ಗೌರಿ ಲಂಕೇಶ್ ಹತ್ಯೆಯ ಬಳಿಕ ಅಂದು ರವಿ ಬೆಳಗೆರೆ ಹೇಳಿದ್ದು ಹೀಗೆ

Public TV
2 Min Read

ಬೆಂಗಳೂರು: ನನಗೆ ಎಲ್ಲಿ ಇರಲಿ ಎಂಬುದರ ಬಗ್ಗೆ ಗೊಂದಲವಿದೆ. ಬೆಂಗಳೂರು ಸೇಫ್ ಅಲ್ವಾ, ಇತ್ತೀಚೆಗೆ ನಾನು ಬೆಂಗಳೂರಿನಿಂದ ಹೊರ ಹೋದಾಗ ಏನೋ ನೆನಪಾಗಿ ಮತ್ತೆ ಬಂದೆ. ಬಂದ ಮೇಲೆ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾಗಿರುವುದು ನನಗೆ ಗೊತ್ತಾಯಿತು ಎಂದು ಹೇಳುತ್ತಾ ತಮ್ಮ ಮಾತನ್ನು ಆರಂಭಿಸಿದ್ದರು.

ಗೌರಿ ಜಗಳಗಂಟಿ, ಬಾಯಿ ಬಡಕಿ ಎಲ್ಲಾ ಸರಿ. ಆದರೂ ಅಷ್ಟು ಪುಟ್ಟ ಗುಬ್ಬಿಯನ್ನು ಏಳು ಗುಂಡು ಹಾಕಿ ಕೊಲೆ ಮಾಡಲಾಗಿದೆ. ಇದಕ್ಕಿಂತ ಬರ್ಬರತೆ ಯಾವುದೂ ಇಲ್ಲ ಅಂತ ಅನ್ನಿಸುತ್ತದೆ. ನಮ್ಮ ಮುಂದೆ ಕಾನೂನುಗಳಿವೆ, ಕೇಸ್ ಹಾಕಬಹುದು ಅದನ್ನು ಬಿಟ್ಟು ಕೊಲೆ ಮಾಡಿಸಬಾರದು. ಒಂದೂವರೆ ತಿಂಗಳ ಹಿಂದೆ ಸರ್ಕಾರ ನನ್ನನ್ನು ಒಂದು ವರ್ಷ ಜೈಲಿನಲ್ಲಿಡಬೇಕು ಎಂದು ಆದೇಶ ಹೊರಡಿಸಿತ್ತು. ನನ್ನ ಮೇಲೆ ಆಪಾದನೆಯಿದೆ ಸರಿ. ನಾನು ಅವರ ಕೈಗೂ ಸಿಗಲಿಲ್ಲ, ಕೇಸಿಗೆ ತಡೆಯನ್ನು ತಂದಿದ್ದೇನೆ ಎಂದು ಅಂತಾ ಹೇಳಿದರು.

ಇದನ್ನೂ ಓದಿ: ರಣಭೂಮಿಯಲ್ಲಿ ಇರುವಾಗ ಶತ್ರುವಿನ ತೊಡೆ ಮೇಲೆ ಕುಳಿತರೆ ಅದು ಪಾತಿವ್ರತ್ಯೆಯೇ: ಬೆಳಗೆರೆ ಪೋಸ್ಟ್ ಸುತ್ತ ಅನುಮಾನದ ಹುತ್ತ

ಕೇಸಿಗೆ ತಡೆ ತದ್ದಿದ್ದರಿಂದ ಇಡೀ ಪತ್ರಿಕಾ ಸಮುದಾಯ ಒಂದಾಯಿತು. ಈ ವೇಳೆ ನಾವುಗಳು ಗೌರಿ ಹತ್ಯೆಯನ್ನು ಖಂಡಿಸಬೇಕು ಮತ್ತು ತನಿಖೆಗೆ ಆಗ್ರಹಿಸಬೇಕು. ಗೌರಿಯನ್ನು ನಕ್ಸಲೈಟ್ಸ್ ನವರು ಕೊಂದರು ಎಂದು ಪತ್ರಿಕೆಯೊಂದರಲ್ಲಿ ಪ್ರಕಟವಾಗಿತ್ತು. ನಮ್ಮ ಮನೆಯಲ್ಲಿರುವ ಒಂದು ಪುಟಾಣಿ ಹುಡಗನ್ನು ಅಥವಾ ಹುಡುಗಿಯನ್ನು ಕೊಲ್ಲಲಾಗುತ್ತಾ? ಗೌರಿ ಯಾರಿಗೂ ಅಪಾಯಕಾರಿ ಆಗಿರಲಿಲ್ಲ ಹಾಗು ಆರ್ಥಿಕವಾಗಿ ಅವಳು ತುಂಬಾ ತೊಂದರೆಯಲ್ಲಿದ್ದಳು. ನನ್ನ ಹತ್ರ ಆದರೂ ಚಿಲ್ಲರೆ ಪಲ್ಲರೆ ಒಂದಿಷ್ಟೂ ದುಡ್ಡು ಇದೆ. ಆದರೆ ಅವಳ ಹತ್ತಿರ ಹಣವಿರಲಿಲ್ಲ. ಪಿ.ಲಂಕೇಶ್ ಸಹ ಯಾರಿಗೂ ಬ್ಲ್ಯಾಕ್ ಮೇಲ್ ಮಾಡುತ್ತಿರಲಿಲ್ಲ. ಗೌರಿನೂ ಮಾಡುತ್ತಿರಲಿಲ್ಲ, ನಾನು ಮಾಡುವುದಿಲ್ಲ ಹಾಗಿರುವಾಗ ನಮ್ಮನ್ನು ಯಾವ ಕಾರಣಕ್ಕೆ ಕೊಲ್ಲುತ್ತೀರಿ, ಮನಸ್ಸಿಗೆ ಬಹಳ ಬೇಜಾರಾಗುತ್ತದೆ. ಗೌರಿ ಸಾವಿನ ಸುದ್ದಿ ನನಗೆ ವೈಯಕ್ತಿಕವಾಗಿ ತುಂಬಾ ನೋವು ತಂದಿದೆ. ನಾನು ಹೇಳೋದು ಗೌರಿ ಹತ್ಯೆಯನ್ನು ಖಂಡಿಸಿ, ನಮ್ಮ ಮನೆಯಲ್ಲಿ ಯಾರಾದರೂ ಸತ್ತರೂ ಆವಾಗ ನಾವು ಸಂತೋಷ ಆಗಲ್ಲ, ದುಃಖ ಆಗುತ್ತದೆ. ಹಾಗಾಗಿ ಗೌರಿ ಹತ್ಯೆಯನ್ನು ನಾವೆಲ್ಲರೂ ಖಂಡಿಸೋಣ.

ಇದನ್ನೂ ಓದಿ: ರವಿ ಬೆಳಗೆರೆ ಅಫಿಡವಿಟ್ಟಿನಲ್ಲಿ ಏನಿದೆ?

ಗೌರಿ ಹತ್ಯೆಯನ್ನು ಬಲಪಂಥಿಯರೇ ಮಾಡಿದ್ದಾರೆ ಅಥವಾ ಎಡಪಂಥಿಯರೇ ಮಾಡಿದ್ದಾರೆ ಎನ್ನುವ ನಿರ್ಧಾರಕ್ಕೆ ಯಾಕೆ ಬರ್ತಿರಿ. ಈ ಕುರಿತು ತನಿಖೆ ನಡೆದ ಬಳಿಕ ಒಮ್ಮತದ ನಿರ್ಧಾರಕ್ಕೆ ಬರಬಹುದು. ನಮ್ಮ ರಾಜ್ಯದಲ್ಲಿ ಪತ್ರಕರ್ತರು ಬದುಕೋದು ಕಷ್ಟ ಅಂತಾದರೆ ಮುಂದೆ ಹೇಗೆ ಎಂಬ ಪ್ರಶ್ನೆ ನನ್ನಲ್ಲಿ ಮೂಡುತ್ತಿದೆ ಅಂತಾ ಅಂದ್ರು.

ಗೌರಿ ಹತ್ಯೆಯನ್ನು ಖಂಡಿಸಿದ್ದ ರವಿ ಬೆಳಗೆರೆ ಈಗ ತನ್ನ ಸಹೋದ್ಯೋಗಿ ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡುವ ಮೂಲಕ ಅಂದರ್ ಆಗಿದ್ದಾರೆ.

ಆರಂಭದಲ್ಲಿ ಗೌರಿ ಹತ್ಯೆ ಆರೋಪದಲ್ಲಿ ರವಿ ಬೆಳಗೆರೆ ಹೆಸರು ಕೇಳಿ ಬಂದಿತ್ತು. ಆದರೆ ಗೃಹ ಸಚಿವ ರಾಮಲಿಂಗಾ ರೆಡ್ಡಿ ಗೌರಿ ಹತ್ಯೆಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

https://www.youtube.com/watch?v=KALlPbFU_4A

https://www.youtube.com/watch?v=LcWKbHyIN9s

https://www.youtube.com/watch?v=Wi0k683HMs8

https://www.youtube.com/watch?v=GYM3LyxWFbA

https://www.youtube.com/watch?v=Bpd6CdRHXYY

Share This Article
Leave a Comment

Leave a Reply

Your email address will not be published. Required fields are marked *