ನಿಜವಾದ ಭಾರತೀಯ ಯಾರೆಂದು ನಿರ್ಧರಿಸೋದು ಸುಪ್ರೀಂಕೋರ್ಟ್ ನ್ಯಾಯಾಧೀಶರ ವ್ಯಾಪ್ತಿಗೆ ಬರಲ್ಲ – ಪ್ರಿಯಾಂಕಾ ಗಾಂಧಿ

Public TV
1 Min Read
ನವದೆಹಲಿ: ನಿಜವಾದ ಭಾರತೀಯ ಯಾರೆಂದು ನಿರ್ಧರಿಸೋದು ಸುಪ್ರೀಂಕೋರ್ಟ್ ನ್ಯಾಯಾಧೀಶರ ವ್ಯಾಪ್ತಿಗೆ ಬರಲ್ಲ ಎಂದು ಕಾಂಗ್ರೆಸ್ ನಾಯಕಿ, ಸಂಸದೆ ಪ್ರಿಯಾಂಕಾ ಗಾಂಧಿ (Priyank Gandhi) ಅವರು ರಾಹುಲ್ ಗಾಂಧಿ (Rahul Gandhi) ಬೆಂಬಲಕ್ಕೆ ನಿಂತಿದ್ದಾರೆ.ಇದನ್ನೂ ಓದಿ: ಉತ್ತರಕಾಶಿಯಲ್ಲಿ ಭೀಕರ ಮೇಘಸ್ಫೋಟ – ಜಲಪ್ರಳಯಕ್ಕೆ ಕೊಚ್ಚಿ ಹೋದ ಗ್ರಾಮ

ಸಂಸತ್ ಆವರಣದಲ್ಲಿ ಮಾತನಾಡಿ, ಸೇನೆಯ ಬಗ್ಗೆ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಗೆ ಸುಪ್ರೀಂ ತೀವ್ರ ಆಕ್ರೋಶ ವ್ಯಕ್ತಪಡಿಸಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ನಿಜವಾದ ಭಾರತೀಯ ಯಾರು ಎಂದು ನಿರ್ಧರಿಸುವುದು ಸುಪ್ರೀಂಕೋರ್ಟ್ ನ್ಯಾಯಾಧೀಶರ ವ್ಯಾಪ್ತಿಗೆ ಬರುವುದಿಲ್ಲ. ನನ್ನ ಸಹೋದರ ರಾಹುಲ್ ಗಾಂಧಿಗೆ ಸೇನೆಯ ಬಗ್ಗೆ ಅತ್ಯುನ್ನತ ಗೌರವವಿದೆ ಮತ್ತು ಅದರ ವಿರುದ್ಧವಾಗಿ ಎಂದಿಗೂ ಆತ ಏನನ್ನೂ ಹೇಳುವುದಿಲ್ಲ ಎಂದು ಹೇಳಿದರು.

ನ್ಯಾಯಾಂಗಕ್ಕೆ ಎಲ್ಲಾ ರೀತಿಯಲ್ಲಿಯೂ ಗೌರವಗಳನ್ನು ನೀಡುತ್ತಾ, ನಿಜವಾದ ಭಾರತೀಯ ಯಾರು ಮತ್ತು ಯಾರಲ್ಲ ಎಂಬುದನ್ನು ನಿರ್ಧರಿಸುವುದು ಅವರ ಕೆಲಸವಲ್ಲ. ನ್ಯಾಯಾಧೀಶರು ಅದನ್ನು ನಿರ್ಧರಿಸುವುದಿಲ್ಲ. ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನಾಗಿ, ಸರ್ಕಾರಕ್ಕೆ ಪ್ರಶ್ನೆ ಕೇಳುವುದು ರಾಹುಲ್ ಗಾಂಧಿಯವರ ಕರ್ತವ್ಯವಾಗಿದೆ. ರಾಹುಲ್ ಗಾಂಧಿ ಯಾವಾಗಲೂ ಅದನ್ನೇ ಮಾಡಿದ್ದಾರೆ. ಆದರೆ ಈಗ ಸೇನೆ ಬಗ್ಗೆ ಮಾತನಾಡಿರುವುದು ಸರ್ಕಾರಕ್ಕೆ ಇಷ್ಟವಿಲ್ಲ. ಜೊತೆಗೆ ಈ ಪ್ರಶ್ನೆಗೆ ಉತ್ತರ ನೀಡೋದು ಅವರಿಗೆ ಕಷ್ಟವಾಗಿದೆ ಎಂದು ತಿಳಿಸಿದರು.ಇದನ್ನೂ ಓದಿ: ಸಾರಿಗೆ ನೌಕರರ ಬೇಡಿಕೆ ಈಡೇರಿಸಿ, ಇಲ್ಲದಿದ್ರೆ ಕರ್ನಾಟಕ ಬಂದ್‌ಗೆ ಕರೆ ನೀಡ್ತೆವೆ – ವಾಟಾಳ್

Share This Article