INDIA ಒಕ್ಕೂಟಕ್ಕೆ ಅಶೋಕ ಚಕ್ರವಿಲ್ಲದ ತ್ರಿವರ್ಣ ಧ್ವಜ ಬಳಕೆಗೆ ಚಿಂತನೆ

By
2 Min Read

ನವದೆಹಲಿ: ಇದೇ ಆಗಸ್ಟ್ 31 ರಂದು INDIA ಒಕ್ಕೂಟದ 3ನೇ ಸಭೆ ಮುಂಬೈನಲ್ಲಿ ನಡೆಯಲಿದ್ದು, ಈ ಸಭೆಯಲ್ಲಿ ಒಕ್ಕೂಟಕ್ಕೆ ಸಾಮಾನ್ಯ ಧ್ವಜ (National Flag) ಹೊಂದುವ ಬಗ್ಗೆ ಚರ್ಚೆ ನಡೆಯಲಿದೆ ಎನ್ನಲಾಗಿದೆ.

ಮೂಲಗಳ ಪ್ರಕಾರ, ಅಶೋಕ ಚಕ್ರವಿಲ್ಲದ ತ್ರಿವರ್ಣ ಧ್ವಜವನ್ನು ಆಯ್ಕೆ ಮಾಡುವ ಬಗ್ಗೆ ಗಂಭೀರ ಚಿಂತನೆ ನಡೆದಿದೆ. ಒಕ್ಕೂಟದಲ್ಲಿರುವ ಎಲ್ಲ ಪಕ್ಷಗಳು ತಮ್ಮದೇ ಆದ ಚಿಹ್ನೆ ಮತ್ತು ಧ್ವಜವನ್ನ ಹೊಂದಿವೆ. ಆದರೆ ಒಕ್ಕೂಟಕ್ಕೆ ಒಂದು ಸಾಮಾನ್ಯ ಧ್ವಜ ಹೊಂದಿವ ಬಗ್ಗೆ ಚರ್ಚೆ ನಡೆದಿದೆ. ಒಕ್ಕೂಟದ ಹೆಸರು INDIA ಆಗಿರುವ ಹಿನ್ನೆಲೆ ಅದಕ್ಕೆ ಪೂರಕ ಎನ್ನುವಂತೆ ರಾಷ್ಟ್ರಧ್ವಜವನ್ನೇ ಹೋಲುವ ಧ್ವಜದ ಮೇಲೆ ಆಸಕ್ತಿ ಹೆಚ್ಚಿದೆ. ಇದನ್ನೂ ಓದಿ: ಯುವತಿ ಪ್ರಕರಣ ವಾಪಸ್ ಪಡೆಯದ್ದಕ್ಕೆ ಆಕೆಯ ತಾಯಿಯನ್ನೇ ವಿವಸ್ತ್ರಗೊಳಿಸಿ ಥಳಿಸಿದ್ರು!

ಮುಂಬೈ ಸಭೆಯ ನಂತರ ಸೆಪ್ಟೆಂಬರ್‌ನಲ್ಲಿ ರಾಷ್ಟ್ರವ್ಯಾಪಿ ರ‍್ಯಾಲಿಗಳು ಪ್ರಾರಂಭವಾಗಲಿದ್ದು, ಬಿಜೆಪಿಯೇತರ ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ 6 ರಿಂದ 7 ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ. ರ‍್ಯಾಲಿಗಳು ಮತ್ತು ಸಭೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನ ವೈಯಕ್ತಿಕ ಗುರಿಯಾಗಿಸುವ ಬದಲು ಸರ್ಕಾರದ ನೀತಿಗಳು, ಜಾತಿ ಆಧಾರಿತ ಜನಗಣತಿ, ಹಣದುಬ್ಬರ, ನಿರುದ್ಯೋಗ ಮತ್ತು ಇತರ ಸಾಮಾಜಿಕ ಕಾಳಜಿಗಳಂತಹ ವಿವಿಧ ವಿಷಯಗಳ ಮೇಲೆ ಟಾರ್ಗೆಟ್‌ ಮಾಡಲು ನಿರ್ಧರಿಸಿದೆ. ಇದನ್ನೂ ಓದಿ: ಬಾಲಕಿಯ ಮೇಲೆ ಸರ್ಕಾರಿ ಅಧಿಕಾರಿ ಅತ್ಯಾಚಾರ – ಸ್ವಯಂ ದೂರು ದಾಖಲಿಸಿಕೊಂಡ ದೆಹಲಿ ಹೈಕೋರ್ಟ್

ವಿರೋಧ ಪಕ್ಷಕ್ಕೆ ಅಧ್ಯಕ್ಷರು, ಒಬ್ಬರು ಮುಖ್ಯ ಸಂಯೋಜಕರು ಮತ್ತು 4 ರಿಂದ 5 ಪ್ರಾದೇಶಿಕ ಸಂಯೋಜಕರನ್ನ ನೇಮಿಸುವ ಪ್ರಸ್ತಾವನೆ ಇದೆ ಎಂದು ಮೂಲಗಳು ತಿಳಿಸಿವೆ. ಉತ್ತರ ಪ್ರದೇಶದ 80 ಲೋಕಸಭಾ ಸ್ಥಾನಗಳ ಪೈಕಿ 40 ಸ್ಥಾನಗಳಿಗೆ ಬೇಡಿಕೆಯಿಟ್ಟಿರುವ ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ನಿಲುವಿನ ಬಗ್ಗೆ ಮುಂಬೈನಲ್ಲಿ ನಡೆಯುವ ಸಭೆಯಲ್ಲಿ ವಿರೋಧ ಪಕ್ಷದ ನಾಯಕರು ಚರ್ಚಿಸಲಿದ್ದಾರೆ. ಕೆಲವು ಸಣ್ಣ ಪಕ್ಷಗಳನ್ನ ವಿರೋಧ ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಲಿದೆ.

INDIA ಒಕ್ಕೂಟದ ಮೊದಲ ಸಭೆ ಜೂನ್‌ನಲ್ಲಿ ಪಾಟ್ನಾದಲ್ಲಿ ನಡೆದರೆ, 2ನೇ ಸಭೆ ಜುಲೈ ಮಧ್ಯದಲ್ಲಿ ಬೆಂಗಳೂರಿನಲ್ಲಿ ನಡೆಯಿತು. 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವನ್ನ (NDA) ಎದುರಿಸಲು 26 ಪಕ್ಷಗಳು ಒಟ್ಟಾಗಿ ಇಂಡಿಯನ್ ನ್ಯಾಷನಲ್ ಡೆವಲಪ್‌ಮೆಂಟ್ ಇನ್‌ಕ್ಲೂಸಿವ್ ಅಲಯನ್ಸ್‌ (INDIA) ಒಕ್ಕೂಟ ಸ್ಥಾಪಿಸಿಕೊಂಡಿವೆ.

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್