ಈ ತಿಂಗಳಲ್ಲಿ ಕೆಜಿಎಫ್ ಬಗ್ಗೆ ಬರಲಿದೆ ದೊಡ್ಡ ಸುದ್ದಿ

Public TV
1 Min Read

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ ‘ಕೆಜಿಎಫ್-2’ ಚಿತ್ರದ ಮಾಹಿತಿಗಾಗಿ ಅಭಿಮಾನಿಗಳು ಕಾಯುತ್ತಿರುತ್ತಾರೆ. ಇದೀಗ ಹೊಂಬಾಳೆ ಫಿಲ್ಮ್ ನ ಕ್ರಿಯೇಟಿವ್ ಎಕ್ಸಿಕ್ಯೂಟಿವ್ ಪ್ರಡ್ಯೂಸರ್ ಕಾರ್ತಿಕ್ ಗೌಡ ಚಿತ್ರದ ಬಗ್ಗೆ ಟ್ವೀಟ್ ಮಾಡಿದ್ದಾರೆ.

https://twitter.com/Karthik1423/status/1235936920972058624

ಕಾರ್ತಿಕ್ ಗೌಡ ಅವರು ತಮ್ಮ ಟ್ವಿಟ್ಟರಿನಲ್ಲಿ, “ಈ ತಿಂಗಳಲ್ಲಿ ಕೆಜಿಎಫ್-2 ಚಿತ್ರದ ಬಗ್ಗೆ ಅಪ್ಡೇಟ್ ಮಾಡುತ್ತೇವೆ. ಆದರೆ ಚಿತ್ರದ ಟೀಸರ್ ಈಗಲೇ ಬಿಡುಗಡೆಯಾಗುವುದಿಲ್ಲ” ಎಂದು ಕೆಜಿಎಫ್-2 ಹ್ಯಾಶ್‍ಟ್ಯಾಗ್ ಬಳಸಿ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‍ಗೆ ನಿರ್ದೇಶಕ ಪ್ರಶಾಂತ್ ನೀಲ್, “ಕೊನೆಗೂ ನಿಮಗೆ ಅಪ್ಡೇಟ್ಸ್ ಬಗ್ಗೆ ತಿಳಿದುಕೊಳ್ಳುವ ಸ್ವಾತಂತ್ರ ಸಿಕ್ತು” ಎಂದು ಹಾಸ್ಯವಾಗಿ ರೀ-ಟ್ವೀಟ್ ಮಾಡಿದ್ದಾರೆ. ಇದೇ ವೇಳೆ ಕಾರ್ತಿಕ್ ಅವರ ಟ್ವೀಟ್‍ಗೆ ಚಿತ್ರದ ನಟಿ ಶ್ರೀನಿಧಿ ಶೆಟ್ಟಿ ಕೂಡ “ಹಾ.. ಹಾ.. ಬ್ರಾವೋ” ಎಂದು ರಿ-ಟ್ವೀಟ್ ಮಾಡಿದ್ದಾರೆ.

https://twitter.com/prashanth_neel/status/1235968881081978880

ಕಳೆದ ತಿಂಗಳು ಈ ಸಿನಿಮಾದಲ್ಲಿ ಪ್ರಧಾನ ಮಂತ್ರಿ ರಮಿಕಾ ಸೇನ್ ಪಾತ್ರದಲ್ಲಿ ನಟಿಸಿರುವ ಬಾಲಿವುಡ್ ನಟಿ ರವೀನಾ ತಮ್ಮ ಪಾತ್ರದ ಚಿತ್ರೀಕರಣ ಮುಗಿಸಿ ಮುಂಬೈಗೆ ವಾಪಸ್ ತೆರೆಳಿದ್ದರು. ಕೆಜಿಎಫ್-2 ತಂಡ ಸೇರಿಕೊಂಡಿದ್ದ ರವೀನಾ ಯಶಸ್ವಿಯಾಗಿ ಚಿತ್ರೀಕರಣ ಮುಗಿಸಿದ್ದರು. ಅಲ್ಲದೆ ಕೆಜಿಎಫ್-2 ಸೆಟ್ಟಿನಲ್ಲಿ ತಮ್ಮ ಕೊನೆಯ ದಿನದ ಚಿತ್ರೀಕರಣದ ವೇಳೆ ತಂಡದ ಜೊತೆಗೆ ಪೋಸ್ ಕೊಟ್ಟ ಫೋಟೋವನ್ನು ರವೀನಾ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದರು.

ಸದ್ಯ ರಾಕಿಭಾಯ್ ಹಾಗೂ ಚಿತ್ರತಂಡ ಕೆಜಿಎಫ್-2 ಚಿತ್ರದ ಶೂಟಿಂಗ್‍ನಲ್ಲಿ ಬ್ಯುಸಿಯಾಗಿದ್ದಾರೆ. ಕೊನೆ ಹಂತದ ಚಿತ್ರೀಕರಣದಲ್ಲಿ ಚಿತ್ರತಂಡ ನಿರತವಾಗಿದೆ. ಅಕ್ಟೋಬರ್ ನಲ್ಲಿ ಕೆಜಿಎಫ್-2 ಬಿಡುಗಡೆಗೊಳ್ಳುವ ಸಾಧ್ಯತೆ ಇದೆ. ಈಗಾಗಲೇ ಭಾರತದ ಬಹು ನಿರೀಕ್ಷಿದ ಸಿನಿಮಾಗಳ ಪಟ್ಟಿಯಲ್ಲಿ ಕೆಜಿಎಫ್-2 ಮೊದಲ ಸ್ಥಾನದಲ್ಲಿದ್ದು, ಕೆಜಿಎಫ್-2ನಲ್ಲಿ ರಾಕಿ ಭಾಯ್ ಅಬ್ಬರ ಹೇಗಿರಲಿದೆ? ಪ್ರಶಾಂತ್ ನೀಲ್ ಈ ಬಾರಿ ಇನ್ನೇನು ಮೋಡಿ ಮಾಡಲಿದ್ದಾರೆ ಎನ್ನುವುದನ್ನ ನೋಡಲು ಸಿನಿಪ್ರಿಯರು ಕಾದು ಕುಳಿತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *