ಕಳವುಗೈದ ಹಣದ ಹಂಚಿಕೆ ವಿಚಾರವಾಗಿ ಕಳ್ಳನನ್ನೇ ಕೊಂದ ಮತ್ತೊಬ್ಬ ಕಳ್ಳ

By
1 Min Read

ಚಿಕ್ಕಬಳ್ಳಾಪುರ: ಕಳ್ಳತನ ಮಾಡಿರುವ ಹಣ ಹಂಚಿಕೆ ವಿಚಾರವಾಗಿ ನಡೆದ ವಾಗ್ವಾದ ಮತ್ತೊಬ್ಬ ಕಳ್ಳನ ಕೊಲೆಯಲ್ಲಿ ಅಂತ್ಯವಾದ ಘಟನೆ ಜಿಲ್ಲೆಯ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬೆಂಗಳೂರು ಮೂಲದ 35 ವರ್ಷದ ಸೈಯದ್ ಉಮರ್ ಕೊಲೆಯಾದವನು. ಇನ್ನೂ ಈತನ ಸ್ನೇಹಿತ ಜಾಫರ್ ತನ್ನ ಸಹಚರರಾದ ಶೌಕಾತ್ ಖಾನ್, ಮೌಲಾ, ಮುಬಾರಕ್ ಜೊತೆ ಸೇರಿ ಕೃತ್ಯ ಎಸಗಿದ್ದಾನೆ.

BRIBE

ಕಳವು ಪ್ರಕರಣದ 13,000 ಹಣವನ್ನು ಕೊಲೆಯಾದ ಉಮರ್, ಜಾಫರ್‌ಗೆ ಕೊಡಬೇಕಿತ್ತು. ಹೀಗಾಗಿ ಉಮರ್ ನನ್ನ ಕಾರಿನಲ್ಲಿ ಕಿಡ್ನಾಪ್ ಮಾಡಿದ ಜಾಫರ್ ಹಣಕ್ಕಾಗಿ ಒತ್ತಾಯಿಸಿದ್ದಾರೆ. ಈ ವೇಳೆ ಕೊಲೆಯಾದ ಉಮರ್, ಶಿಡ್ಲಘಟ್ಟ ಪಟ್ಟಣದಲ್ಲಿ ತನ್ನ ತಮ್ಮ ಸೈಯದ್ ಜಭೀ ಬಳೀ ಹಣ ಕೊಡಿಸುವುದಾಗಿ ಹೇಳಿ ಅಲ್ಲಿಗೆ ಕರೆದುಕೊಂಡು ಬಂದಿದ್ದಾನೆ. ಆದರೆ ಶಿಡ್ಲಘಟ್ಟಕ್ಕೆ ಬಂದಾಗ ಜಾಫರ್ ಬಳಿ ಬಂದ ಸೈಯದ್ ಜಭೀ ತನ್ನ ಬಳಿಯೂ ಹಣ ಇಲ್ಲ ಅಂತ ಹೇಳಿದ್ದಾನೆ. ಇದನ್ನೂ ಓದಿ: ಆಂಡ್ರಾಯ್ಡ್ ಬಳಕೆದಾರಿಗೆ ಮೋಸ ಮಾಡಿ ಸಿಕ್ಕಿಬಿದ್ದ ಗೂಗಲ್

ಆಗ ಆತನನ್ನು ಕಾರಿನಲ್ಲಿ ಕಿಡ್ನಾಪ್ ಮಾಡಿಕೊಂಡು ಜಾಫರ್ ಮತ್ತು ಅವನ ಸಹಚರರು ಕಾರಿನಲ್ಲಿ ನಂದಿಬೆಟ್ಟದ ಕ್ರಾಸ್‍ನ ನೀಲಗಿರಿ ತೋಪು ಬಳಿ ಕರೆದೊಯ್ದಿದ್ದಾರೆ. ಅಲ್ಲದೆ ಅಲ್ಲಿ ಇಬ್ಬರ ಮೇಲೂ ಹಲ್ಲೆ ಮಾಡುತ್ತಾರೆ. ತದನಂತರ ಅಲ್ಲಿಂದ ಶಿಡ್ಲಘಟ್ಟದ ಕಡೆಗೆ ಬರುವಾಗ ಮೂತ್ತೂರು ಗ್ರಾಮದ ಬಳಿ ಪೊಲೀಸರು ಹಿಂಬಾಲಿಸುತ್ತಿದ್ದಾರೆ ಅಂತ ತಿಳಿದು ಇಬ್ಬರನ್ನ ಕಾರಿನಿಂದ ಕೆಳಗಿಳಿಸಿ ಅಲ್ಲಿಂದ ಎಸ್ಕೇಪ್ ಆಗುತ್ತಾರೆ. ಇದನ್ನೂ ಓದಿ: ತಂದೆಯ ಕ್ಲೋಸ್ ಫ್ರೆಂಡ್ ಹೇಳಿ ಶಾಲೆಯ ವಾಶ್‍ರೂಂನಲ್ಲೇ ಬಾಲಕಿಯ ಅತ್ಯಾಚಾರ!

POLICE JEEP

ಈ ವೇಳೆ ಹಲ್ಲೆಗೊಳಗಾಗಿದ್ದ ಉಮರ್ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದು ತಮ್ಮ ಸೈಯದ್ ಜಭೀ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು, ಜಾಫರ್ ಹಾಗೂ ಆತನ ಸಹಚರರಾದ ಶೌಕಾತ್ ಖಾನ್, ಮೌಲಾ, ಮುಬಾರಕ್‍ರನ್ನು ಬಂಧಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *