ಮನಿ ಡಬಲ್‌ ಮಾಡುತ್ತೇವೆ ಎಂದು ನಂಬಿಸಿ ಮೋಸ ಮಾಡುತ್ತಿದ್ದ ಖದೀಮರ ಬಂಧನ

Public TV
2 Min Read

ಮಂಡ್ಯ: ಹಣವನ್ನು ದುಪ್ಪಟ್ಟು ಮಾಡಿಕೊಡುತ್ತೇವೆ ಎಂದು ನಂಬಿಸಿ ಮೋಸ ಮಾಡಿಕೊಂಡು ಅಮಾಯಕ ಜನರ ಹಣವನ್ನು ಲಪಟಾಯಿಸಿಕೊಂಡು ಪಾರಾರಿಯಾಗುತ್ತಿದ್ದ ಖದೀಮರನ್ನು ಬಂಧಿಸುವಲ್ಲಿ ಇದೀಗ ಮಂಡ್ಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಹಣದ ಬಗ್ಗೆ ಅತಿ ಆಸೆ ಇರುವವರನ್ನು ಟಾರ್ಗೆಟ್ ಮಾಡುತ್ತಿದ್ದ ಗ್ಯಾಂಗ್‍ವೊಂದು, ನಿಮ್ಮ ಹಣವನ್ನು ದುಪ್ಪಟ್ಟು ಮಾಡಿಕೊಡುತ್ತೇವೆಂದು ನಂಬಿಸಿ ಲಕ್ಷಾಂತರ ರೂ.ವನ್ನು ಲಪಟಾಯಿಸಿಕೊಂಡು ಜನರಿಗೆ ಪಂಗನಾಮ ಹಾಕುತ್ತಿತ್ತು. ಇದೀಗ ಆ ಗ್ಯಾಂಗ್‍ನಲ್ಲಿ ಇದ್ದ 8 ಮಂದಿ ಖದೀಮರನ್ನು ಮಂಡ್ಯ ಜಿಲ್ಲೆಯ ಮದ್ದೂರು ಪೊಲೀಸರು ಎಡೆಮುರಿ ಕಟ್ಟಿ ಕಂಬಿ ಹಿಂದೆ ನಿಲ್ಲಿಸಿದ್ದಾರೆ.

ಮೇ 3 ರಂದು ಮದ್ದೂರಿನ ಉಪ್ಲಿನಕೆರೆ ಗೇಟ್ ಬಳಿ ತುಮಕೂರು ಮೂಲದ ಕಿರಣ್ ಮತ್ತು ಪ್ರದೀಪ್ ಅವರಿಗೆ ನಿಮ್ಮ ಹಣವನ್ನು ಡಬಲ್ ಮಾಡಿಕೊಡುತ್ತೇವೆಂದು ಈ ಗ್ಯಾಂಗ್ ಕರೆಸಿತ್ತು. ನಂತರ ಸ್ಥಳಕ್ಕೆ 5.50 ಲಕ್ಷ ರೂ. ತೆಗೆದುಕೊಂಡು ಸ್ಥಳಕ್ಕೆ ಬಂದ ಕಿರಣ್ ಮತ್ತು ಪ್ರದೀಪ್‍ಗೆ ಆಘಾತವೊಂದು ಕಾದಿತ್ತು. ಇವರು 5.50 ಲಕ್ಷ ಇರುವ ಬ್ಯಾಗ್‍ನ್ನು ಆ ಖದೀಮರ ಗ್ಯಾಂಗ್ ನೀಡಿದ ನಂತರ, ಆ ಖರ್ತನಾಕ್ ಕಳ್ಳರು ಇವರಿಗೊಂದು ಬ್ಯಾಗ್ ನೀಡಿ 10 ಲಕ್ಷ ಇದೆ ಎಂದು ಪರಾರಿಯಾಗಿದ್ದರು.

ನಂತರ ಆ ಬ್ಯಾಗ್ ತೆಗೆದು ನೋಡಿದ ಮೇಲೆ ಆ ಬ್ಯಾಗ್‍ನ ಮೇಲ್ಭಾಗದಲ್ಲಿ 500 ಮತ್ತು 200 ಮುಖ ಬೆಲೆಯ ನೋಟುಗಳು ಅಡಿಯಲ್ಲಿ ನೋಟ್ ಪುಸ್ತಕಗಳು ಮಾತ್ರ ಇತ್ತು. ನಂತರ ನಾವು ಮೋಸ ಹೋಗಿದ್ದೇವೆ ಎಂದು ತಿಳಿದ ಕಿರಣ್ ಮತ್ತು ಪ್ರದೀಪ್ ಮದ್ದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪ್ರಕರಣ ದಾಖಲು ಮಾಡಿಕೊಂಡ ಪೊಲೀಸರು ಈ ಗ್ಯಾಂಗ್ ಹುಡುಕಾಟಕ್ಕೆ ಮಂಡ್ಯ ಎಸ್ಪಿ ಯತೀಶ್ ಮಾರ್ಗದರ್ಶನದಲ್ಲಿ ಮದ್ದೂರು ಸರ್ಕಲ್ ಇನ್ಸ್‌ಪೆಕ್ಟರ್ ಹರೀಶ್ ನೇತೃದಲ್ಲಿ ತಂಡ ರಚನೆ ಮಾಡಲಾಯಿತು. ನಂತರ ಈ ಖದೀಮರ ಅಡ್ಡಗಳಲ್ಲಿ ಹುಡುಕಾಟ ನಡೆಸಿದ ಪೊಲೀಸರಿಗೆ ಇವರ ಸುಳಿವು ದೊರೆತಿರಲಿಲ್ಲ. ನಂತರ ಅವರ ಫೋನ್ ಟ್ರೇಜ್ ಮಾಡಿದ ಪೊಲೀಸರು ಲೋಕೇಶನ್ ತಿಳಿದು ಅವರಿದ್ದ ಜಾಗಕ್ಕೆ ಹೋಗಿ 8 ಮಂದಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಕುತುಬ್ ಮಿನಾರ್ ಬಳಿ ಪೂಜೆ ಮಾಡುವ ಹಕ್ಕು ಯಾರಿಗೂ ಇಲ್ಲ – ASI ಖಡಕ್ ಉತ್ತರ

ಬಂಧಿತರು ನಂಜುಂಡ ಆರಾಧ್ಯ, ಶ್ರೀನಿವಾಸ, ಸಲೀಂ ಉಲ್ಲಾಖಾನ್, ಕೆಂಪರಾಜು, ಸಾಜಿದ್ ಅಹಮದ್, ಮಂಜುನಾಥ್, ಶ್ರೀನಿವಾಸ್‍ರೆಡ್ಡಿ, ರಾಜು ಎಂದು ಗುರುತಿಸಲಾಗಿದೆ. ಈ ಪೈಕಿ ನಂಜುಂಡ ಆರಾಧ್ಯ ಐದು ವರ್ಷಗಳ ಹಿಂದೆ ಖೋಟಾ ನೋಟು ಕೇಸ್‍ನಲ್ಲಿ ಮದ್ದೂರಿನ ಪೊಲೀಸರಿಗೆ ಅತಿಥಿಯಾಗಿದ್ದ. ಇದೀಗ ಒಂದು ಗ್ಯಾಂಗ್ ಕಟ್ಟಿಕೊಂಡು ಮತ್ತದೇ ರೀತಿಯ ಗ್ಯಾಂಗ್ ಕಟ್ಟಿಕೊಂಡು ಜನರನ್ನು ಯಾಮಾರಿಸಲು ಹೋಗಿ ಕಂಬಿ ಹಿಂದೆ ಬಿದ್ದಿದ್ದಾರೆ. ಬಂಧಿತರಿಂದ 4,02,000 ಹಣ ಕತ್ಯಕ್ಕೆ 1 ಕಾರು, 1 ಬೈಕ್ ಹಾಗೂ 8 ಮೊಬೈಲ್‍ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: 5ರೂ. ಡಾಕ್ಟರ್ ಎಂದೇ ಫೇಮಸ್ ಆಗಿದ್ದ ಶಂಕರೇಗೌಡಗೆ ಹೃದಯಾಘಾತ

Share This Article
Leave a Comment

Leave a Reply

Your email address will not be published. Required fields are marked *