ಮುಡಾ ಹಗರಣದಲ್ಲಿ ಅಕ್ರಮ ಹಣದ ವರ್ಗಾವಣೆಯಾಗಿದೆ – ಇಡಿಯಿಂದ ಸಬ್ ರಿಜಿಸ್ಟ್ರಾರ್‌ಗಳಿಗೆ 104 ಪುಟಗಳ ಪತ್ರ

Public TV
1 Min Read

ಬೆಂಗಳೂರು: ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧದ ಮುಡಾ ಅಕ್ರಮ ಆರೋಪ ಪ್ರಕರಣದಲ್ಲಿ, ಜಾರಿ ನಿರ್ದೇಶನಾಲಯ (ED) ಮನಿ ಲಾಂಡ್ರಿಂಗ್ ಆಗಿರೋ ಬಗ್ಗೆ ವರದಿ ತಯಾರಿಸಿದೆ. ಇದನ್ನೂ ಓದಿ:  ವಕ್ಪ್ ತಿದ್ದುಪಡಿ ಮಸೂದೆ ಪರಿಶೀಲನೆ ಅಂತ್ಯ – ಲೋಕಸಭಾ ಸ್ಪೀಕರ್‌ಗೆ ವರದಿ ಸಲ್ಲಿಸಿದ ಜೆಪಿಸಿ

ಈ ವರದಿ ಕುರಿತು ಮುಡಾ ಆಯುಕ್ತರು, ಮುಡಾದಲ್ಲಿನ ಸಬ್ ರಿಜಿಸ್ಟ್ರಾರ್ (MUDA Subrijistrar) ಹಾಗೂ ಮೈಸೂರಿನ 14 ಸಬ್ ರಿಜಿಸ್ಟ್ರಾರ್ ಕಚೇರಿಗಳಿಗೆ 104 ಪುಟಗಳ ಪತ್ರ ಬರೆದಿದೆ. ಪತ್ರದಲ್ಲಿ ಯಾರ‍್ಯಾರ ಪಾತ್ರ ಏನು..? ಹೇಗೆಲ್ಲಾ ಅಕ್ರಮ ನಡೆದಿದೆ ಅಂತ ಉಲ್ಲೇಖಿಸಿದ್ದು, 160 ಸೈಟುಗಳನ್ನ ಯಾವುದೇ ಪರಭಾರೆ ಮಾಡದಂತೆ ಸೂಚಿಸಿದೆ. ಇದನ್ನೂ ಓದಿ: ರಾಜ್ಯಕ್ಕೆ ನ್ಯಾಯಯುತವಾಗಿ ದೊರಕಬೇಕಾದ ಅನುದಾನ ಮಂಜೂರು ಮಾಡಿ: ಸಚಿವ ಬೋಸರಾಜು ಆಗ್ರಹ

ಇಡಿ ಪತ್ರದಲ್ಲಿನ ಪ್ರಮುಖ ಅಂಶಗಳೇನು?

* ಕೆಸರೆ ಗ್ರಾಮದ 3 ಎಕರೆ 26 ಗುಂಟೆ ಜಮೀನನ್ನ 3.24 ಲಕ್ಷ ರೂ.ಗೆ ವಶಪಡಿಸಿಕೊಳ್ಳಲಾಗಿದೆ

* ತಪ್ಪು‌ ಮಾಹಿತಿ ಹಾಗೂ ಪ್ರಭಾವದಿಂದಾಗಿ ಡಿನೋಟಿಫಿಕೇಷನ್ ಕೈಬಿಡಲಾಗಿತ್ತು

* ಮುಡಾ ಸೈಟ್ ಮಾಡಿ ಮಾರಾಟ ಮಾಡಿದ್ದ ಜಾಗವನ್ನ ಮಲ್ಲಿಕಾರ್ಜುನ ಸ್ವಾಮಿಯಿಂದ ಖರೀದಿ ಮಾಡಲಾಗಿದೆ

* ಮಲ್ಲಿಕಾರ್ಜುನ ಸ್ವಾಮಿ ಖರೀದಿ ಮಾಡಿದಾಗ ಮುಡಾ ಯಾವುದೇ ಆಕ್ಷೇಪ ಮಾಡಿಲ್ಲ

* ಮುಡಾದಿಂದ ತಪ್ಪು ವರದಿ ಆಧರಿಸಿ ಮಲ್ಲಿಕಾರ್ಜುನ ಸ್ವಾಮಿ ಭಾಗವನ್ನು ರೆಸಿಡೆನ್ಶಿಯಲ್‌ ಜಾಗವಾಗಿ ಮಾರ್ಪಾಡು ಮಾಡಲಾಗಿದೆ

* ರಾಜಕೀಯ ಪ್ರಭಾವದಿಂದಾಗಿ ಐಷಾರಾಮಿ ಬಡಾವಣೆಯಲ್ಲಿ ಬದಲಿ ಸೈಟ್ ಗಳನ್ನ ಬಿ.ಎಂ ಪಾರ್ವತಿ ಪಡೆದಿದ್ದಾರೆ

* ಮುಡಾದಿಂದ ಕಾನೂನು ಬಾಹಿರವಾಗಿ ಪರಿಹಾರ ಸೈಟ್ ಪಡೆಯಲಾಗಿದೆ

* ಮುಡಾ ಅಧಿಕಾರಿಗಳ ಮೇಲೆ ಪ್ರಭಾವ ಬೀರಿ ಸೈಟ್ ಪಡೆಯಲಾಗಿದೆ

* ಡಿ.ಬಿ.ನಟೇಶ್ ಮುಡಾ ಆಯುಕ್ತರಾಗಿದ್ದ ವೇಳೆಯಲ್ಲಿ ದೊಡ್ಡ ಮಟ್ಟದ ಹಗರಣ ನಡೆದಿದೆ

* ಇಡಿ ತನಿಖೆಯಲ್ಲಿ ಪಿಎಂಎಲ್ಎ ಕಾಯಿದೆ ಸೆ.3ರ ಅಡಿ ಮನಿಲ್ಯಾಂಡ್ರಿಂಗ್ ನಡೆದಿರುವುದು ಸ್ಪಷ್ಟವಾಗಿದೆ

* ಇಡಿ ತನಿಖೆಯಲ್ಲಿ ಸಿದ್ದರಾಮಯ್ಯ, ಬಿ.ಎಂ.ಪಾರ್ವತಿ, ಮಲ್ಲಿಕಾರ್ಜುನ ಸ್ವಾಮಿ ಹಾಗೂ ಜೆ.ದೇವರಾಜು ಆರೋಪಿಗಳಾಗಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

Share This Article