ಆನಂದ್ ಮಹೀಂದ್ರಾ ಥ್ರೋಬ್ಯಾಕ್ ಫೋಟೋ ವೈರಲ್

By
2 Min Read

ಮುಂಬೈ: ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಅವರ ಥ್ರೋಬ್ಯಾಕ್ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡಿದೆ.

ಇಂದು ಬಿಸ್ಸನೆಸ್ ಫೀಲ್ಡ್ ನಲ್ಲಿ ಆನಂದ್ ಮಹೀಂದ್ರಾ ಪ್ರಸಿದ್ಧಿಯನ್ನು ಹೊಂದಿದ್ದಾರೆ. ಆದರೆ ಹಿಂದೆ ಆನಂದ್ ಅವರು ಸಿನಿಮಾ ನಿರ್ಮಾಪಕರಾಗಲು ಬಯಸಿದ್ದರು ಎಂಬುದು ಅನೇಕರಿಗೆ ತಿಳಿದಿಲ್ಲ. ಈಗ ಆನಂದ್ ಮಹೀಂದ್ರಾ ಅವರಿಗೆ 66 ವರ್ಷವಾಗಿದ್ದು, ಇಂದು ಮಧ್ಯಾಹ್ನ ಟ್ವಿಟ್ಟರ್ ನಲ್ಲಿ ಅಪರೂಪದ ಥ್ರೋಬ್ಯಾಕ್ ಫೋಟೋವನ್ನು ಹಂಚಿಕೊಂಡು ತಮ್ಮ ಹಿಂದಿನ ಕನಸಿನ ಬಗ್ಗೆ ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ: ಅಮೆರಿಕದಿಂದಲೇ ಕಾನ್ಪುರದಲ್ಲಿ ನಡೆಯುತ್ತಿದ್ದ ಕಳ್ಳತನವನ್ನು ತಡೆದ ಮನೆಯವರು

ಆನಂದ್ ಅವರು ಯುವಕರಾಗಿದ್ದಾಗ ತೆಗೆದ ಬ್ಲಾಕ್ ಅಂಡ್ ವೈಟ್ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾಗಿದ್ದು, ಆ ಫೋಟೋವನ್ನು ನೋಡಿದ ಆನಂದ್ ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ಫೋಟೋ ಬಗ್ಗೆ ಟ್ವಿಟ್ಟರ್ ನಲ್ಲಿ ಹಂಚಿಕೊಂಡ ಆನಂದ್ ಅವರು, ಈ ಫೋಟೋವನ್ನು ಹಲವು ವರ್ಷಗಳ ಹಿಂದೆ ಮಧ್ಯಪ್ರದೇಶದ ಇಂದೋರ್ ಬಳಿಯ ದೂರದ ಹಳ್ಳಿಯಲ್ಲಿ 16 ಎಂಎಂ ಕ್ಯಾಮರಾದಲ್ಲಿ ತೆಗೆಯಾಲಾಗಿತ್ತು. ನಾನು ಆಗ ಕಾಲೇಜಿನಲ್ಲಿ ಸಿನಿಮಾ ನಿರ್ಮಾಣದ ತರಬೇತಿಯನ್ನು ಪಡೆಯುತ್ತಿದ್ದೆ. ಈ ಫೋಟೋವನ್ನು ಇಂಧೋರ್ ಬಳಿಯ ದೂರದ ಹಳ್ಳಿಯಲ್ಲಿ ಸಾಕ್ಷ್ಯಚಿತ್ರವನ್ನು ಚಿತ್ರೀಕರಿಸುವಾಗ ತೆಗೆಯಲಾಗಿದೆ ಎಂದು ಬಹಿರಂಗಪಡಿಸಿದ್ದಾರೆ.

ಟ್ವಿಟರ್ ಬಳಕೆದಾರರು ಆನಂದ್ ಅವರಿಗೆ, ‘ಶಾಲೆ/ಕಾಲೇಜು ದಿನಗಳಲ್ಲಿ ನಿಮ್ಮ ಮಹತ್ವಾಕಾಂಕ್ಷೆ’ ಏನೆಂದು ಕೇಳಿದಾಗ ಅವರು ಉತ್ತರಿಸಿದ್ದು, ಇದಕ್ಕೆ ಉತ್ತರಿಸುವುದು ಸುಲಭ. ನಾನು ಚಲನಚಿತ್ರ ನಿರ್ಮಾಪಕನಾಗಲು ಬಯಸಿದ್ದೆ ಮತ್ತು ಕಾಲೇಜಿನಲ್ಲಿ ಸಿನಿಮಾ ಕುರಿತು ಅಧ್ಯಯನವನ್ನು ಸಹ ಮಾಡಿದ್ದೇನೆ. ನಾನು ನನ್ನ ಪ್ರಬಂಧವನ್ನು ’77 ಕುಂಭಮೇಳ’ ಸಿನಿಮಾ ಬಗ್ಗೆ ಮಾಡಿದ್ದೆ ಎಂದು ಉತ್ತರಿಸಿದ್ದಾರೆ.

ಆನಂದ್ ಅವರು ಆಗಾಗ್ಗೆ ತಮ್ಮ ಸಿನಿಮಾ ಮೇಲಿನ ಪ್ರೀತಿಯ ಬಗ್ಗೆ ಮಾತನಾಡುತ್ತಾರೆ. 2017 ರಲ್ಲಿ, ಟ್ವಿಟ್ಟರ್ ನಲ್ಲಿ ಅವರು, ತಮ್ಮ ಪ್ರಬಂಧದ ಸಿನಿಮಾವಾದ ‘ಕುಂಭಮೇಳ’ ಚಿತ್ರೀಕರಣದ ಬಗ್ಗೆ ಹಂಚಿಕೊಂಡಿದ್ದರು. ಇದನ್ನೂ ಓದಿ: ಜಾರ್ಖಂಡ್ ಮೂಲದ ಮೂವರು ಸೋಂಕಿತರು ಮಡಿಕೇರಿಯಿಂದ ಪರಾರಿ

2014 ರ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ನಾನು ಚಲನಚಿತ್ರ ನಿರ್ಮಾಣವನ್ನು ಏಕೆ ಆರಿಸಿಕೊಂಡೆ ಎಂದು ಜನರು ನನ್ನನ್ನು ಆಗಾಗ್ಗೆ ಕೇಳುತ್ತಾರೆ. ಅದಕ್ಕೆ ಉತ್ತರ ಇಂದು ಕೊಡುತ್ತೇನೆ. ನನ್ನ ಸ್ವಂತ ಜಾಗವನ್ನು ನಾನು ಕೆತ್ತಬಲ್ಲೆ ಎಂದು ಸಾಬೀತುಪಡಿಸಲು ಚಲನಚಿತ್ರವು ನನಗೆ ಒಂದು ಅದ್ಭುತ ವೇದಿಕೆಯಾಗಿದೆ. ಸಿನಿಮಾ ನನ್ನ ಸಾಮಥ್ರ್ಯವನ್ನು ಹೆಚ್ಚಿಸಲು ವಿಶ್ವಾಸವನ್ನು ನೀಡಿದೆ. ನನ್ನ ಜೀವನದುದ್ದಕ್ಕೂ ನನ್ನನ್ನು ಉತ್ತಮ ಸ್ಥಾನದಲ್ಲಿ ನಿಲ್ಲಿಸಿದೆ ಎಂದು ಹೇಳಿಕೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *