‘ಇದು ಅಭಿಮಾನಿ ದೇವ್ರುಗಳಿಗೆ’: ಅಣ್ಣಾವ್ರ ಸ್ಟೈಲಲ್ಲಿ ಕೈಮುಗಿದ ಕೊಹ್ಲಿ – ಆರ್‌ಸಿಬಿ ಫ್ಯಾನ್ಸ್‌ ಥ್ರಿಲ್‌

Public TV
1 Min Read

ಚಂಡೀಗಢ: ಐಪಿಎಲ್‌ (IPL 2025) ಟೂರ್ನಿಯ ಪಂಜಾಬ್‌ ವಿರುದ್ಧದ ಮೊದಲ ಕ್ವಾಲಿಫೈಯರ್‌ ಗೆಲುವನ್ನು ಆರ್‌ಸಿಬಿ (RCB) ಅಭಿಮಾನಿಗಳಿಗೆ ಅರ್ಪಿಸಿದೆ. ‘ಇದು ಅಭಿಮಾನಿ ದೇವ್ರುಗಳಿಗೆ’ ಎಂದು ಆರ್‌ಸಿಬಿ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದೆ.

ಆರ್‌ಸಿಬಿ ಭರ್ಜರಿ ಗೆಲುವು ದಾಖಲಿಸಿ ಫೈನಲ್‌ಗೆ ಎಂಟ್ರಿ ಕೊಟ್ಟ ಸಂದರ್ಭದಲ್ಲಿ ವಿರಾಟ್‌ ಕೊಹ್ಲಿ (Virat Kohli) ಖುಷಿಯಿಂದ ಸ್ಟೇಡಿಯಂನಲ್ಲಿ ಅಭಿಮಾನಿಗಳತ್ತ ಕೈಮುಗಿಯುತ್ತಿರುವ ಫೋಟೊವನ್ನು ಆರ್‌ಸಿಬಿ ಹಂಚಿಕೊಂಡಿದೆ. ಇದರೊಂದಿಗೆ, ‘ಇದು ಅಭಿಮಾನಿ ದೇವ್ರುಗಳಿಗೆ’ ಎಂದು ಕ್ಯಾಪ್ಷನ್‌ ಕೂಡ ಕೊಟ್ಟಿದೆ. ಇದನ್ನೂ ಓದಿ: IPL – ಆರ್‌ಸಿಬಿ ಫೈನಲ್‌ ಪಂದ್ಯಗಳ ಹಾದಿ ಹೇಗಿತ್ತು?

ನಟಸಾರ್ವಭೌಮ ಡಾ. ರಾಜ್‌ಕುಮಾರ್‌ ಅವರ ಸ್ಟೈಲ್‌ನಲ್ಲಿ ವಿರಾಟ್‌ ಕೊಹ್ಲಿ ಅಭಿಮಾನಿಗಳಿಗೆ ಕೈ ಮುಗಿದಿದ್ದಾರೆ. ಅಣ್ಣಾವ್ರ ಶೈಲಿಯಲ್ಲೇ ‘ಅಭಿಮಾನಿ ದೇವ್ರುಗಳಿಗೆ’ ಗೆಲುವನ್ನು ಆರ್‌ಸಿಬಿ ಅರ್ಪಿಸಿದೆ. ಈ ಸನ್ನಿವೇಶ ಫ್ಯಾನ್ಸ್‌ಗೆ ಖುಷಿಕೊಟ್ಟಿದೆ.

ಐಪಿಎಲ್‌ ಟಿ20 ಟೂರ್ನಿಯ ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ವಿರುದ್ಧ ಆರ್‌ಸಿಬಿ ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಆ ಮೂಲಕ ಐಪಿಎಲ್‌ ಇತಿಹಾಸದಲ್ಲಿ ನಾಲ್ಕನೇ ಬಾರಿಗೆ ಆರ್‌ಸಿಬಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಪಂಜಾಬ್‌ 14.1 ಓವರ್‌ಗೆ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡು ಕೇವಲ 101 ರನ್‌ ಗಳಿಸಿತು. ಆರ್‌ಸಿಬಿ 10 ಓವರ್‌ಗೆ ಗುರಿ ತಲುಪಿ ಗೆದ್ದು ಬೀಗಿತು. ಇದನ್ನೂ ಓದಿ: ಐಪಿಎಲ್ ಫೈನಲ್‌ಗೆ ಎಂಟ್ರಿ – ‘ಹಾಕ್ರೊ ಸ್ಟೆಪ್ಪು’ ಅಂತ ಫ್ಯಾನ್ಸ್‌ಗೆ ಹುರಿದುಂಬಿಸಿದ ಆರ್‌ಸಿಬಿ

Share This Article