ಹಿಂದೂ, ಮುಸ್ಲಿಮರ ಮಧ್ಯೆ ಜಗಳ ಹಚ್ಚುವ ಈ ಸರ್ಕಾರಗಳನ್ನ ಕಿತ್ತೊಗೆಯಬೇಕು – ಖರ್ಗೆ ಕರೆ

By
2 Min Read

ತುಮಕೂರು: ಕೇಂದ್ರ ಮತ್ತು ರಾಜ್ಯದಲ್ಲಿ ಹಿಂದೂ, ಮುಸ್ಲಿಮರ ಮಧ್ಯೆ ಜಗಳ ಹಚ್ಚುವ ಸರ್ಕಾರಗಳಿವೆ. ಇವುಗಳನ್ನ ಕಿತ್ತೊಗೆಯಬೇಕು ಎಂದು ಎಐಸಿಸಿ (AICC) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಕರೆ ನೀಡಿದ್ದಾರೆ.

ತುಮಕೂರು (Tumakuru) ಕೊರಟಗೆರೆಯಲ್ಲಿ ನಡೆದ ಕಾಂಗ್ರೆಸ್ (Congress) ಸಮಾವೇಶದಲ್ಲಿ ಮಾತನಾಡಿದ ಅವರು, ಹಿಂದೂ-ಮುಸ್ಲಿಮರ ನಡುವೆ ಜಗಳ ಹಚ್ಚುವ ಸರ್ಕಾರಗಳನ್ನ ಕಿತ್ತೊಗೆಯಬೇಕು. ಕಾಂಗ್ರೆಸ್ ಸರ್ಕಾರ ನೀಡಿದ ಅಭಿವೃದ್ಧಿ ಕೆಲಸಗಳನ್ನ ಪುನಃ ಪಡೆಯಲು ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರವನ್ನ ಗೆಲ್ಲಿಸಬೇಕು ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಮಂಗಳೂರು, ಕೊಯಮತ್ತೂರು ಸ್ಫೋಟ ಮಾಡಿದ್ದು ನಾವೇ- ಐಎಸ್‍ಕೆಪಿ ಅಧಿಕೃತ ಹೇಳಿಕೆ

ಪ್ರಧಾನಿ ಮೋದಿ (Narendra Modi) ಕಲಬುರಗಿಗೆ ಬಂದಾಗ ಎರಡು ಕಡೆ ಭಾಷಣ ಮಾಡಿದ್ದಾರೆ. ಅವರಲ್ಲಿ ಅಧಿಕಾರ ಇದೆ, ಪಾಪ ಭಾಷಣ ಮಾಡಲಿ. ಸರ್ಕಾರಿ ಕಾರು, ಸರ್ಕಾರಿ ವಿಮಾನ ಬಳಕೆ ಮಾಡಿಕೊಂಡು ಕಾಂಗ್ರೆಸ್ ಪಕ್ಷವನ್ನು ಟೀಕಿಸೋದು ಎಷ್ಟು ಸರಿ ಎಂಬದುನ್ನು ಎಲ್ಲರು ಅರ್ಥಮಾಡ್ಕೊಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ವಿರಾಟ್ ಶತಕಗಳಿಂದಲೇ ಭಾರತ ಗೆಲ್ಲುತ್ತಿತ್ತು – ಕೊಹ್ಲಿಯನ್ನು ಹೊಗಳಿ ಸಚಿನ್ ವಿರುದ್ಧ ಅಖ್ತರ್ ಟೀಕೆ

