2,547 ಯೋಧರು ಒಟ್ಟಿಗೆ ಬಸ್ಸಿನಲ್ಲಿ ಶ್ರೀನಗರಕ್ಕೆ ತೆರಳುತ್ತಿದ್ದರು ಯಾಕೆ?

Public TV
2 Min Read

ಶ್ರೀನಗರ: ಪಾಕಿಸ್ತಾನದ ಬೆಂಬಲಿತ ಉಗ್ರ ಸಂಘಟನೆ ಜೈಶ್ ಇ ಮೊಹಮ್ಮದ್ ಉಗ್ರ ಸಂಘಟನೆ ಪುಲ್ವಾಮಾ ದಾಳಿಯ ಹೊಣೆ ಹೊತ್ತು ಕೊಂಡಿರುವ ವಿಚಾರ ಎಲ್ಲರಿಗೂ ತಿಳಿದ ಸಂಗತಿ. ಆದರೆ ಭಾರೀ ಪ್ರಮಾಣದಲ್ಲಿ ದಾಳಿ ನಡೆಸಲು ಉಗ್ರರಿಗೆ ಹೇಗೆ ಅವಕಾಶ ಸಿಕ್ಕಿತು ಎನ್ನುವ ವಿಚಾರ ಈಗ ಬೆಳಕಿಗೆ ಬಂದಿದೆ.

2,547 ಮಂದಿ ಯೋಧರು ತಮ್ಮ ರಜೆಯನ್ನು ಕಳೆದು ಮರಳಿ ಕರ್ತವ್ಯಕ್ಕೆ ಹಾಜರಾಗಲು ಆಗಮಿಸಿದ್ದರು. ಈ ಅವಧಿಯಲ್ಲಿ ಜಮ್ಮುವಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯೋಧರ ಬದಲಾವಣೆ ಆಗುತ್ತಿತ್ತು. ಸೇನೆಯಲ್ಲಿ ಇದು ಸಾಮಾನ್ಯ ಪ್ರಕ್ರಿಯೆ ಆದ ಕಾರಣ ಯೋಧರನ್ನು ಹೊತ್ತ ಸುಮಾರು 78 ಬಸ್ಸುಗಳು ಹೈವೇನಲ್ಲಿ ಸಾಗಿತ್ತು. ಬೆಳಗ್ಗೆ 3:30ಕ್ಕೆ ಜಮ್ಮುವಿನಿಂದ ಹೊರಟಿದ್ದ ಬಸ್ಸುಗಳು ಅವಂತಿಪೊರದ ಬಳಿ ಮಧ್ಯಾಹ್ನ 3:30ಕ್ಕೆ ಬಂದಾಗ ಸೂಸೈಡ್ ಬಾಂಬರ್ ಅದಿಲ್ ಅದಮ್ ದಾರ್ ಸ್ಫೋಟಕಗಳನ್ನು ತುಂಬಿಸಿಕೊಂಡು ಯೋಧರ ವಾಹನಕ್ಕೆ ಡಿಕ್ಕಿ ಹೊಡೆದಿದ್ದ.

ಮಂಗಳವಾರ ಮತ್ತು ಬುಧವಾರ ಜಮ್ಮು ಶ್ರೀನಗರ ಹೆದ್ದಾರಿಯಲ್ಲಿ ವಿಪರೀತ ಮಂಜು ಇದ್ದ ಕಾರಣ ರಸ್ತೆ ಸಂಪರ್ಕವನ್ನು ಬಂದ್ ಮಾಡಲಾಗಿತ್ತು. ಗುರುವಾರ ಬೆಳಗ್ಗೆ ಸೈನಿಕರು ಬಸ್ಸಿನ ಮೂಲಕ ತೆರಳುತ್ತಿದ್ದಾರೆ ಎನ್ನುವ ಖಚಿತ ಮಾಹಿತಿಯನ್ನು ಪಡೆದು ಈ ದಾಳಿ ನಡೆಸಲಾಗಿದೆ. 2,547 ಸೈನಿಕರು ಶ್ರೀನಗರಕ್ಕೆ ಹೆದ್ದಾರಿಯಲ್ಲೇ ತೆರಳುತ್ತಿದ್ದಾರೆ ಎನ್ನುವ ಖಚಿತ ಮಾಹಿತಿ ಉಗ್ರರಿಗೆ ಸಿಕ್ಕಿದ್ದು ಹೇಗೆ ಎನ್ನುವ ಪ್ರಶ್ನೆಗೆ ತನಿಖೆಯಲ್ಲಿ ಉತ್ತರ ಸಿಗಬೇಕಿದೆ.

22 ವರ್ಷದ ಅದಿಲ್ ದಾರ್ 2017ದಲ್ಲಿ 12ನೇ ತರಗತಿಯ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿ ಘಟನೆ ನಡೆದ 10 ಕಿಮೀ ದೂರದಲ್ಲಿ ವಾಸವಾಗಿದ್ದ. ಈ ಕಾರಣಕ್ಕೆ ಜೈಶ್ ಸಂಘಟನೆ ಈತನಿಗೆ ದಾಳಿ ನಡೆಸಲು ಜವಾಬ್ದಾರಿ ನೀಡಿತ್ತು.

ಉಗ್ರನಿಗೆ ಮೊದಲಿಗೆ ಯಾವುದೇ ಪೈಶಾಚಿಕ ಕೃತ್ಯ ಒಪ್ಪಿಸಿರಲಿಲ್ಲ. ಈತನನು ಉಗ್ರ ಸಂಘಟನೆಯ `ಸಿ’ ಗ್ರೇಡ್‍ನಲ್ಲಿಡಲಾಗಿತ್ತು ಅಂತ ತಿಳಿದು ಬಂದಿದೆ. ಗುರುವಾರ ಈತ 350 ಕೇಜಿ ಸ್ಫೋಟಕ ತುಂಬಿದ್ದ ಸ್ಕಾರ್ಪಿಯೋ ಕಾರನ್ನು ಸೇನಾ ವಾಹನಕ್ಕೆ ಗುದ್ದಿಸಿ ಫಿದಾಯಿನ್ ದಾಳಿ ನಡೆಸಿ ನಾನೀಗ ಸ್ವರ್ಗಕ್ಕೆ ಹೋಗ್ತೇನೆ ಎಂದು ಡೈಲಾಗ್ ಹೊಡೆದಿದ್ದ.

ಸ್ಫೋಟದ ತೀವ್ರಗೆ ಸುಮಾರು 10 ಕಿ.ಮೀ. ಶಬ್ದ ಕೇಳಿತ್ತು. ಸುತ್ತಮುತ್ತ ಪ್ರದೇಶದಲ್ಲಿ ಭೂಕಂಪದ ಅನುಭವವಾಗಿತ್ತು ಅಂತ ಸ್ಥಳೀಯರು ಹೇಳಿದ್ದಾರೆ. ಸ್ಫೋಟಕ್ಕೆ ಆರ್ ಡಿಎಕ್ಸ್ ಅಲ್ಲ, ಉತ್ಕೃಷ್ಟ ಯೂರಿಯಾ ಬಳಸಲಾಗಿದೆ ಎನ್ನುವ ವಿಚಾರ ತಿಳಿದು ಬಂದಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *