ಪೊಲೀಸ್ ಕಸ್ಟಡಿಯಿಂದ ಕಳ್ಳ ಎಸ್ಕೇಪ್ – ಪಿಎಸ್‌ಐ ಸೇರಿ ಐವರು ಪೊಲೀಸರು ಸಸ್ಪೆಂಡ್

By
1 Min Read

ತುಮಕೂರು: ಪೊಲೀಸ್ ಕಸ್ಟಡಿಯಿಂದ (Police Custody) ಕಳ್ಳ (Thief) ಎಸ್ಕೇಪ್ ಆದ ಹಿನ್ನೆಲೆ ಗುಬ್ಬಿ ಪೊಲೀಸ್ ಠಾಣೆ ಪಿಎಸ್‌ಐ (PSI) ಸೇರಿ ಐವರು ಪೊಲೀಸರನ್ನು ಅಮಾನತು (Suspend) ಮಾಡಲಾಗಿದೆ.

ಪಿಎಸ್‌ಐ ದೇವಿಕಾ, ಮೂವರು ಹೆಡ್ ಕಾನ್ಸ್ಟೇಬಲ್, ಒಬ್ಬ ಪೊಲೀಸ್ ಪೇದೆ ಸೇರಿ ಒಟ್ಟು ಐವರನ್ನು ಸಸ್ಪೆಂಡ್ ಮಾಡಲಾಗಿದೆ. ಕರ್ತವ್ಯಲೋಪ ಹಿನ್ನೆಲೆ ಪಿಎಸ್‌ಐ ಸೇರಿ ಐವರು ಪೊಲೀಸರು ಅಮಾನತು ಮಾಡಿದ್ದು, ತುಮಕೂರು ಎಸ್‌ಪಿ ಅಶೋಕ್ ಕೆವಿ ಐವರು ಪೊಲೀಸರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಡಕಾಯಿತಿ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿದ ಪೊಲೀಸರು ಗುಬ್ಬಿ ಠಾಣೆಗೆ ಕರೆತಂದಿದ್ದರು. ಕಳೆದ ಗುರುವಾರ ಬೆಳಗ್ಗಿನಜಾವ 4 ಗಂಟೆಯಲ್ಲಿ ಆರೋಪಿ ಠಾಣೆಯಿಂದ ಪರಾರಿಯಾಗಿದ್ದಾನೆ. ಇದನ್ನೂ ಓದಿ: ಮುಸ್ಲಿಮರ ತುಷ್ಟೀಕರಣಕ್ಕೆ ಶುಕ್ರವಾರ ಮಧ್ಯಾಹ್ನ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಿಗದಿ: ಮುತಾಲಿಕ್ ಆರೋಪ

ಆರೋಪಿ ಸೈಯದ್ ಗದಗ ಜಿಲ್ಲೆಯ ಹುಲ್ಲೂರು ಗ್ರಾಮದ ವಾಸಿ ಆಗಿದ್ದು, ಡ್ಯಾನ್ಸ್ ಕೋರಿಯೋಗ್ರಾಫರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ. ಸದ್ಯ ನಾಪತ್ತೆಯಾಗಿರುವ ಆರೋಪಿಗಾಗಿ ಪೊಲೀಸರಿಂದ ಹುಡುಕಾಟ ನಡೆಯುತ್ತಿದ್ದು, ಮೂರು ತಂಡ ರಚಿಸಿ ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ಕೊಡಗಿನ ಚೇಲವಾರ ಫಾಲ್ಸ್‌ನಲ್ಲಿ ಮುಳುಗಿ ಕೇರಳದ ಯುವಕ ಸಾವು

Share This Article