ಇಂತಹ ಭ್ರಷ್ಟಾಚಾರ ಎಂದೂ ನೋಡಿಲ್ಲ: ಅಧಿಕಾರ ಕೊಟ್ಟಾಗ ದೇಶವನ್ನ ಸಮೃದ್ಧಮಾಡುವ ಬದಲಾಗಿ ಟೀಕೆ ಟಿಪ್ಪಣಿಗೆ ಬಿಜೆಪಿ ಸೀಮಿತವಾಗಿದೆ. ಮೋದಿ ಅವರ ಕೈಕೆಳಗೆ ಭ್ರಷ್ಟಾಚಾರ ನಡೆಯುತ್ತಿದೆ. ಕೇಂದ್ರ, ರಾಜ್ಯ ಸೇರಿದ್ರೆ 100% ಕಮೀಷನ್ ಅಲ್ಲೇ ಹೋಯ್ತು. ನನ್ನ ರಾಜಕಾರಣದ ಜೀವನದಲ್ಲಿ 11 ಬಾರಿ ಎಲೆಕ್ಷನ್‌ಗೆ ನಿಂತಿದ್ದೇನೆ. ಆದ್ರೆ ಇಂತಹ ಭ್ರಷ್ಟಾಚಾರ ಎಂದೂ ನೋಡಿಲ್ಲ. ಹಿಂದೆ ರಕ್ಷಣಾ ಸಚಿವರಾಗಿದ್ದ ಎಂ.ಡಿ ಅಂತನಿ ಹೆಚ್‌ಎಎಲ್ (HAL) ಘಟಕ ಮಾಡಿದ್ರು, ಮೋದಿ ಒಂದಾದರು ಡ್ಯಾಮ್ ಮಾಡಿದ್ದಾರಾ? ಮೋದಿ ಬಡಾಯಿ ಕೊಚ್ಚಿಕೊಳ್ಳೋದು ಮಾತ್ರ ಬಿಡಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

`ಸಬ್ ಕುಚ್ ಹಮ್ನೆ ದಿಯಾ’ ಅಂತಾರೆ: ಮೋದಿ ನಾವು ಮಾಡಿದ ಕೆಲಸ ಹೇಳ್ತಿಲ್ಲ. ಎಲ್ಲಾ ಕಡೆ ನಾವೇ ಮಾಡಿದ್ದು ಅಂತಾರೆ. 1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದಿಲ್ಲ, 2014ರಲ್ಲಿ ಸ್ವಾತಂತ್ರ್ಯ ಬಂದವರಂತೆ ಮಾತನಾಡ್ತಾರೆ. ಅಂದು ನೆಹರು, ಇಂದಿರಾಗಾಂಧಿ ಪರಿಶ್ರಮದಿಂದ ಧಾನ್ಯದ ಭಂಡಾರ ತುಂಬಿದ್ದ ಪರಿಣಾಮ ಇಂದು ಎಲ್ಲರೂ ಊಟ ಮಾಡ್ತಿದ್ದಾರೆ. ಇದ್ಯಾವುದನ್ನು ಮೋದಿ ಹೇಳಲ್ಲ. `ಸಬ್ ಕುಚ್ ಹಮ್ನೆ ದಿಯಾ’ ಅಂತಾರೆ. ಈ ದೇಶದಲ್ಲಿ ವಿದ್ಯುತ್ ಬೆಳಕು, ನೀರು ಎಲ್ಲಾ ಇವರೇ ಕೊಟ್ರಾ? ಶಾಲಾ-ಕಾಲೇಜು ಅವರೇ ಮಾಡಿದ್ದಾ? ಈ ದೇಶದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ 16% ಸಾಕ್ಷರತೆ ಇತ್ತು, ಈಗ 70% ಇದೆ. ಅದನ್ನ ಮೋದಿನೇ ಮಾಡಿದ್ರಾ? ಎಂದು ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ.

ಬಿಜೆಪಿಗೆ ನಾಚಿಕೆಯೇ ಇಲ್ಲದೇ, ಭ್ತಷ್ಟರನ್ನ ರಕ್ಷಣೆ ಮಾಡ್ತಿದೆ. ಬಿಜೆಪಿಯವರ ಮನೆಯಲ್ಲಿ ಕೋಟಿಗಟ್ಟಲೇ ಸಿಕ್ಕಾಗ ಕಣ್ಮುಚ್ಚಿ ಕುಳಿತುಕೊಳ್ತಾರೆ. ಆದ್ರೆ ಸಜ್ಜನರ ವಿರುದ್ಧ ಇಡಿ, ಐಟಿ, ಸಿಬಿಐ ದಾಳಿ ಮಾಡ್ತಿಸ್ತಾರೆ. ಹೆದರಿಸಿ, ಬೆದರಿಸಿ ಆಳ್ವಿಕ ಮಾಡುವ ಕೆಲಸ ಮಾಡ್ತಿದ್ದಾರೆ. ಈ ಬೆದರಿಕೆಗೆಲ್ಲಾ ಕಾಂಗ್ರೆಸ್ ಹೆದರಲ್ಲ ಎಂದು ತಿರುಗೇಟು ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *