒಂದು ಕಡೆ ನವರಸ ನಾಯಕ ಜಗ್ಗೇಶ್ ತಮ್ಮ ಸಿನಿ ಜರ್ನಿಯ ಅದ್ಭುತ ಘಟನೆಗಳನ್ನು ಅಭಿಮಾನಿಗಳ ಮುಂದೆ ತೆರೆದಿಡಲು ಸಜ್ಜಾಗಿದ್ರೆ, ಇತ್ತ ವಿವಿಧ ದೇಶಗಳ ಕನ್ನಡ ಮನಸ್ಸುಗಳು ಖ್ಯಾತ ನಟನ ಸಿನಿ ಜರ್ನಿಯ ಬಗ್ಗೆ ತಿಳಿದುಕೊಳ್ಳಲು ಕಾತರರಾಗಿದ್ರು. ಸುಮಾರು ಮೂರು ಗಂಟೆಗಳ ಕಾಲ ನಡೆದ ಈ ವರ್ಚ್ಯುಯಲ್ ಕಾರ್ಯಕ್ರಮದಲ್ಲಿ ಜಗ್ಗೇಶ್ ತೋತಾಪುರಿ ಸಿನಿಮಾ, ತಮ್ಮ ಫ್ಯಾಮಿಲಿ, ಕನ್ನಡ ಭಾಷೆ, ಹೋರಾಟ, ಡಾ.ರಾಜ್‌ಕುಮಾರ್‌ ಅವರೊಂದಿಗಿನ ಒಡನಾಟ, ಪುನೀತ್ ರಾಜ್ ಕುಮಾರ್ ಜೊತೆ ಸಾಗಿದ ದಿನಗಳನ್ನು ಮೆಲುಕು ಹಾಕಿದರು.

ಡ್ರೀಮ್ ಮೀಡಿಯಾ ಕೆನಡ ಆಯೋಜಿಸಿದ್ದ ಈ ವರ್ಚ್ಯುಯಲ್ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿದ್ದು ಕಾರ್ಯಕ್ರಮದಲ್ಲಿ ಸಿಂಚನ ಕನ್ನಡ ಬಳಗ, ಕಸ್ತೂರಿ ಕನ್ನಡ ಅಸೋಸಿಯೇಷನ್, ಹ್ಯಾರಿಸ್ಬರ್ಗ್ ಕನ್ನಡ ಕಸ್ತೂರಿ, ಮಲ್ಲಿಗೆ ಇಂಡಿಯಾಪೊಲೀಸ್, ನವೋದಯ, ಬೃಂದಾವನ ಕನ್ನಡ ಕೂಟ-ನ್ಯೂ ಜೆರ್ಸಿ, ಧನಿ ಮೀಡಿಯಾ, ನ್ಯೂಯಾರ್ಕ್ ಕನ್ನಡ ಕೂಟ, ಅಟ್ಲಾಂಟಾದ ನೃಪತುಂಗ, ಸಾಕ್ರಮೆಂಟೋ ಕನ್ನಡ ಸಂಘ ಸೇರಿದಂತೆ ಹಲವಾರು ಕನ್ನಡಿಗರು ನವರಸ ನಾಯಕನ ಜೊತೆ ಮಾತುಕತೆ ನಡೆಸಿ ಸಂತಸಪಟ್ಟಿದ್ದಾರೆ.

ವಿಜಯಪ್ರಸಾದ್ ನಿರ್ದೇಶನದಲ್ಲಿ ಮೂಡಿ ಬರ್ತಿರೋ ‘ತೋತಾಪುರಿ’ ಸಿನಿಮಾ ಬಿಡುಗಡೆಗೆ ಸಕಲ ತಯಾರಿಯಲ್ಲಿದ್ದು, ಈ ನಡುವೆ ಈ ಚಿತ್ರದ ಬಾಗ್ಲು ತೆಗಿ ಮೇರಿ ಜಾನ್ ಸಾಂಗ್ ಆರು ಮಿಲಿಯನ್‌ಗೂ ಅಧಿಕ ವೀಕ್ಷಣೆ ಕಂಡು ಸಖತ್ ವೈರಲ್ ಕೂಡ ಆಗಿದೆ. ಸಾಂಗ್ ಭರ್ಜರಿ ಸಕ್ಸಸ್ ಆಗಿರೋದು, ಈ ಖುಷಿಯನ್ನು ವಿದೇಶಿ ಕನ್ನಡಿಗರು ಸೆಲೆಬ್ರೇಟ್ ಮಾಡಿರೋದು ಇಡೀ ಟೀಂಗೆ ಹೊಸ ಎನರ್ಜಿ ನೀಡಿದೆ. ನಿರ್ಮಾಪಕ ಕೆ.ಎ. ಸುರೇಶ್ ಮೋನಿಫ್ಲಿಕ್ಸ್ ಸ್ಟುಡಿಯೋಸ್ ಹಾಗೂ ಸುರೇಶ್ ಆರ್ಟ್ಸ್ ಬ್ಯಾನರ್ ನಡಿ ಸಿನಿಮಾ ನಿರ್ಮಾಣ ಮಾಡಿದ್ದು, ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಬಿಡುಗಡೆಯಾಗಲು ಸಜ್ಜಾಗಿರುವ ಚಿತ್ರದಲ್ಲಿ ನಾಯಕ ನಟಿಯಾಗಿ ಅದಿತಿ ಪ್ರಭುದೇವ ಮಿಂಚಿದ್ದಾರೆ. ಡಾಲಿ ಧನಂಜಯ್, ಸುಮನ ರಂಗನಾಥ್, ದತ್ತಣ್ಣ, ವೀಣಾ ಸುಂದರ್, ಹೇಮಾದತ್ ಚಿತ್ರದ ತಾರಾ ಬಳಗವೇ ಇದೆ.

Share This Article
Leave a Comment

Leave a Reply

Your email address will not be published. Required fields are marked *