‘ಮಹಾನಟಿ’ ಶೋಗೆ ಇವರೇ ನೋಡಿ ಜಡ್ಜಸ್

Public TV
2 Min Read

ನ್ನ ವಿಭಿನ್ನ ರಿಯಾಲಿಟಿ ಶೋಗಳ (Reality show) ಮೂಲಕ  ಸಾಕಷ್ಟು ಯುವ ಪ್ರತಿಭೆಗಳನ್ನ ಕರುನಾಡಿಗೆ ಪರಿಚಯಿಸಿರುವ ಜೀ಼ ಕನ್ನಡ ವಾಹಿನಿ, ಈ ಬಾರಿ ಮತ್ತೊಂದು ಹೊಸ ರಿಯಾಲಿಟಿ ಶೋ ಮೂಲಕ ಕರುನಾಡಿನ ಯುವ ನಟಿಯರನ್ನ ಹುಡುಕುವ ಕೆಲಸ ಶುರುಮಾಡಿದೆ.

ಜೀ಼ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋಗಳಾದ ಡ್ರಾಮಾ ಜೂನಿಯರ್ಸ್‌,ಕಾಮಿಡಿ ಕಿಲಾಡಿಗಳು, ಡಿಕೆಡಿ, ಭರ್ಜರಿ ಬ್ಯಾಚುಲರ್ಸ್‌ ಮತ್ತು ಸರಿಗಮಪ ಮೂಲಕ ಈಗಾಗಲೆ ಸಾಕಷ್ಟು ನಟನಟಿಯರು, ಗಾಯಕ ಗಾಯಕಿಯರು ಹಾಗು ಕೊರಿಯೋಗ್ರಾಫರ್‌ಗಳನ್ನ ಕರುನಾಡಿಗೆ ಕೊಟ್ಟಿರುವ ಜೀ಼ ಕನ್ನಡ ವಾಹಿನಿ, ಇದೀಗ ಮಹಾನಟಿ ಎಂಬ ಹೊಚ್ಚ ಹೊಸ ರಿಯಾಲಿಟಿ ಶೋ ಮೂಲಕ ನಿಮ್ಮೂರಿನಲ್ಲಿರುವ ನಟಿಯಾಗುವ ಕನಸು ಹೊತ್ತಿರುವ, ಅವಕಾಶ ವಂಚಿತ ಪ್ರತಿಭೆಗಳಿಗೆ ವೇದಿಕೆ ಒದಗಿಸಲು ಈ ಕಾರ್ಯಕ್ರಮವನ್ನ ಹೆಣೆದ್ದಿದ್ದು,ಕನ್ನಡ ಚಿತ್ರರಂಗಕ್ಕೆ ಯುವ ನಾಯಕ ನಟಿಯರನ್ನ ನೀಡುವ ಕೆಲಸವನ್ನ ಈ ರಿಯಾಲಿಟಿ ಶೋ ಮಾಡಲಿದೆ. ಕರುನಾಡಿನ ಧೀಮಂತ ನಟಿಯರ  ಸಾಲಿಗೆ ಸೇರಲು ಬಯಸುವ ಎಲ್ಲಾ ಯುವ ನಟಿಯರಿಗೆ ವೇದಿಕೆ ಕಲ್ಪಿಸಿಕೊಡುವ ಈ ಮಹಾನಟಿ ಕಾರ್ಯಕ್ರಮವು ,ನಿಮ್ಮ ಕನಸನ್ನ ನನಸು ಮಾಡುವ  ನಾಡಿನ 31 ಜಿಲ್ಲೆಗಳನ್ನ ಸಂಚರಿಸಿ, ಪ್ರತಿಭೆಗಳನ್ನ ಅಳೆದು ತೂಗಿ,ವೇದಿಕೆ ಕಲ್ಪಿಸಿ ಕೊಡಲು ಹೊರಟಿರುವ ಈ ಹೊಸ ರಿಯಾಲಿಟಿ ಶೋನ ಆಡಿಷನ್‌ ಕೊನೆಯ ಹಂತ ತಲುಪಿದೆ.

ನಟಿಯಾಗುವ ಕನಸು ಹೊತ್ತ ಅದೆಷ್ಟೋ ಯುವ ನಟಿಯರಿಗೆ, ಸರಿಯಾದ ವೇದಿಕೆ ಸಿಗದೆ ಅವರ ಕನಸುಗಳು ಕರುಗುವ ಹೊತ್ತಿನಲ್ಲಿ, ಅದನ್ನ ಪೋಷಿಸಿ ಬೆಳೆಸಲು ಮಾಡುತ್ತಿರುವ ಈ ಹೊಸ ಪ್ರಯತ್ನವೇ ಮಹಾನಟಿ.ಇಂತಹ ಹೊಸ ಪ್ರಯೋಗದ ಈ ಮಹಾನಟಿ (Mahanati) ರಿಯಾಲಿಟಿ ಶೋನಲ್ಲಿ ಜಡ್ಜಸ್ಗಳು ಯಾರು ಎಂಬ ಕುತೂಹಲ ಎಲ್ಲರಲ್ಲು ಈಗ ಮನೆಮಾಡಿದ್ದು, ಈ ಬಾರಿ ಮೂರು ಹೊಸ ಜಡ್ಜಸ್ಗಳು ವೇದಿಕೆಯನ್ನ ಅಲಂಕರಿಸಲ್ಲಿದ್ದು, ಅವರಲ್ಲಿ ಸ್ಯಾಂಡಲ್‌ ವುಡ್ಡಿನ ಖ್ಯಾತ ನಿರ್ದೇಶಕ,ನಟ ರಮೇಶ್‌ ಅರವಿಂದ್‌ (Ramesh Aravind), ಖ್ಯಾತ ನಾಯಕ ನಟಿ ಪ್ರೇಮ (Prema), ಕಾಟೇರದಂತಹ ಯಶಸ್ವಿ ಚಿತ್ರಕೊಟ್ಟ ನಿರ್ದೇಶಕ ತರುಣ್‌ ಸುಧೀರ್‌ ಮತ್ತು ಯುವ ನಾಯಕ ನಟಿ ನಿಶ್ವಿಕಾ ನಾಯ್ಡು ಈ ರಿಯಾಲಟಿ ಶೋನ ಜಡ್ಜಸ್ಗಳಾಗಿ ಕಾರ್ಯನಿರ್ವಹಿಸಲ್ಲಿದ್ದಾರೆ.

 

ಆದರೇ ಆ ನಾಲ್ಕು ಜನಗಳಲ್ಲಿ ಒಬ್ಬರು ಹೊಸದಾಗಿ ಬರುವ ನಟಿಯರಿಗೆ ಅಭಿನಯದ ಮಜಲುಗಳನ್ನ ಕಲಿಸುವ ಮೆಂಟರ್‌ ಆಗಿ ಕಾರ್ಯನಿರ್ವಹಿಸಲ್ಲಿದ್ದಾರೆ ಎಂದು ವಾಹಿನಿ ತಿಳಿಸಿದೆ. ಪ್ರತಿ ಬಾರಿ ತನ್ನ ಕಾರ್ಯಕ್ರಮದಲ್ಲಿ ವಿಭಿನ್ನ ಪ್ರಯೋಗಗಳನ್ನ ಮಾಡುವ ಜೀ಼ ಕನ್ನಡ ವಾಹಿನಿ ಈ ಬಾರಿ  ಮಹಾನಟಿಯ ರಿಯಾಲಿಟಿ ಶೋ ಮೂಲಕ ಮನೋರಂಜನೆಯಲ್ಲಿ ಹೊಸತನವನ್ನ ತರಲು ತಯಾರಿ ಮಾಡಿಕೊಂಡಿದ್ದು, ಇದೇ ಮಾರ್ಚ್‌ 3೦ನೇ ತಾರೀಖು ಶನಿವಾರ ತನ್ನ ಮೊದಲ ಸಂಚಿಕೆ ಪ್ರಸಾರ ಮಾಡಲ್ಲಿದ್ದು,ಇನ್ನು ಮುಂದೆ ಈ ಕಾರ್ಯಕ್ರಮವು ಪ್ರತಿ ಶನಿವಾರ ಮತ್ತು ಭಾನುವಾರ ಸಂಜೆ 7.30ಕ್ಕೆ  ಪ್ರಸಾರವಾಗಲಿದೆ.

Share This Article