ನೆಲಮಂಗಲ| ಕಾರ್ ಗ್ಲಾಸ್ ಒಡೆದು 11.5 ಲಕ್ಷ ನಗದು ದೋಚಿ ಪರಾರಿಯಾದ ಕಳ್ಳರು

Public TV
1 Min Read

ಬೆಂಗಳೂರು: ಕಾರ್ ಗ್ಲಾಸ್ ಒಡೆದು 11.5 ಲಕ್ಷ ರೂ. ನಗದು ದೋಚಿ ಕಳ್ಳರು ಪರಾರಿಯಾಗಿರುವ ನೆಲಮಂಗಲ (Nelamangala) ನಗರದ ಅಂಬೇಡ್ಕರ್ ಭವನದ ಮುಂಭಾಗದಲ್ಲಿ ನಡೆದಿದೆ.

ಖದೀಮರು ಕಾರಿನ ಗ್ಲಾಸ್ ಒಡೆದು ನಗದು ದೋಚುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅತೀಕ್ ರೆಹಮಾನ್ ಎಂಬವರಿಗೆ ಸೇರಿದ್ದ 11.5 ಲಕ್ಷ ರೂ. ನಗದು ಹಣವನ್ನು ಕಳ್ಳರು ದೋಚಿದ್ದಾರೆ. ಇದನ್ನೂ ಓದಿ: ಭಾರೀ ಮಳೆಗೆ ಅಸ್ಸಾಂ-ಮೇಘಾಲಯ ರಸ್ತೆ ಸಂಪರ್ಕ ಕಡಿತ – 2 ದಿನದಲ್ಲಿ 30 ಮಂದಿ ಸಾವು!

ಅತೀಕ್ ರೆಹಮಾನ್ ದಾಬಸ್ ಪೇಟೆಯಲ್ಲಿ ಲಾಜಿಸ್ಟಿಕ್ಸ್ ನಡೆಸುತ್ತಿದ್ದರು. ಈ ವೇಳೆ ಅತೀಕ್ ಅಣ್ಣ ಬ್ಯಾಂಕ್‌ನಿಂದ ಹಣ ತರುವಂತೆ ಸೂಚನೆ ನೀಡಿದ್ದರು. ಅದರಂತೆ ಅತೀಕ್ ದಾಬಸ್ ಪೇಟೆಯಿಂದ ಹಣ ತೆಗೆದುಕೊಂಡು ಬಂದಿದ್ದರು. ಇದನ್ನೂ ಓದಿ: Bengaluru | ಮಗುವನ್ನು ನೋಡಿಕೊಳ್ಳಲು ಬಂದ ಯುವತಿ 30 ನಿಮಿಷದಲ್ಲಿ 32,000 ರೂ. ಪಡೆದು ಎಸ್ಕೇಪ್

ಬಳಿಕ ಅವರು ಕಾರಿನಲ್ಲಿ ಹಣದ ಬ್ಯಾಗ್ ಇಟ್ಟು, ನೆಲಮಂಗಲದಲ್ಲಿ ಮಿಕ್ಸಿ ರಿಪೇರಿ ಮಾಡಿಸಲು ಹೋಗಿದ್ದರು. ವಾಪಸ್ ಬಂದು ನೋಡಿದಾಗ ಖದೀಮರು ಕಾರಿನ ಗ್ಲಾಸ್ ಒಡೆದು ಹಣ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಘಟನೆಯ ಕುರಿತು ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article