ದರ್ಶನ್ ಎದುರಲ್ಲೇ ಸಿಕ್ಕಿದ್ದರೂ ಮಾತನಾಡಿಸದೆ ಹೊರಟ ಈ ಸ್ಯಾಂಡಲ್‍ವುಡ್ ನಟಿ!

Public TV
1 Min Read

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಎದುರಲ್ಲೇ ಸಿಕ್ಕಿದ್ದರೂ ನಟಿಯೊಬ್ಬರು ಮಾತನಾಡಿಸದೆ ಹೊರಟುಹೋಗಿದ್ದಾರೆ. ಆಕೆ ಬೇರೆ ಯಾರೂ ಅಲ್ಲ ಸ್ಯಾಂಡಲ್‍ವುಡ್ ಕೆಂಡಸಂಪಿಗೆ ಮಾನ್ವಿತಾ ಹರೀಶ್.

ಮಾನ್ವಿತಾ ಈಗ ನಟಿಯಾಗಿದ್ದು, ಚೌಕ ಚಿತ್ರದಲ್ಲಿ ಅಭಿನಯಿಸಿದ್ದರು ದರ್ಶನ್ ಜೊತೆ ತೆರೆಹಂಚಿಕೊಂಡಿರಲಿಲ್ಲ. ಆದರೆ ಮೈಸೂರಿನಲ್ಲೊಮ್ಮೆ ದರ್ಶನ್‍ರನ್ನು ಮಾನ್ವಿತಾ ನೋಡಿಯೂ ನೋಡದೆ, ಮಾತನಾಡಿಸದೆ ಹೋಗಿದ್ದಾರೆ.

ಮಾನ್ವಿತಾಗೆ ಅಚಾನಕ್ ಆಗಿ ದರ್ಶನ್‍ರನ್ನು ಖಾಸಗಿಯಾಗಿ ಮೀಟ್ ಮಾಡುವ ಅವಕಾಶ ಸಿಕ್ಕಿತ್ತು. ಆದರೂ ಮಾನ್ವಿತಾ ದರ್ಶನ್‍ರನ್ನ ಗುರುತಿಸೋದರಲ್ಲಿ ವಿಫಲರಾಗಿದ್ದಾರೆ.

ಕಳೆದ ಬಾರಿಯ ದಸರಾ ಹಬ್ಬದ ಯುವ ದಸರಾಕ್ಕಾಗಿ ತಾರೆಗಳೆಲ್ಲಾ ಮೈಸೂರಿನ ಸಂದೇಶ್ ಪ್ರಿನ್ಸ್ ಹೊಟೇಲ್‍ನಲ್ಲಿ ವಾಸ್ತವ್ಯ ಹೂಡಿದ್ದರು. ದರ್ಶನ್ ಅದೇ ಹೊಟೇಲ್‍ನಲ್ಲಿ ತಂಗಿರೋದು ಮಾನ್ವಿತಾಗೆ ಗೊತ್ತಿರಲಿಲ್ಲ. ಕಾರ್ಯಕ್ರಮಕ್ಕೆ ಹೋಗುವಾಗ ಹೊಟೇಲ್ ಹೊರಗಡೆಯ ಮೆಟ್ಟಿಲಿನಲ್ಲಿ ದರ್ಶನ್ ತಮ್ಮ ಒಂದಿಷ್ಟು ಸ್ನೇಹಿತರ ಜೊತೆ ಕುಳಿತಿದ್ದರು. ಆಗ ಮಾನ್ವಿತಾ ಯಾರೋ ಕುಳಿತಿರಬಹುದು ಎಂದು ಅಲ್ಲಿ ಗಮನಿಸದೆ ಕಾರ್ ಹತ್ತಿದ್ದಾರೆ.

ನಂತರ ಅಲ್ಲಿಯೇ ಒಬ್ಬರು ಮಾನ್ವಿತಾಗೆ ದರ್ಶನ್ ಇರುವ ವಿಚಾರ ಹೇಳಿದ್ದರು. ಆ ಕೂಡಲೇ ಮಾನ್ವಿತಾ ತಬ್ಬಿಬ್ಬಾಗಿ ಸುತ್ತಲೂ ನೋಡಿದ್ದು, ಕೊನೆಗೆ ಮಾನ್ವಿತಾ, ದರ್ಶನ್‍ರನ್ನು ಹುಡುಕೋದರಲ್ಲಿ ವಿಫಲರಾದಾಗ ಮತ್ತೊಬ್ಬರು ಬಂದು ದರ್ಶನ್ ಮೆಟ್ಟಿಲ ಮೇಲೆ ಕುಳಿತಿದ್ದಾರೆ ಎಂದು ಹೇಳಿದ್ದರು.

ಒಬ್ಬ ಬಿಗ್ ಸ್ಟಾರ್ ನೆಲದ ಮೇಲೆ ಸರಳತೆಯಿಂದ ಕುಳಿತಿದ್ದನ್ನು ನೋಡಿ ಮಾನ್ವಿತಾಗೆ ಆಶ್ಚರ್ಯವಾಗಿತ್ತು. ದರ್ಶನ್ ಬಳಿ ಬಂದು ಒಬ್ಬ ಬಿಗ್ ಸ್ಟಾರ್ ಮೆಟ್ಟಿಲ ಮೇಲೆ ಹೀಗೆ ಕುಳಿತುಕೊಂಡರೆ, ಯಾರ್ ಗುರುತು ಹಿಡೀತಾರೆ. ಯಾಕೆ ಹೀಗೆ ಕುಳಿತ್ತಿದೀರಿ ಎಂದು ಕೇಳಿದ್ದಾರೆ. ಅದಕ್ಕೆ ದರ್ಶನ್, ನಾನು ಹೀಗೇ ಇರೋದು ಎಂದು ಹೇಳಿದ್ದಾರೆ. ನಂತರ ಮಾನ್ವಿತಾ ಮಾತನಾಡಿಸದೇ ಹೋಗಿದ್ದಕ್ಕೆ ಕ್ಷಮೆ ಕೇಳಿ ಅಲ್ಲಿಂದ ಹೊರಟರು. ಈ ವಿಚಾರವನ್ನ ಮಾನ್ವಿತಾ ಇತ್ತೀಚೆಗಷ್ಟೇ ಫೇಸ್‍ಬುಕ್ ಲೈವ್‍ನಲ್ಲಿ ಹಂಚಿಕೊಂಡಿದ್ದಾರೆ.

https://www.youtube.com/watch?v=1au1H9SA_2I

Share This Article
Leave a Comment

Leave a Reply

Your email address will not be published. Required fields are marked *