ನನ್ನ ಮೊದಲ ಮೊಹಬ್ಬತ್ ರಾಹುಲ್ ದ್ರಾವಿಡ್ ಎಂದ ಬಾಲಿವುಡ್ ನಟಿ

Public TV
1 Min Read

ಮುಂಬೈ: ಭಾರತದ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಆಟವಾಡುವ ಶೈಲಿಗೆ ಹಲವು ಹುಡುಗಿಯರು ಬೌಲ್ಡ್ ಆಗಿದ್ದಾರೆ. ಅದೇ ರೀತಿ ಬಾಲಿವುಡ್ ನಟಿ ರಿಚಾ ಚಡ್ಡಾ ಅವರು ಕೂಡ ತಮ್ಮ ಮೊದಲ ಲವ್ ದ್ರಾವಿಡ್ ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

‘ದಿ ವಾಲ್’ ಎಂದು ಗುರುತಿಸಿಕೊಂಡಿರುವ ದ್ರಾವಿಡ್ 90ರ ದಶಕದಲ್ಲಿ ಅವರು ಅನೇಕ ದೇಸಿ ಹುಡುಗಿಯರ ಹೃದಯವನ್ನು ಕದ್ದಿದ್ದರು. ಚಡ್ಡಾ ಅವರು ತಮ್ಮ ಮುಂಬರುವ ಕ್ರಿಕೆಟ್ ಗೆ ಸಂಬಂಧಿಸಿದ ‘ಇನ್ಸೈಡ್ ಎಡ್ಜ್’ ಸಿನಿಮಾದ ಪ್ರಮೋಷನ್ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ರಾಹುಲ್ ದ್ರಾವಿಡ್ ತನ್ನ ಮೊದಲ ಪ್ರೀತಿ ಎಂದು ಬಹಿರಂಗಪಡಿಸಿದ್ದಾರೆ. ತಾನು ಎಂದಿಗೂ ಕ್ರಿಕೆಟ್‍ನ ದೊಡ್ಡ ಅಭಿಮಾನಿಯಾಗಿರಲಿಲ್ಲ. ಆದರೆ ಟೆಲಿವಿಷನ್‍ನಲ್ಲಿ ಕ್ರಿಕೆಟ್ ಪಂದ್ಯವನ್ನು ಪ್ರಸಾರ ಮಾಡಿದಾಗ ನಾನು ಟಿವಿ ಅಂಟಿಕೊಂಡು ಕುಳಿತುಕೊಳ್ಳುತ್ತಿದ್ದೆ. ಅದಕ್ಕೆ ಕಾರಣ ರಾಹುಲ್ ದ್ರಾವಿಡ್ ಎಂದು ಹೇಳಿಕೊಂಡರು. ಇದನ್ನೂ ಓದಿ: ಮದುವೆ ವಾರ್ಷಿಕೋತ್ಸವಕ್ಕೆ ಪತ್ನಿಗೆ ವಿಶೇಷವಾಗಿ ವಿಶ್ ಮಾಡಿದ ಧ್ರುವ

ನಾನು ಚಿಕ್ಕ ವಯಸ್ಸಿನಿಂದ ಕ್ರಿಕೆಟ್‍ನ ದೊಡ್ಡ ಅಭಿಮಾನಿಯಾಗಿರಲಿಲ್ಲ. ನನ್ನ ಸಹೋದರ ಕ್ರಿಕೆಟ್ ಆಡುತ್ತಿದ್ದರು. ನಾನು ಟಿವಿಯಲ್ಲಿ ಕ್ರಿಕೆಟ್ ಅನ್ನು ನೋಡುತ್ತಿದ್ದೆ. ಆದರೆ ದ್ರಾವಿಡ್ ಅವರ ಆಟವನ್ನು ಇಷ್ಟಪಟ್ಟು ನೋಡುತ್ತಿದ್ದೆ. ಅದಕ್ಕೆ ನನ್ನ ಮೊದಲ ಮೊಹಬ್ಬತ್ ರಾಹುಲ್ ದ್ರಾವಿಡ್ (ನನ್ನ ಮೊದಲ ಪ್ರೀತಿ ರಾಹುಲ್ ದ್ರಾವಿಡ್) ಎಂದು ಹೇಳಿದ್ದಾರೆ.

ಐಸಿಸಿ ಟಿ20 ವಿಶ್ವಕಪ್ ಮುಕ್ತಾಯದೊಂದಿಗೆ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಅವರ ಅಧಿಕಾರಾವಧಿಯು ಅಂತ್ಯಗೊಂಡಿದೆ. ಈಗ ದ್ರಾವಿಡ್ ಅವರು ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಈಗ ದ್ರಾವಿಡ್ ಕೋಚ್ ಆಗಿರುವ ಹಿನ್ನೆಲೆಯಲ್ಲಿ ನಾನು ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದೇನೆ ಎಂದು ರಿಚಾ ಚಡ್ಡಾ ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮದುವೆಗೆ ವರ ಗೈರು – ಮನೆ ಮುಂದೆ ಧರಣಿ ಕುಳಿತ ವಧು

Share This Article
Leave a Comment

Leave a Reply

Your email address will not be published. Required fields are marked *