ಕಲಬುರಗಿ ಜ್ಯುವೆಲರಿ ಶಾಪ್ ದರೋಡೆ ಕೇಸ್ – 30 ರೂ. ಫೋನ್ ಪೇ ಮಾಡಿ ಸಿಕ್ಕಿಬಿದ್ದ ಖದೀಮರು

Public TV
1 Min Read

ಕಲಬುರಗಿ: ಚಿನ್ನದ ಅಂಗಡಿಯಲ್ಲಿ (Jewellery Shop) ದರೋಡೆ ಪ್ರಕರಣದ ಖದೀಮರು ಹೋಟೆಲ್‌ನಲ್ಲಿ 30 ರೂ. ಫೋನ್ ಪೇ ಮಾಡಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿರಿರುವ ಘಟನೆ ಕಲಬುರಗಿಯಲ್ಲಿ (Kalaburagi) ನಡೆದಿದೆ.

ಈ ಪ್ರಕರಣ ಸಂಬಂಧ ಕಲಬುರಗಿ ಪೊಲೀಸರು (Kalaburagi Police) ಪಶ್ಚಿಮ ಬಂಗಾಳದಲ್ಲಿ ಇಬ್ಬರು ದರೋಡೆಕೋರರನ್ನು ಬಂಧಿಸಿದ್ದಾರೆ. ಹೌದು, ಖದೀಮರು ದರೋಡೆಗೂ ಮುನ್ನ ಶಾಪ್‌ನ ಪಕ್ಕದಲ್ಲಿದ್ದ ಹೋಟೆಲ್‌ನಲ್ಲಿ 30 ರೂ. ಫೋನ್ ಪೇ ಮಾಡಿದ್ದರು. ಇದನ್ನೂ ಓದಿ: ಹಾಡಹಗಲೇ ಜ್ಯುವೆಲರಿ ಶಾಪ್‌ಗೆ ನುಗ್ಗಿ ದರೋಡೆ – ಗನ್ ತೋರಿಸಿ 3 ಕೆಜಿ ಚಿನ್ನಾಭರಣ ದೋಚಿದ ಗ್ಯಾಂಗ್

ಬಳಿಕ ಜ್ಯುವೆಲರಿ ಶಾಪ್‌ಗೆ ಹೋಗಿ 820 ಗ್ರಾಂ ಚಿನ್ನ ದರೋಡೆ ಮಾಡಿ ಎಸ್ಕೇಪ್ ಆಗಿದ್ದರು. ಫೋನ್ ಪೇ (Phone Pay) ಜಾಡು ಹಿಡಿದ ಕಲಬುರಗಿ ಪೊಲೀಸರು ಪ್ರಕರಣದ ಇಬ್ಬರು ಪ್ರಮುಖ ಆರೋಪಿಗಳನ್ನ ಬಂಧಿಸಿದ್ದಾರೆ. ಇದೀಗ ಪ್ರಕರಣದ ಇತರೆ ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಇದನ್ನೂ ಓದಿ: ಪಾಟ್ನಾ ಆಸ್ಪತ್ರೆಯಲ್ಲಿ ಐಸಿಯುಗೆ ನುಗ್ಗಿ ಗ್ಯಾಂಗ್‌ಸ್ಟರ್‌ ಹತ್ಯೆ – ಐವರು ಆರೋಪಿಗಳು ಕೋಲ್ಕತ್ತಾದಲ್ಲಿ ಅರೆಸ್ಟ್‌

ಏನಿದು ಪ್ರಕರಣ?
ಜು. 11ರಂದು ಮಧ್ಯಾಹ್ನದ ಹೊತ್ತಿಗೆ ನಗರ ಸರಾಫ್ ಬಜಾರ್‌ನಲ್ಲಿರುವ ಜ್ಯುವೆಲರಿ ಶಾಪ್‌ಗೆ ಗ್ರಾಹಕರ ಸೋಗಿನಲ್ಲಿ ಖದೀಮರಿಬ್ಬರು ಬಂದಿದ್ದರು. ಶಾಪ್ ನುಗ್ಗಿ ಮಾಲೀಕನ ಕೈ, ಕಾಲುಗಳನ್ನು ಕಟ್ಟಿ, ಬಾಯಿಗೆ ಟೇಪ್ ಹಾಕಿ 820 ಗ್ರಾಂ ಚಿನ್ನ ಕದ್ದು ಎಸ್ಕೇಪ್ ಆಗಿದ್ದರು.

Share This Article