ಉಡುಪಿ ಹಿಸ್ಟರಿಯಲ್ಲೇ ಇದೊಂದು ಖತರ್ನಾಕ್ ಕ್ರೈಂ- ತಪ್ಪಿಸಿಕೊಳ್ಳಲು ಮಾಡಿದ್ದ ಪ್ಲಾನ್‍ನಿಂದಲೇ ಸಿಕ್ಕಿಬಿತ್ತು ಜೋಡಿ

Public TV
2 Min Read

ಉಡುಪಿ: ತಡರಾತ್ರಿ ಕಾರು ಧಗಧಗನೆ ಸುಟ್ಟು ಕರಕಲಾಗಿತ್ತು. ಕಾರಿನೊಳಗೆ ಪೂರ್ಣ ಸುಟ್ಟ ಅಸ್ಥಿಪಂಜರವೊಂದು ಬೆಳಗ್ಗಿನ ಜಾವ ಕಾಣಿಸಿಕೊಂಡಿತ್ತು. ಏನೇನೂ ಕ್ಲೂಗಳೆ ಇಲ್ಲದ ಕೇಸನ್ನು ಉಡುಪಿಯ ಪೊಲೀಸರು 24 ಗಂಟೆಯೊಳಗೆ ತನಿಖೆ ಮಾಡಿದ್ದಾರೆ. ತನಿಖೆಯಾಗುತ್ತಾ ಹೊರಬಂದ ಸತ್ಯಕ್ಕೆ ಇಡೀ ಉಡುಪಿ ಶಾಕ್ ಗೆ ಒಳಗಾಗಿದೆ.

ಸುಟ್ಟು ಕರಕಲಾದ ಕಾರು. ಕಾರಿನೊಳಗೆ ತಲೆಬುರುಡೆ ಎಲುಬು. ಪುಟ್ಟದಾದರೂ ಕ್ಲೂ ಸಿಗುತ್ತಾ ಅಂತ ಹುಡುಕಾಡುತ್ತರೋ ಪೊಲೀಸರು. ಇದು ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಹೇನಬೇರು ಎಂಬ ಕಂಡುಬಂದ ದೃಶ್ಯ. ಮಂಗಳವಾರ ತಡರಾತ್ರಿ ಈ ಘಟನೆ ನಡೆದಿದ್ದು ನಿನ್ನೆ ಬೆಳಕಿಗೆ ಬಂದಿದೆ. ಕಾರಿನಲ್ಲಿದ್ದ ಶವ ಸಂಪೂರ್ಣ ಸುಟ್ಟು ಕರಕಲಾಗಿದ್ದರಿಂದ ಅದು ಪುರುಷನದ್ದೇ ಅಥವಾ ಮಹಿಳೆಯ ಮೃತದೇಹವೇ ಎಂಬುದು ಗುರುತು ಸಿಕ್ಕಿರಲಿಲ್ಲ. ಕಾರಿನ ಚಾಸಿ ನಂಬರ್ ತೆಗೆದು ನೋಡಿದಾಗ ಇದು ಕಾರ್ಕಳದ ಮಾಳ ನಿವಾಸಿ ಸದಾನಂದ ಶೇರಿಗಾರ್ ಎಂಬವರ ಕಾರು ಎಂದು ಗೊತ್ತಾಗಿದೆ.

ತನಿಖೆಗಾಗಿ ಉಡುಪಿ ಎಸ್ಪಿ ವಿಷ್ಣುವರ್ಧನ್ ಪೊಲೀಸರ 2 ತಂಡಗಳನ್ನು ರಚಿಸಿದ್ರು. ಬೈಂದೂರು, ಕಾರ್ಕಳ ಪೊಲೀಸರು ಅಲರ್ಟ್ ಆಗಿ ತನಿಖೆ ಮಾಡಿದಾಗ ಸಾಸ್ತಾನ ಟೋಲ್‍ನಲ್ಲಿ ಸುಟ್ಟ ಕಾರು ಮಂಗಳವಾರ ರಾತ್ರಿ ಪಾಸ್ ಆಗಿದ್ದು, ಕಾರಿನಿಂದ ಮಹಿಳೆಯೊಬ್ಬಳು ಇಳಿದು ಟೋಲ್ ಹಣ ಕಟ್ಟಿದ್ದು ಗೊತ್ತಾಗಿದೆ. ಆಗ ಆ ಮಹಿಳೆಯನ್ನು ಕೊಲೆ ಮಾಡಲಾಗಿದೆ ಎಂದು ಸ್ಟೋರಿ ಟರ್ನ್ ಪಡೆದುಕೊಳ್ಳುತ್ತದೆ. ಆದರೆ ಪೊಲೀಸರ ತನಿಖೆಯಲ್ಲಿ ಸದಾನಂದ ಮತ್ತು ಶಿಲ್ಪಾ ಸತ್ತಿಲ್ಲ ಬದುಕಿದ್ದಾರೆ ಎಂದು ಗೊತ್ತಾಗುತ್ತದೆ. ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಪೊಲೀಸರಿಗೆ ಶಾಕ್ ಕಾದಿತ್ತು. ಇದನ್ನೂ ಓದಿ: 15 ದಿನದಲ್ಲಿ ಆರೋಪ ಮುಕ್ತನಾಗಿ ಬರುತ್ತೇನೆ ಎಂದ ಈಶ್ವರಪ್ಪ – ಪಾರದರ್ಶಕ ತನಿಖೆಗೆ ರಾಜ್ಯಪಾಲರ ಮೊರೆಹೋದ ಸಂತೋಷ್ ಪಾಟೀಲ್ ಕುಟುಂಬ

ಸದಾನಂದ ಪರವಾನಗಿ ಪಡೆದ ಸರ್ವೇಯರ್. ಕೆಲವು ದಿನಗಳ ಹಿಂದೆ ಭೂ ದಾಖಲೆಗಳನ್ನು ಫೋರ್ಜರಿ ಮಾಡಿದ್ದ. ಕಾರ್ಕಳ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೋರ್ಟ್‍ನಲ್ಲಿ ಚಾರ್ಜ್‍ಶೀಟ್ ದಾಖಲಾಗಿತ್ತು. ವಿಚಾರಣೆ, ಕೊರ್ಟ್ ನೋಟಿಸ್. ಅರೆಸ್ಟ್ ವಾರೆಂಟ್ ಕೂಡ ಆಗಿತ್ತು. ಬಂಧನದ ಭೀತಿಯಲ್ಲಿದ್ದ ಸದಾನಂದ ಮತ್ತವನ ಗೆಳತಿ ಶಿಲ್ಪಾ ಖತರ್ನಾಕ್ ಪ್ಲಾನ್ ಮಾಡಿದ್ದಾರೆ. ತನ್ನ ವಯಸ್ಸಿನ ವ್ಯಕ್ತಿಯಾದ ಕಾರ್ಕಳದ ಆನಂದ ದೇವಾಡಿಗನನ್ನು ಆರಿಸಿದ್ದ ಸದಾನಂದ ಕಾರಿನಲ್ಲಿ ಕರೆದುಕೊಂಡು ಹೋಗಿದ್ದ. ನಿದ್ರೆ ಬರಿಸುವ ಮಾತ್ರೆ ಜೊತೆ ಮದ್ಯ ಕುಡಿಸಿ ಆನಂದ ದೇವಾಡಿಗನ ಸಹಿತವಾಗಿ ಕಾರನ್ನು ಸುಟ್ಟು ಹಾಕಿದ್ರು. ಇದನ್ನೂ ಓದಿ: ಇತಿಹಾಸದ ಪುಟ ಸೇರಲಿದೆ ನೂರು ವರ್ಷಗಳ ಇತಿಹಾಸವುಳ್ಳ ಸಂಸತ್ ಭವನ – ಕೊನೆಯ ಅಧಿವೇಶನಕ್ಕೆ ಸಿದ್ಧತೆ

ಸದಾನಂದನ ಕೊಲೆಯಾಗಿದೆ. ಸದಾನಂದ ಆತ್ಮಹತ್ಯೆ ಮಾಡಿಕೊಂಡ ಎಂದು ಬಿಂಬಿಸಿ ಎಸ್ಕೇಪ್ ಆಗಿಬಿಡುವುದು ಇಬ್ಬರ ಪ್ಲಾನ್ ಆಗಿತ್ತು. ಆದರೆ ಚಾಣಕ್ಷ ಪೊಲೀಸರು ಘಟನೆ ನಡೆದ 24 ಗಂಟೆಯೊಳಗೆ ಸತ್ಯ ಪತ್ತೆ ಹಚ್ಚಿದ್ದಾರೆ. ಬೈಂದೂರಿನಿಂದ ಎಸ್ಕೇಪ್ ಆಗಲು ಇವರಿಗೆ ಸಹಾಯ ಮಾಡಿದ್ದಾರೆ ಎಂಬ ಆರೋಪದಡಿ ಮತ್ತಿಬ್ಬರನ್ನು ವಶಕ್ಕೆ ಪಡೆಯಲಾಗಿದೆ. ತನಿಖೆ ಬಳಿಕ ಇನ್ನಷ್ಟು ವಿಚಾರಗಳು ಬೆಳಕಿಗೆ ಬರಲಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *