ಕುಂತ್ರು ನಿಂತ್ರು, ಎಲ್ಲೇ ಹೋದ್ರು ‘ತೋತಾಪುರಿ’ ಸಿನಿಮಾ ಹಾಡಿನದ್ದೇ ಗಾನಬಜಾನ

Public TV
2 Min Read

ಸ್ಯಾಂಡಲ್ ವುಡ್ ಅಂಗಳದಲ್ಲಿ ‘ತೋತಾಪುರಿ’ ಸಿನಿಮಾ ಬಝ್ ಜೋರಾಗಿದೆ. ಸಿನಿಮಾ ಬಿಡುಗಡೆಗಾಗಿ ಕಾಯುವಿಕೆಯೂ ಹೆಚ್ಚಾಗಿದೆ. ಅದರಲ್ಲೂ ‘ಬಾಗ್ಲು ತೆಗಿ ಮೇರಿ ಜಾನ್’ ಹಾಡು ಬಿಡುಗಡೆಯಾದ ಮೇಲೆ ‘ತೋತಾಪುರಿ’ ಸಿನಿಮಾ ಮೇಲಿನ ಟಾಕ್ ಸಿಕ್ಕಾಪಟ್ಟೆ ಜೋರಾಗಿದೆ. ಸೋಶಿಯಲ್ ಮೀಡಿಯಾ ಅಂಗಳವಿರಲಿ, ಗಾಂದೀನಗರದ ಗಲ್ಲಿ ಇರಲಿ, ಇನ್ಸ್ಟಾಗ್ರಾಮ್ ರೀಲ್ಸ್ ಇರಲಿ ಎಲ್ಲೆಲ್ಲೂ ‘ಬಾಗ್ಲು ತೆಗಿ ಮೇರಿ ಜಾನ್’ ಹಾಡಿನದ್ದೇ ಕಾರುಬಾರು. ಅದೆಷ್ಟರ ಮಟ್ಟಿಗೆ ಅಂದ್ರೆ ಕೊರೊನಾ ಮೂರನೇ ಅಲೆ ಬಂದು ಚಳಿ ಜ್ವರದಿಂದ ಬಳಲಿ ಬೆಂಡಾಗಿದ್ದವರಿಗೆ ಈ ಹಾಡು ಒಂದ್ ರೀತಿ ರಿಲ್ಯಾಕ್ಸೇಷನ್ ಡೋಸ್ ಕೊಟ್ಟಂಗಿದೆ. ಮಕ್ಕಳಿಂದ ಹಿಡಿದು ಅಜ್ಜ ಅಜ್ಜಿಯರ ಮೊಗದ ಮೇಲೂ ನಗು ತರಿಸುತ್ತಿರುವ ಈ ಹಾಡಿನ ಗಮ್ಮತ್ತೇ ಹಂಗಿದೆ.

ಹೀಗೆ ಎಲ್ಲೆಡೆ ವೈರಲ್ ಆಗಿ, ಟ್ರೆಂಡ್ ಆಗಿ, ಕುಣಿಸುತ್ತಿರುವ, ಕಚಗುಳಿ ಇಡ್ತಿರುವ ಹಾಡಿಗೀಗ ಬರೋಬ್ಬರಿ ಆರು ಲಕ್ಷ ವೀಕ್ಷಣೆ ಕಂಡ ಸಂಭ್ರಮ. ಇದು ಈ ಹಾಡಿನ ತಾಕತ್ತು ಹಾಗೂ ಜನರು ಎಷ್ಟರ ಮಟ್ಟಿಗೆ ಇಷ್ಟಪಟ್ಟಿದ್ದಾರೆ ಅನ್ನೋದಕ್ಕೆ ಸಾಕ್ಷಿ. ಕೆಲವರಂತೂ ಸಾಂಗ್ ಕಂಡು ಸಿನಿಮಾ ಪಕ್ಕಾ ಹಿಟ್ ಎಂದು ಭವಿಷ್ಯ ಕೂಡ ನುಡಿಯುತ್ತಿದ್ದಾರೆ. ಹೀಗೆ ಸೂಪರ್ ಡೂಪರ್ ಹಿಟ್ ಆಗಿರೋ ‘ಬಾಗ್ಲು ತೆಗಿ ಮೇರಿ ಜಾನ್’ ಹಾಡು ಕೇಳೋಕೆ ಮಾತ್ರವಲ್ಲ ನೋಡೋಕೂ ಅಷ್ಟೇ ಚೆಂದ. ಮುರಳಿ ಮಾಸ್ಟರ್ ಕಲರ್ ಫುಲ್ ಕೊರಿಯೋಗ್ರಫಿ, ಕ್ಯಾಚಿ ಲಿರಿಕ್ಸ್, ಅನೂಪ್ ಸೀಳಿನ್ ಸಂಗೀತ, ಗಾಯನ ಎಲ್ಲವೂ ಫುಲ್ ಮಾರ್ಕ್ಸ್ ಗಿಟ್ಟಿಸಿಕೊಂಡಿದೆ. ಒಟ್ನಲ್ಲಿ, ಒಂದು ಹಾಡು ಗೆಲ್ಲೋಕೆ, ಜನ್ರ ಮನ್ಸು ಗೆಲ್ಲೋಕೆ ಏನೆಲ್ಲಾ ಬೇಕೋ ಅದೆಲ್ಲ ಅಚ್ಚುಕಟ್ಟಾಗಿ ಬೆರೆತಿರೋ ಈ ಹಾಡು ತೋತಾಪುರಿ ಸಿನಿಮಾ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿರೋದಂತೂ ಸುಳ್ಳಲ್ಲ. ಇದನ್ನೂ ಓದಿ: ಇಂಟಿಮೇಟ್ ಸೀನ್ ಮಾಡಲು ರಣವೀರ್ ಅನುಮತಿ ಇತ್ತಾ? – ಖಡಕ್ ಉತ್ತರ ಕೊಟ್ಟ ದೀಪಿಕಾ

ವಿಜಯಪ್ರಸಾದ್ ಸಿನಿಮಾ ಅಂದ್ರೆ ಕಾಮಿಡಿ ಕಚಗುಳಿಗೆ ಬರವಿಲ್ಲ, ನವರಸ ನಾಯಕ ಜಗ್ಗೇಶ್ ಇದ್ದ ಮೇಲೇ ನಗುವಿಗೆ ಬ್ರೇಕ್ ಇಲ್ಲ. ಈ ಎರಡು ಕಾಂಬಿನೇಶನ್ ನೀರ್ ದೋಸೆಯಲ್ಲಿ ಕೊಟ್ಟ ನಗುವಿನ ಟಾನಿಕ್ ಮತ್ತೊಮ್ಮೆ ಕೊಡಲು ಸಜ್ಜಾಗಿರುವ ಚಿತ್ರವೇ ‘ತೋತಾಪುರಿ’. ಫುಲ್ ಪ್ಯಾಕ್ಡ್ ಎಂಟಟೈನ್ಮೆಂಟ್ ನೀಡಲು ಟೀಂ ತೋತಾಪುರಿ ಸಜ್ಜಾಗಿದ್ದು ಡಾಲಿ ಧನಂಜಯ, ಸುಮನ್ ರಂಗನಾಥ್, ವೀಣಾ ಸುಂದರ್, ಹೇಮಾದತ್, ದತ್ತಣ್ಣ ಹೀಗೆ ಹಲವು ಸ್ಟಾರ್ ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ. ಇದನ್ನೂ ಓದಿ: ‘ಅಮ್ಮನ ಮಡಿಲು ಸ್ವರ್ಗ’ – ಅಮ್ಮನ ಜೊತೆ ಫೋಟೋ ಶೇರ್ ಮಾಡಿದ ಸಲ್ಲು

ಸ್ಯಾಂಡಲ್ ವುಡ್ ಪ್ಯಾಶನೇಟ್ ಪ್ರೊಡ್ಯುಸರ್ ಕೆ.ಎ. ಸುರೇಶ್ ಈ ಚಿತ್ರವನ್ನು ಮೋನಿಫ್ಲಿಕ್ಸ್ ಸುಡಿಯೋಸ್ ಹಾಗೂ ಸುರೇಶ್ ಆರ್ಟ್ಸ್ ಬ್ಯಾನರ್ ನಡಿ ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಅಷ್ಟೇ ಅಲ್ಲ ಎರಡು ಸೀಕ್ವೆಲ್ ನಲ್ಲಿ ತೆರೆಗೆ ಬರಲು ರೆಡಿಯಾಗಿರುವ ಈ ಚಿತ್ರವನ್ನು ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಬಿಡುಗಡೆ ಮಾಡಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *