ರಾಜ್ಯದಲ್ಲಿ ದೀಪಾವಳಿ ಧಮಾಕ, ಕಾಂಗ್ರೆಸ್‌ನಲ್ಲಿ ಕ್ರಾಂತಿ : ವಿಜಯೇಂದ್ರ

By
2 Min Read

– ಅಕ್ಟೋಬರ್ ಕ್ರಾಂತಿ ಖಚಿತ – ಆರ್ ಅಶೋಕ್

ಬೆಂಗಳೂರು: ಬಿಜೆಪಿ ನಾಯಕರು (BJP Leaders) ರಾಜ್ಯ ಸರ್ಕಾರದ ಭವಿಷ್ಯ ನುಡಿದಿದ್ದಾರೆ. ಮುಂಬರುವ ದೀಪಾವಳಿ (Deepavali) ಹಬ್ಬ ರಾಜ್ಯ ಸರ್ಕಾರದಲ್ಲಿ ದೊಡ್ಡ ಧಮಾಕವನ್ನು ಸೃಷ್ಟಿ ಮಾಡಲಿದೆ ಎಂದು ಹೇಳುವ ಮೂಲಕ ರಾಜ್ಯ ಸರ್ಕಾರದ ಕುರ್ಚಿಕ ಕದನಕ್ಕೆ ಮುನ್ನುಡಿ ಬರೆದಿದ್ದಾರೆ.

ಸದ್ಯ ರಾಜ್ಯ ರಾಜಕೀಯದಲ್ಲಿ ಕುರ್ಚಿ ಸದ್ದು ಬಹಳ ಜೋರಾಗಿ ಕೇಳುತ್ತಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವಾಗಲೇ ಪವರ್ ಶೇರಿಂಗ್ ಚರ್ಚೆಯಾಗಿತ್ತು. ಅದರಂತೆ‌ ಸಿದ್ದರಾಮಯ್ಯ ಎರಡೂವರೆ ವರ್ಷ ಬಳಿಕ ತಮ್ಮ ಅಧಿಕಾರ ಬಿಟ್ಟು ಕೊಡ್ತಾರೆ ಎಂದು ಚರ್ಚೆಯಾಗಿತ್ತು. ಆದ್ರೆ ದಿನ ಉರುಳಿದಂತೆ ಇದೀಗ ಅದೇ ವಿಚಾರಕ್ಕೆ ಸರ್ಕಾರದಲ್ಲಿ ದೊಡ್ಡ ಸಂಘರ್ಷ ನಡೆಯಲಾರಂಬಿಸಿದೆ‌. ಇದನ್ನೂ ಓದಿ: ಕೋಲಾರದ ಮಹಿಳೆಯಲ್ಲಿ ವಿಶ್ವದಲ್ಲೇ ಅಪರೂಪದ ರಕ್ತದ ಗುಂಪು ಪತ್ತೆ

ಇನ್ನೇನು ಸಿಎಂ ಬದಲಾವಣೆ ನಿಶ್ಚಿತ ಎಂದು ವಿಪಕ್ಷಗಳು ಬೊಬ್ಬೆ ಹೊಡೆಯುತ್ತಿದ್ದು, ಸಿಎಂ ಕುರ್ಚಿ ಬಿಡಲಿಲ್ಲ ಅಂದರೆ ದೀಪಾಳಿ ಧಮಾಕಾ ಫಿಕ್ಸ್ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ(BY Vijayendra) ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಿಎಂ ಡಿಸಿಎಂ ನಡುವೆ ವ್ಯತ್ಯಾಸ ನೋಡ್ತಿದ್ದೇವೆ. ಮೈಸೂರಿನ ಸಾಧನಾ ಸಮಾವೇಶದಲ್ಲಿ ಶಿವಕುಮಾರ್‌ (DK Shivakumar) ಏಕಾಂಗಿ ನಡೆದು ಬಂದು ರಾತ್ರೋ ರಾತ್ರಿ ದೆಹಲಿಗೆ ಹೋದ್ರು. ಈ ವೇಳೆ ಸಿಎಂ ವಿಚಲಿತರಾಗಿ ಶಾಸಕರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಲು ಇದೀಗ ಸರಣಿ ಸಭೆಗಳನ್ನು ನಡೆಸುವ ಮೂಲಕ ಪ್ರಯತ್ನ ಮಾಡ್ತಿದ್ದಾರೆ. ಆದರೆ ಕಾಂಗ್ರೆಸ್‌ನಲ್ಲಿ ಎಲ್ಲವೂ‌ ಸರಿಯಿಲ್ಲ ಸಿಎಂ ಡಿಸಿಎಂ ನಡುವೆ ಕುರ್ಚಿ ಕಾಳಗ ನಡೆಯುತ್ತಿದೆ‌. ರಷ್ಯಾ ಮತ್ತು ಉಕ್ರೇನ್ ಯುದ್ಧ ನಿಂತರೂ ಸಿಎಂ‌‌ ಸಿದ್ದರಾಮಯ್ಯ (Siddaramaiah) ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಯುದ್ದ ನಿಲೋದಿಲ್ಲ. ರಾಜ್ಯದ ಜನರಿಗೆ ದೀಪಾಳಿ‌ಯ ಧಮಾಕ ಫಿಕ್ಸ್ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜೇಯಂದ್ರ ಟೀಕಿಸಿದರು. ಇದನ್ನೂ ಓದಿ: ಡಿಕೆಶಿ ಭರವಸೆ ನೀಡಿದ್ದಾರೆ, ನಾನೇ ಮುಂದಿನ KMF ಅಧ್ಯಕ್ಷ: ನಂಜೇಗೌಡ

ಆರ್ ಅಶೋಕ್ ಸಹ ಅಕ್ಟೋಬರ್ ಕ್ರಾಂತಿ ಫಿಕ್ಸ್ ಎಂದು ಹೇಳಿದ್ದಾರೆ. ಸಿಎಂ ತಮ್ಮ ಕುರ್ಚಿ ಭದ್ರತೆಗೆ ಇದೀಗ ಮುಂದಾಗಿದ್ದಾರೆ. ಜೊತೆಗೆ ಡಿಕೆಶಿಗೆ ಪಾಠ ಕಲಿಸಲು‌ ಮುಂದಾಗಿರೋ ಸಿಎಂ, ಅವರನ್ನು ಶಾಸಕರ ಸಭೆಯಿಂದ ಹೊರಗಿಟ್ಟಿದ್ದಾರೆ. ಶಾಸಕರ ಬೆಂಬಲವಿಲ್ಲದ ಡಿಕೆಶಿ ಸಭೆಗೆ ಯಾಕೆ ಅನ್ನೋ‌ ತಿರ್ಮಾನಕ್ಕೆ ಸಿಎಂ‌ ಬಂದಿದ್ದಾರೆ ಅಂತ ಅಶೋಕ್ ಸಿಎಂ ಡಿಸಿಎಂ ಇಬ್ಬರನ್ನೂ ಕುಟುಕಿದರು.

Share This Article