ʻಕಿಲ್ಲರ್‌ʼ ಚಿತ್ರಕ್ಕೆ ರೆಹಮಾನ್‌ ಮ್ಯೂಸಿಕ್‌ – ಗನ್‌ ಮಾದರಿಯ ಗಿಟಾರ್‌ ಹಿಡಿದು ಪೋಸ್‌ ಕೊಟ್ಟ ಸಂಗೀತ ದಿಗ್ಗಜ!

Public TV
1 Min Read

– 20 ವರ್ಷಗಳ ಬಳಿಕ ಮತ್ತೆ ಒಂದಾದ ನಿರ್ದೇಶಕ ಸೂರ್ಯ, ರೆಹಮಾನ್‌

ಮಿಳು ಮತ್ತು ತೆಲುಗು ಚಿತ್ರರಂಗದ ಖ್ಯಾತ ಖಳ ನಾಯಕ ಎಸ್.ಜೆ. ಸೂರ್ಯ (S.J Surya) ಮತ್ತೆ ಚಿತ್ರ ನಿರ್ದೇಶನಕ್ಕೆ ಇಳಿದಿದ್ದಾರೆ. ಅವರ ಚಿತ್ರಕ್ಕೆ ಕಿಲ್ಲರ್ ಎಂದು ಹೆಸರಿಡಲಾಗಿದ್ದು, ಇತ್ತೀಚೆಗೆ ಚಿತ್ರದ ಆರಂಭಕ್ಕೆ ಪೂಜೆ ಸಹ ನೆರವೇರಿಸಲಾಗಿದೆ.

ಕಿಲ್ಲರ್‌ ಚಿತ್ರಕ್ಕೆ (Killer Movie) ಎ.ಆರ್‌ ರೆಹಮಾನ್‌ (A.R Rahman) ಸಂಗೀತ ಇರಲಿದೆ. ಈ ಮೂಲಕ 20 ವರ್ಷಗಳ ಬಳಿಕ ರೆಹಮಾನ್‌, ಸೂರ್ಯ ಅವರ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಚಿತ್ರತಂಡ ಬಿಡುಗಡೆ ಮಾಡಿದ ಪೋಸ್ಟರ್‌ನಲ್ಲಿ “ನಾವು ಒಟ್ಟಿಗೆ ಸೇರಿದಾಗ, ಹಿಮಾಲಯವು ನಮ್ಮ ಕೈಗೆ ಬರುತ್ತದೆ. ಇದು ಪ್ರೀತಿಯಿಂದ ಒಂದಾದ ಹೃದಯ” ಎಂಬ ಸಾಲಿದ್ದು, ಅದರಲ್ಲಿ ರೆಹಮಾನ್‌ ಗನ್‌ ಮಾದರಿಯ ಗಿಟಾರ್‌ ಹಿಡಿದು ಪೋಸ್‌ ಕೊಟ್ಟಿದ್ದಾರೆ. ಇದನ್ನೂ ಓದಿ: ಕಾಂತಾರ ಚಾಪ್ಟರ್‌-1 ಪೋಸ್ಟರ್‌ ವಿಶೇಷತೆ ಏನು? – ರಿಷಬ್ ಶೆಟ್ಟಿ ಹುಟ್ಟುಹಬ್ಬಕ್ಕೆ ಬಿಗ್‌ ಅಪ್ಡೇಟ್‌

ಶ್ರೀ ಗೋಕುಲಂ ಮೂವೀಸ್ ನಿರ್ಮಾಣದ ಚಿತ್ರದಲ್ಲಿ ಪ್ರೀತಿ ಅಸ್ರಾನಿ ಚಿತ್ರದ ನಾಯಕಿಯಾಗಿ ನಟಿಸಲಿದ್ದಾರೆ. ಇತರ ಪಾತ್ರವರ್ಗದ ಸದಸ್ಯರ ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸುವ ನಿರೀಕ್ಷೆಯಿದೆ. ಈ ಚಿತ್ರದ ಚಿತ್ರೀಕರಣ ಭಾರತ ಮತ್ತು ಮೆಕ್ಸಿಕೋದಲ್ಲಿ ನಡೆಯಲಿದೆ.

ಸೂರ್ಯ ಅವರು ವಿಶೇಷವಾಗಿ ಅನೇಕ ಸ್ಟಾರ್ ಹೀರೋಗಳಿಗೆ ಖಳನಾಯಕನಾಗಿ ನಟಿಸಿದ್ದಾರೆ. ಅವರು ನಟಿಸಿದ ಹೆಚ್ಚಿನ ಚಿತ್ರಗಳು ಯಶಸ್ವಿ ಚಿತ್ರಗಳಾಗಿವೆ. ಸೂರ್ಯ ನಿರ್ದೇಶನದ ನ್ಯೂ, ಅನ್ಬೆ ಆರುಯಿರೆ ಚಿತ್ರಕ್ಕೆ ರೆಹಮಾನ್ ಸಂಗೀತ ಸಂಯೋಜಿಸಿದ್ದರು. ಇದನ್ನೂ ಓದಿ: ನಾನು ಬಾಸ್ಕೆಟ್‌ಬಾಲ್ ಪ್ಲೇಯರ್, ಸ್ಪೋರ್ಟ್ಸ್‌ಗೆ ಹೈಟ್ ಮ್ಯಾಟರ್ ಆಗಲ್ಲ: ರಮ್ಯಾ

Share This Article