ಕ್ಯಾಂಟರ್‌ನಲ್ಲಿ ಬಂದು 1,500 ಎಳನೀರು ಕದ್ದ ಖದೀಮರು

Public TV
2 Min Read

ಬೆಂಗಳೂರು: ರಾತ್ರೋರಾತ್ರಿ ಟಾಟಾ ಏಸ್ ವಾಹನದಲ್ಲಿ ಬಂದ ಖದೀಮರು ರಸ್ತೆ ಬದಿಯಲ್ಲಿ ಇಟ್ಟಿದ್ದ ಬರೋಬ್ಬರಿ 1,500 ಎಳನೀರನ್ನು (Coconut) ಕದ್ದುಕೊಂಡು ಹೋಗಿರುವ ಘಟನೆ ಜಯನಗರ (Jayanagar) ರಾಷ್ಟ್ರೀಯ ವಿದ್ಯಾಲಯ ಮೆಟ್ರೋ ನಿಲ್ದಾಣದ ಬಳಿ ನಡೆದಿದೆ.

ಆಗಸ್ಟ್ 7ರಂದು ಮುಂಜಾನೆ ಕಳ್ಳತನ ನಡೆದಿದೆ. ಕ್ಯಾಂಟರ್‌ನಲ್ಲಿ ಬಂದ ಕಳ್ಳರು ಸುಮಾರು 1,500 ಎಳನೀರನ್ನು ಕಳ್ಳತನ ಮಾಡಿದ್ದಾರೆ. ನಂಬರ್ ಪ್ಲೇಟ್‌ಗೆ ಮಸಿ ಬಳಿದು ಖದೀಮರು ಕೃತ್ಯ ಎಸಗಿದ್ದಾರೆ. ಈ ಬಗ್ಗೆ ಜಯನಗರ ಪೊಲೀಸ್ ಠಾಣೆಯಲ್ಲಿ ಮಾಲೀಕ ಸಲೀಂ ದೂರು ದಾಖಲಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಿದ ಪೊಲೀಸರು ಇದೀಗ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಗೌತಮ್, ರಘು ಹಾಗೂ ಮಣಿಕಂಠ ಬಂಧಿತ ಆರೋಪಿಗಳು. ಈ ಮೂವರ ಮೇಲೆ ಈ ಹಿಂದೆ ಕೂಡಾ ಹಲವಾರು ಕೇಸ್‌ಗಳು ದಾಖಲಾಗಿವೆ. ರಘು ಮೇಲೆ ಕೊಲೆ ಯತ್ನ ಪ್ರಕರಣ ಕೂಡಾ ದಾಖಲಾಗಿದೆ. ಇದನ್ನೂ ಓದಿ: ರಾತ್ರಿ ತಡವಾಗಿ ಬಂದ ಮಗನಿಗೆ ಬುದ್ಧಿವಾದ ಹೇಳಿದ ತಾಯಿ- ಮನನೊಂದು ಯುವಕ ಆತ್ಮಹತ್ಯೆ

ಕಳ್ಳರ ಸುಳಿವು ನೀಡಿದ್ದು ಗೂಗಲ್ ಪೇ:
ಮೊದಲಿಗೆ ಇದನ್ನು ಸಣ್ಣ ಕೇಸ್ ಎಂದು ಪೊಲೀಸರು ಕಡೆಗಣಿಸಿದ್ದರು. ಆದರೆ ಬಳಿಕ ಯಾವುದೇ ಸುಳಿವೂ ಸಿಗದ ಆರೋಪಿಗಳನ್ನು ಬಂಧಿಸಿದ್ದೇ ರೊಚಕ ಎನಿಸಿಕೊಂಡಿದೆ. ಘಟನಾ ಸ್ಥಳದಲ್ಲಿ ಆರೋಪಿಗಳು ಯಾವುದೇ ಸುಳಿವು ಬಿಟ್ಟಿರಲಿಲ್ಲ. ಬಳಿಕ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಗೂಗಲ್ ಪೇ ಕ್ಲೂ ದೊರೆತಿದೆ.

ಖದೀಮರ ಸೆರೆಗಾಗಿ ಪೊಲೀಸರು ಸುಮಾರು 60ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಕಳ್ಳರು ಮುಂಜಾನೆ ಉತ್ತರಹಳ್ಳಿ ಬಳಿ ಟೀ ಕುಡಿದ ದೃಶ್ಯ ಪತ್ತೆಯಾಗಿತ್ತು. ಅದೇ ಜಾಗದಲ್ಲಿ ಗೂಗಲ್ ಪೇನಲ್ಲಿ ಹಣ ಪಾವತಿ ಮಾಡಿದ್ದರು. ಬಳಿಕ ಅಲ್ಲಿಗೆ ತೆರಳಿದ ಪೊಲೀಸರು ಗೂಗಲ್ ಪೇ ನಂಬರ್ ಪಡೆದು ಯಾವ ಬ್ಯಾಂಕ್ ಖಾತೆಯಿಂದ ಹಣ ಸಂದಾಯ ಆಗಿದೆ ಎಂದು ಪರಿಶೀಲಿಸಿದ್ದಾರೆ. ಈ ಮೂಲಕ ಪೊಲೀಸರು ಕಳ್ಳರ ಸುಳಿವನ್ನು ಪಡೆದಿದ್ದರು. ಇದನ್ನೂ ಓದಿ: ಬೆಂಗಳೂರಿನಲ್ಲೊಂದು ವಿಚಿತ್ರ ಘಟನೆ- ಬಾಡಿಗೆದಾರನನ್ನ ಗಮನಿಸದೇ ಮನೆ ಸೀಜ್

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್