ತಮ್ಮ ಜೀವನದ ಪವರ್‌ಫುಲ್ ಪುರುಷರನ್ನು ಪರಿಚಯಿಸಿದ ಅಮೂಲ್ಯ

Public TV
2 Min Read

ಬೆಂಗಳೂರು: ಚೆಲುವಿನ ಚಿತ್ತಾರ ಸಿನಿಮಾ ಖ್ಯಾತಿ ನಟಿ ಅಮೂಲ್ಯ ಅವರು ತಮ್ಮ ಜೀವನದ ಪವರ್‌ಫುಲ್ ಪುರುಷರನ್ನು ಪರಿಚಯಿಸಿದ್ದಾರೆ.

ಹೌದು ತಮ್ಮ ಕ್ಯೂಟ್ ನಟನೆಯ ಮೂಲಕ ಎಲ್ಲರ ಮನಸ್ಸು ಕದ್ದಿದ್ದ ಅಮೂಲ್ಯ ಅವರು, ಮದುವೆಯಾದ ನಂತರ ಚಿತ್ರರಂಗದಿಂದ ಕೊಂಚ ದೂರ ಉಳಿದಿದ್ದಾರೆ. ಈಗ ಅಮೂಲ್ಯ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ತಮ್ಮ ಅಣ್ಣಂದಿರ ಮತ್ತು ಪತಿಯ ಫೋಟೋ ಹಾಕಿ ಇವರೆಲ್ಲರೂ ನನ್ನ ಜೀವನದ ಪವರ್‍ಫುಲ್ ಪುರುಷರು ಎಂದು ಬರೆದುಕೊಂಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅಮೂಲ್ಯ, ಇವೆರೆಲ್ಲರು ನನ್ನ ಜೀವನದ ಪವರ್‌ಫುಲ್ ಪುರುಷರು. ಇವರು ನನ್ನ ಕಠಿಣ ಸಮಯದಲ್ಲೂ ನನ್ನನ್ನು ನಂಬಿದ್ದಾರೆ. ನನ್ನ ಪುಟ್ಟ ಪ್ರಪಂಚ ಶಾಂತಿಯುತವಾಗಿ ಮತ್ತು ಖುಷಿಯಾಗಿ ಇರಲು ಇವರೇ ಕಾರಣ ಎಂದು ಬರೆದು ತಮ್ಮ ಪತಿ ಜಗದೀಶ್ ಮತ್ತು ಅವರ ಮೂರು ಅಣ್ಣಂದಿರ ಫೋಟೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

ಅಮೂಲ್ಯ ಅವರು, ಬೆಂಗಳೂರಿನ ಮಾಜಿ ಪಾಲಿಕೆ ಸದಸ್ಯ ರಾಮಚಂದ್ರೇಗೌಡರ ಮಗ ಉದ್ಯಮಿ ಜಗದೀಶ್ ಆರ್ ಚಂದ್ರ ಅವರನ್ನು 2017 ಮೇ 12ರಂದು ಮದುವೆಯಾಗಿದ್ದರು. ಮದುವೆಯ ನಂತರ ಅವರು ಯಾವುದೇ ಸಿನಿಮಾದಲ್ಲಿ ನಟನೆ ಮಾಡಿರಲಿಲ್ಲ. ಕೊನೆಯದಾಗಿ 2017 ರಲ್ಲಿ ತೆರೆಕಂಡ ಮಾಸ್ತಿಗುಡಿ ಚಿತ್ರದಲ್ಲಿ ಅಮೂಲ್ಯ ಕಾಣಿಸಿಕೊಂಡಿದ್ದರು. ಅದನ್ನು ಬಿಟ್ಟರೆ ಕಳೆದ ವರ್ಷ ಬಿಡುಗಡೆಯಾದ ಕಾಳಿದಾಸ ಕನ್ನಡ ಮೇಷ್ಟ್ರು ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಮೊದಲಿಗೆ ಬಾಲನಟಿಯಾಗಿ ಅಭಿನಯಿಸುತ್ತಿದ್ದ ಅಮೂಲ್ಯ ಮೊದಲ ಬಾರಿಗೆ 2007 ರಲ್ಲಿ ಬಿಡುಗಡೆಯಾದ ಚೆಲುವಿನ ಚಿತ್ತಾರ ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ನಾಯಕಿಯಾಗಿ ನಟಿಸಿದ್ದರು. ಈ ಚಿತ್ರ ಅವರಿಗೆ ಬಹಳ ಹೆಸರು ತಂದುಕೊಟ್ಟಿತ್ತು. ಈ ಸಿನಿಮಾದ ಬಳಿಕ ಬಹಳ ಹೆಸರು ಮಾಡಿದ ಅಮೂಲ್ಯ, ನಂತರ ಕನ್ನಡದ ಬಿಗ್ ಸ್ಟಾರ್ ನಟರ ಜೊತೆ ಅಭಿನಯಿಸಿ ಸೈ ಅನಿಸಿಕೊಂಡಿದ್ದರು.

ಅಮೂಲ್ಯ ಅವರು ಸೆಪ್ಟೆಂಬರ್ 14 ರಂದು ಜನಿಸಿದ್ದು, ಮದುವೆಯಾದ ಮೊದಲ ವರ್ಷದ ಹುಟ್ಟುಹಬ್ಬವನ್ನು ರಾಮನಗರದ ಅಂಧ ಮಕ್ಕಳ ಜೊತೆ ಅಚರಿಸಿಕೊಂಡು ಸರಳತೆ ಮೆರೆದಿದ್ದರು. 25ನೇ ಹುಟ್ಟಹಬ್ಬವನ್ನು ತಮ್ಮ ಪತಿ ಜಗದೀಶ್ ಜೊತೆಯಲ್ಲಿ ರಾಮನಗರ ಹೊರವಲಯದ ಶ್ರೀ ಬಾಲಗಂಗಾಧರನಾಥ ಸ್ವಾಮಿ ಶಾಖಾ ಮಠದ ಅಂಧರ ಶಾಲೆಗೆ ತೆರಳಿ ಹುಟ್ಟುಹಬ್ಬ ಸಂಭ್ರಮವನ್ನು ಆಚರಿಸಿಕೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *