ಎಟಿಎಂ ಯಂತ್ರವನ್ನು ಕದ್ದು ತಳ್ಳು ಗಾಡಿಯಲ್ಲಿ ಹೊತ್ತೊಯ್ದ ಕಳ್ಳರು!

2 Min Read

ಬೆಳಗಾವಿ: ತಳ್ಳುಗಾಡಿ ಬಳಸಿ ಎಟಿಎಂ ಯಂತ್ರವನ್ನು (ATM Machine) ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ಬೆಳಗಾವಿ (Belagavi) ತಾಲೂಕಿನ ಹೊಸ ವಂಟಮೂರಿ ಗ್ರಾಮದಲ್ಲಿ ನಡೆದಿದೆ.

ಡಿ. 2ರ ನಸುಕಿನ ಜಾವ 3 ಗಂಟೆಯ ವೇಳೆಗೆ ರಾಷ್ಟ್ರೀಯ ಹೆದ್ದಾರಿ 48ರ ಪಕ್ಕದಲ್ಲಿರುವ ಇಂಡಿಯಾ ಒನ್ ಎಟಿಎಂಗೆ ಖದೀಮರು ಕನ್ನ ಹಾಕಿದ್ದಾರೆ. ಮೂರು ಜನ ಕಳ್ಳರು ಮುಖಕ್ಕೆ ಮಾಸ್ಕ್ ಕಟ್ಟಿಕೊಂಡು ಗ್ಯಾಸ್ ಕಟ್ಟರ್‌ ಯಂತ್ರವನ್ನು ಹೊತ್ತುಕೊಂಡು ಬಂದಿದ್ದಾರೆ. ಸರ್ವಿಸ್ ರಸ್ತೆಯಲ್ಲಿ ಕಾಮಗಾರಿ ನಡೆಯುತ್ತಿರುವ ಕಾರಣ ಕಳ್ಳರ ವಾಹನದಲ್ಲಿ ಬಾರದೇ ಅಲ್ಲೇ ಪಕ್ಕದಲ್ಲೇ ಇದ್ದ ತಳ್ಳು ಗಾಡಿ ತಂದು ಎಟಿಎಂ ಮುಂದೆ ನಿಲ್ಲಿಸಿದ್ದಾರೆ.

ಒಳ ಹೋಗಿ ಮೊದಲು ಸೈರನ್‌ಗೆ ಬ್ಲ್ಯಾಕ್‌ ಸ್ಪ್ರೇ ಹೊಡೆದಿದ್ದಾರೆ. ಸೈರನ್‌ ಬಂದ್‌ ಆಗಿರುವುದನ್ನು ದೃಢಪಡಿಸಿದ ಬಳಿಕ ಗ್ಯಾಸ್ ಕಟ್ಟರ್‌ ಬಳಸಿ ಯತ್ರವಿದ್ದ ಬಾಕ್ಸ್ ಓಪನ್ ಮಾಡಿದ್ದಾರೆ. ನಂತರ ತಳ್ಳು ಗಾಡಿಯಲ್ಲಿ ಯತ್ರವನ್ನು ಇಟ್ಟುಕೊಂಡು ಇನ್ನೂರು ಮೀಟರ್ ತಳ್ಳಿಕೊಂಡು ವಾಹನದತ್ತ ಬಂದಿದ್ದಾರೆ. ಬಳಿಕ ಎಟಿಎಂ ಯಂತ್ರವನ್ನು ವಾಹನದ ಒಳಗಡೆ ಹಾಕಿ ಮತ್ತೆ ಆ ತಳ್ಳು ಗಾಡಿಯನ್ನು ಎಟಿಎಂ ಮುಂದೆ ನಿಲ್ಲಿಸಿ ಖದೀಮರು ಎಸ್ಕೇಪ್ ಆಗಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಸೋಕೋ ಟೀಮ್ ಸ್ಥಳಕ್ಕೆ ಭೇಟಿ ನೀಡಿ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಇದನ್ನೂ ಓದಿ:  ಸರ್ಕಾರಿ ಶಾಲೆಗಳ LKG-UKG ಮಕ್ಕಳಿಗೂ ಬಿಸಿಯೂಟ ಯೋಜನೆ ಅನುಷ್ಠಾನಕ್ಕೆ ಸರ್ಕಾರ ಆದೇಶ

ಎಟಿಎಂ ಯಂತ್ರದ ಬೆಲೆ 2 ಲಕ್ಷ ರೂ. ಆಗಿದ್ದರೆ ಯಂತ್ರದ ಒಳಗಡೆ 1.9 ಲಕ್ಷ ರೂ. ಹಣವಿತ್ತು. ಕಾಕತಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಶೋಧ ನಡೆಸುತ್ತಿದ್ದಾರೆ. ವಂಟಮೂರಿ ಗ್ರಾಮದ ಸುತ್ತಮುತ್ತಲು ಹುಡುಕಾಟ ನಡೆಸುತ್ತಿದ್ದಾರೆ. ಒಡೆಯಲಾಗದ ಕಾರಣ ಕಳ್ಳತನ ನಡೆದ ಆಣತಿ ದೂರದಲ್ಲಿಯೇ ಎಟಿಎಂ ಯಂತ್ರ ಎಸೆದು ಹೋಗಿದ್ದಾರೆ.

ಬೆಳಗಾವಿಯಲ್ಲಿ ಇದೇ ಮೊದಲ ಬಾರಿಗೆ ಈ ರೀತಿ ಎಟಿಎಂ ಹಣದ ಮಷೀನ್ ಕಳ್ಳತನ ಮಾಡಿದ್ದ ಪ್ರಕರಣ ಬೆಳಕಿಗೆ ಬಂದಿದ್ದು ಜನರು ಕೂಡ ಬೆಚ್ಚಿ ಬೀದಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೇ ನೀಡಿರುವ ನಗರ ಪೊಲೀಸ್ ಆಯುಕ್ತ ಭೂಷನ್ ಬೋರಸೆ, ಕಳ್ಳರು ಕಟ್ಟರ್‌ ಮೂಲಕ ಯಂತ್ರ ಕೊರೆಯಲು ಯತ್ನಿಸಿದ್ದಾರೆ. ಯಂತ್ರ ತೆರೆಯದ ಕಾರಣ ಅರ್ಧ ಕಿ.ಮೀ ದೂರದಲ್ಲಿ ಎಸೆದು ಹೋಗಿದ್ದಾರೆ ಎಂದು ತಿಳಿಸಿದ್ದಾರೆ.

Share This Article