ಚಿನ್ನಾಭರಣ, ಹಣ ದೋಚಿ ಸಿಕ್ಕಿಬೀಳುವ ಭಯದಲ್ಲಿ ಡಿವಿಆರ್ ಹೊತ್ತೊಯ್ದ ಕಳ್ಳರು!

Public TV
1 Min Read

ದಾವಣಗೆರೆ: ಒಂದೇ ದಿನ ಎರಡು ಮನೆಗಳನ್ನು ಕಳ್ಳರು ದೋಚಿದ ಘಟನೆ ಚನ್ನಗಿರಿ (Channagiri) ತಾಲೂಕಿನ ಕುಕ್ಕವಾಡ ಗ್ರಾಮದಲ್ಲಿ ನಡೆದಿದೆ. ಚಿನ್ನಾಭರಣ, ಹಣ ಕದ್ದು ಸಿಕ್ಕಿಬೀಳುವ ಭಯದಲ್ಲಿ ಸಿಸಿಟಿವಿ ಡಿವಿಆರ್‌ನ್ನು ಸಹ ಕಳ್ಳರು ಕದ್ದು ಪರಾರಿಯಾಗಿದ್ದಾರೆ.

ಗ್ರಾಮದ ಸುವರ್ಣಮ್ಮ ಹನುಮೇಗೌಡ ಮತ್ತು ಸರ್ಕಾರಿ ಶಾಲಾ ಶಿಕ್ಷಕ ಮಧು ಎಂಬುವವರ ಮನೆಯ ಬೀಗವನ್ನು ಒಡೆದು ಕಳ್ಳತನ ಮಾಡಲಾಗಿದೆ. ಸುವರ್ಣಮ್ಮ ಹನುಮನೇಗೌಡ ಅವರ ಮನೆಯಲ್ಲಿ 3.80 ಲಕ್ಷ ರೂ. ಮೌಲ್ಯದ 40 ಗ್ರಾಂ ಮಾಗಲ್ಯ ಸರ, 15 ಗ್ರಾಂ ಚಿನ್ನದ ಸರ ಹಾಗೂ ಮನೆಯಲ್ಲಿ ಅವಳವಡಿಸಿದ್ದ ಸಿಸಿಟಿವಿ ಕ್ಯಾಮೆರಾ ಧ್ವಸ ಮಾಡಿ ಡಿವಿಆರ್ ತೆಗೆದುಕೊಂಡು ಹೋಗಿದ್ದಾರೆ. ಇದನ್ನೂ ಓದಿ: ಅಂಗನವಾಡಿಯಲ್ಲಿ ಆಟವಾಡುತ್ತಾ ಕುಸಿದು ಬಿದ್ದು 5ರ ಬಾಲಕಿ ಸಾವು

ಶಿಕ್ಷಕ ಮಧು ಅವರ ಮನೆಯಲ್ಲಿ 1.15 ಲಕ್ಷ ರೂ. ನಗದು 57 ಸಾವಿರ ರೂ. ಮೌಲ್ಯದ 6.5 ಗ್ರಾಂ ಚಿನ್ನದ ರಿಂಗ್, ಬೆಳ್ಳಿಯ ಬ್ರಾಸ್ಲೈಟ್, ಎರಡು ವಾಚ್‍ಗಳನ್ನು ಕಳ್ಳರು ದೋಚಿಕೊಂಡು ಪರಾರಿಯಾಗಿದ್ದಾರೆ.

ಸ್ಥಳಕ್ಕೆ ಪೊಲೀಸರು ಹಾಗೂ ಬೆರಳಚ್ಚು ತಜ್ಞರು, ಶ್ವಾನದಳ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಸಂಬಂಧ ಹದಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಇಡೀ ದೇಶದ ಪೋಷಕರನ್ನು ನೀವು ಅವಮಾನಿಸಿದ್ದೀರಿ – ಯೂಟ್ಯೂಬರ್ ರಣವೀರ್ ಹೇಳಿಕೆಗೆ ಸುಪ್ರೀಂ ಕೆಂಡಾಮಂಡಲ

Share This Article