ಕೊರೊನಾಗೆ ಇಡೀ ಜಗತ್ತೇ ತತ್ತರಿಸಿದ್ರೆ, ಈ 2 ದೇಶಗಳಲ್ಲಿ ಮಾತ್ರ ಒಂದೇ ಒಂದು ಕೇಸ್‌ ಇಲ್ಲ

Public TV
1 Min Read

ನವದೆಹಲಿ: ಚೀನಾದಲ್ಲಿ (China) ಹುಟ್ಟಿದ ಮಾರಕ ಕೊರೊನಾ (Covid-19) ವೈರಸ್‌ನಿಂದಾಗಿ ಇಡೀ ವಿಶ್ವವೇ ಕಂಗೆಟ್ಟಿದೆ. ಈಗ ಮತ್ತೆ ಕೋವಿಡ್‌ 4ನೇ ಅಲೆ ಭೀತಿ ಜಗತ್ತನ್ನು ಕಾಡುತ್ತಿದೆ. ಆದರೆ ಎರಡು ದೇಶಗಳಲ್ಲಿ ಮಾತ್ರ ಒಂದೇ ಒಂದು ಕೋವಿಡ್‌ ಪ್ರಕರಣ ದೃಢಪಟ್ಟಿಲ್ಲ. ಈ ದೇಶಗಳು ಸದ್ಯ ಕೋವಿಡ್‌ ಮುಕ್ತವಾಗಿವೆ.

ಹೌದು, ತುರ್ಕಮೆನಿಸ್ತಾನ್‌ (Turkmenistan) ಹಾಗೂ ಉತ್ತರ ಕೊರಿಯಾ (North Korea) ದೇಶಗಳು ಮಾತ್ರ ಕೋವಿಡ್‌ ಮುಕ್ತವಾಗಿವೆ. ಈ ದೇಶಗಳು ಜನರು ಕೊರೊನಾ ವೈರಸ್‌ ಭೀತಿಯಿಲ್ಲದೇ ಆರಾಮಾಗಿ ಓಡಾಡಿಕೊಂಡಿದ್ದಾರೆ. ಈ ದೇಶಗಳ ಆರೋಗ್ಯ ಇಲಾಖೆ ನೀಡಿರುವ ವರದಿ ನೋಡಿ ವಿಶ್ವ ಆರೋಗ್ಯ ಸಂಸ್ಥೆ (WHO) ಕೂಡ ಅಚ್ಚರಿಗೊಂಡಿದೆ. ಇದನ್ನೂ ಓದಿ: ಉಕ್ರೇನ್ ಮೇಲೆ ಏಕಕಾಲಕ್ಕೆ 120 ಕ್ಷಿಪಣಿಗಳ ದಾಳಿ ನಡೆಸಿದ ರಷ್ಯಾ

ಡಬ್ಲ್ಯೂಹೆಚ್‌ಒ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಪಟ್ಟಿಯಲ್ಲಿ ತುರ್ಕಮೆನಿಸ್ತಾನ್‌ ಮತ್ತು ಉತ್ತರ ಕೊರಿಯಾ ದೇಶಗಳು ಕೊರೊನಾ ಮುಕ್ತವಾಗಿರುವ ವಿಚಾರ ಬೆಳಕಿಗೆ ಬಂದಿದೆ. WHO ಪಟ್ಟಿಯು ಎಲ್ಲಾ ದೇಶಗಳನ್ನು ಹೊಂದಿದೆ. ಆಯಾ ಸರ್ಕಾರಗಳು ಬಿಡುಗಡೆ ಮಾಡಿರುವ COVID-19 ಪ್ರಕರಣಗಳ ಸಂಖ್ಯೆಯನ್ನು ಪಟ್ಟಿಯು ಹೊಂದಿದೆ.

ಸಾಂಕ್ರಾಮಿಕ ರೋಗವನ್ನು ನಿಭಾಯಿಸುವಲ್ಲಿ ತುರ್ಕಮೆನಿಸ್ತಾನ್ ಕಳಪೆ ಸ್ಥಾನದಲ್ಲಿದೆ. ಅಷ್ಟೇ ಅಲ್ಲ, 2019ರ ಜಾಗತಿಕ ಆರೋಗ್ಯ ಭದ್ರತಾ ಸೂಚ್ಯಂಕದಲ್ಲಿ 195 ದೇಶಗಳ ಪೈಕಿ ತುರ್ಕಮೆನಿಸ್ತಾನ್ 101ನೇ ಸ್ಥಾನದಲ್ಲಿದೆ. ಹೀಗಿದ್ದೂ ಈ ದೇಶದಲ್ಲಿ ಸದ್ಯ ಒಂದು ಕೋವಿಡ್‌ ಪ್ರಕರಣ ಕೂಡ ವರದಿಯಾಗಿಲ್ಲ ಎನ್ನಲಾಗಿದೆ. ಇದನ್ನೂ ಓದಿ: ಪಾಕಿಸ್ತಾನದಲ್ಲಿ ಹಿಂದೂ ಮಹಿಳೆಯ ಭೀಕರ ಹತ್ಯೆ – ಶಿರಚ್ಛೇದಿಸಿ, ಚರ್ಮ ಸುಲಿದ್ರು

ಉತ್ತರ ಕೊರಿಯಾ ಆಗಸ್ಟ್‌ನಲ್ಲಿ ತನ್ನ ಮೊದಲ ಕೋವಿಡ್ ಪ್ರಕರಣವನ್ನು ದೃಢಪಡಿಸಿತ್ತು. ನಂತರ ಅನಾರೋಗ್ಯಕ್ಕೆ ಒಳಗಾದವರೆಲ್ಲರೂ ಚೇತರಿಸಿಕೊಂಡಿದ್ದಾರೆ. ಅಂದಿನಿಂದ ಈವರೆಗೂ ಈ ದೇಶದಲ್ಲಿ ಕೋವಿಡ್‌ ಪ್ರಕರಣ ವರದಿಯಾಗಿಲ್ಲ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *