ಮಂಡ್ಯ: ಕದ್ದ ಸ್ಕೂಟರ್ ಅಪಘಾತ (Bike Accident) ಮಾಡಿಕೊಂಡು ಕಳ್ಳನೊಬ್ಬ ಸಿಕ್ಕಿ ಬಿದ್ದಿರುವ ಘಟನೆ ಸಕ್ಕರೆನಾಡು ಮಂಡ್ಯದಲ್ಲಿ ನಡೆದಿದೆ.
ಮಂಡ್ಯ (Mandya) ಜಿಲ್ಲೆ ಕೆ.ಆರ್ ಪೇಟೆ ತಾಲೂಕಿನ ಚೌಡೇನಹಳ್ಳಿಯ ಮಂಜುನಾಥ್ ಬೈಕ್ ಕದ್ದು ಸಿಕ್ಕಿಬಿದ್ದ ಕಳ್ಳನಾಗಿದ್ದಾನೆ. ಇದನ್ನೂ ಓದಿ: ಮೋದಿ ಹೋಗಿ ವಿಮಾನ ಇಂಜಿನ್ ಚೆಕ್ ಮಾಡೋಕೆ ಸಾಧ್ಯನಾ? – ವಿಪಕ್ಷಗಳಿಗೆ ಪಿ. ರಾಜೀವ್ ತಿರುಗೇಟು
ಮಂಡ್ಯದಲ್ಲಿ ಸತೀಶ್ ಬಾಬು ಎಂಬುವವರ ಸ್ಕೂಟರ್ ಕದ್ದು ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದ. ಮಂಡ್ಯ ಜಿಲ್ಲೆ ಗಡಿದಾಟುವ ಮುನ್ನವೆ ಗೆಜ್ಜಲಗೆರೆ ಬಳಿ ಸ್ಕೂಟರ್ ಅಪಘಾತಕ್ಕೀಡಾಗಿದೆ. ಅಪಘಾತವಾದ ಬಳಿಕ ಮಂಜುನಾಥನನ್ನ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಯಲ್ಲಿ ವಿಚಾರಣೆ ವೇಳೆ ಬೈಕ್ ಕಳ್ಳತನ ಬೆಳಕಿಗೆ ಬಂದಿದೆ.
ಈ ಸಂಬಂಧ ಮಂಡ್ಯದ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕಾಂತಾರ ಶೂಟಿಂಗ್ – ಯಾವುದೇ ಅವಘಡ ಸಂಭವಿಸಿಲ್ಲ: ಹೊಂಬಾಳೆ ಫಿಲ್ಮ್ಸ್ ಸ್ಪಷ್ಟನೆ