ಜಿ20 ಯಶಸ್ಸಿಗೆ ಭಾರತ, ಪ್ರಧಾನಿ ಮೋದಿ ಹೊಗಳಿದ ಪಾಕಿಸ್ತಾನ ಜನ

Public TV
2 Min Read

ಇಸ್ಲಾಮಾಬಾದ್: ನವದೆಹಲಿಯಲ್ಲಿ (New Delhi) ನಡೆದ 18ನೇ G20 ಶೃಂಗಸಭೆಯನ್ನು (G20 Summit) ಯಶಸ್ವಿಯಾಗಿ ಆಯೋಜಿಸಿದ್ದಕ್ಕಾಗಿ ಭಾರತವನ್ನು ಪಾಕಿಸ್ತಾನದ (Pakistan) ಸ್ಥಳೀಯರು ಪ್ರಶಂಸಿಸಿದ್ದಾರೆ.

30 ಕ್ಕೂ ಹೆಚ್ಚು ರಾಷ್ಟ್ರಗಳ ನಾಯಕರು ಮತ್ತು ಪ್ರಮುಖ ಅಂತಾರಾಷ್ಟ್ರೀಯ ಸಂಸ್ಥೆಗಳ ಪ್ರತಿನಿಧಿಗಳು ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದರು. ಸೆಪ್ಟೆಂಬರ್ 9 ಮತ್ತು 10 ರಂದು ದೆಹಲಿಯ ಪ್ರಗತಿ ಮೈದಾನದಲ್ಲಿರುವ ಅತ್ಯಾಧುನಿಕ ಭಾರತ (India) ಮಂಟಪದಲ್ಲಿ ಶೃಂಗಸಭೆ ನಡೆಯಿತು. ಇದನ್ನೂ ಓದಿ: G20 ಶೃಂಗಸಭೆಗೆ ನಿಗದಿಗಿಂತ 300 ಪಟ್ಟು ಅಧಿಕ ಹಣ ಖರ್ಚು- ಆರೋಪ ತಳ್ಳಿ ಹಾಕಿದ ಕೇಂದ್ರ ಸರ್ಕಾರ

ಪಾಕಿಸ್ತಾನದ ಸ್ಥಳೀಯರೊಬ್ಬರು, ಟಾಪ್ 20 ರಾಷ್ಟ್ರಗಳ ಮುಖ್ಯಸ್ಥರು ಒಂದು ದೇಶಕ್ಕೆ ಭೇಟಿ ನೀಡಿದಾಗ, ಅದು ಆ ರಾಷ್ಟ್ರಕ್ಕೆ ಗೌರವವಾಗಿದೆ. ಭಾರತೀಯ ಆರ್ಥಿಕತೆಯು ಅನೇಕ ಪ್ರಯೋಜನಗಳನ್ನು ಪಡೆಯುತ್ತದೆ ಎಂದು ತಿಳಿಸಿದ್ದಾರೆ.

ಮತ್ತೊಬ್ಬ ಪಾಕಿಸ್ತಾನಿ ಸ್ಥಳೀಯ ಮಾತನಾಡಿ, ಭಾರತವು ಪ್ರಮುಖ ಆರ್ಥಿಕತೆಗಳ ಮುಖ್ಯಸ್ಥರಿಗೆ ಆತಿಥ್ಯ ವಹಿಸಿದೆ ಎಂಬ ಅಂಶವು ಒಂದು ರೀತಿಯಲ್ಲಿ ನಮ್ಮ ವಿದೇಶಾಂಗ ನೀತಿಯ ಮೇಲೆ ನಕಾರಾತ್ಮಕ ಬೆಳಕನ್ನು ಬೀರುತ್ತದೆ. ನಮ್ಮ ಆರ್ಥಿಕತೆ ಮತ್ತು ಭದ್ರತಾ ಪರಿಸ್ಥಿತಿಯು ಕಳೆದ ಅವಧಿಯಲ್ಲಿ ಗಮನಾರ್ಹವಾಗಿ ಹದಗೆಟ್ಟಿದೆ. ಜಗತ್ತು ನಮ್ಮನ್ನು ಬದಿಗಿಟ್ಟಿದೆ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ: ಭಾರತ, ಸೌದಿ ನಡುವೆ ದ್ವಿಪಕ್ಷೀಯ ಮಾತುಕತೆ – ಉತ್ಪಾದಕ ಮಾತುಕತೆ ಎಂದ ಪ್ರಧಾನಿ ಮೋದಿ

ನಾವು ನಮ್ಮ ದೇಶದ (ಪಾಕಿಸ್ತಾನ) ಆರ್ಥಿಕತೆಯನ್ನು ಮೇಲಕ್ಕೆತ್ತಲು ಪ್ರಯತ್ನಿಸುತ್ತಿರುವ ಹೊತ್ತಿನಲ್ಲಿ, ಭಾರತವು ವಿಶ್ವದ 20 ಪ್ರಮುಖ ಆರ್ಥಿಕತೆಗಳ ನಾಯಕರಿಗೆ ಆತಿಥ್ಯ ವಹಿಸಿತು. ಜಾಗತಿಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದ್ದು, ಭಾರತೀಯರಿಗೆ ಹೆಮ್ಮೆ ಎನಿಸಿತು. ನಾವೆಲ್ಲರೂ ಭಾರತದ ಚಿತ್ರಗಳನ್ನು ನೋಡಿದ್ದೇವೆ. ಪ್ರಧಾನಿ ಮೋದಿ ಅವರು ವಿಶ್ವ ನಾಯಕರೊಂದಿಗೆ ಪೋಸ್ ನೀಡಿದ್ದಾರೆ. ಜಾಗತಿಕ ಪ್ರೇಕ್ಷಕರ ಮುಂದೆ ಭಾರತವನ್ನು ಸಕಾರಾತ್ಮಕವಾಗಿ ಪ್ರದರ್ಶಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಸೌದಿ ಅರೇಬಿಯಾದ ‘ಶೆಜಾದಾ’ (ಕ್ರೌನ್ ಪ್ರಿನ್ಸ್ ಸಲ್ಮಾನ್) ಪಾಕಿಸ್ತಾನಕ್ಕೆ ಬಂದಿಲ್ಲ. ಆದರೆ ಜಿ 20 ಶೃಂಗಸಭೆಗಾಗಿ ಭಾರತಕ್ಕೆ ಹೋಗಿದ್ದರು. ಇದು ವಿಶ್ವಕ್ಕೆ ಭಾರತದ ಪ್ರಾಮುಖ್ಯತೆ ಎಷ್ಟಿದೆ ಎಂಬುದನ್ನು ತೋರಿಸುತ್ತದೆ. ಶೃಂಗಸಭೆಗೆ ಬಾಂಗ್ಲಾದೇಶವನ್ನು ಆಹ್ವಾನಿಸಲಾಗಿದೆ. ಆದರೆ ಪಾಕಿಸ್ತಾನವನ್ನು ಆಹ್ವಾನಿಸದಿರುವುದು ಆಶ್ಚರ್ಯಕರವಾಗಿದೆ ಎಂದು ಮತ್ತೊಬ್ಬ ಪಾಕಿಸ್ತಾನಿ ಸ್ಥಳೀಯರೊಬ್ಬರು ಹೇಳಿದ್ದಾರೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್