ಪಾಕಿಸ್ತಾನ ಜಿಂದಾಬಾದ್ ಕೂಗಿದವರಿಗೆ ಇಲ್ಲ ಶಿಕ್ಷೆ – 3 ವರ್ಷಗಳಲ್ಲಿ ಒಂದು ಕೇಸ್‌ಗೂ ಶಿಕ್ಷೆ ಕೊಡಿಸದ ಪೊಲೀಸ್ ಇಲಾಖೆ

2 Min Read

– ಗೃಹ ಇಲಾಖೆಯಿಂದ ಅಂಕಿಅಂಶ ಬಿಡುಗಡೆ

ಬೆಂಗಳೂರು: ಪಾಕಿಸ್ತಾನ ಜಿಂದಾಬಾದ್ (Pakistan Zindabad) ಎಂದು ಕೂಗಿ ವಿವಾದ ಸೃಷ್ಟಿಸಿದವರಿಗೆ ಇದುವರೆಗೂ ಶಿಕ್ಷೆ ಆಗಿಲ್ಲ. 3 ವರ್ಷಗಳಲ್ಲಿ ಒಂದೇ ಒಂದು ಕೇಸ್‌ಗೂ ಪೊಲೀಸ್ ಇಲಾಖೆ ಶಿಕ್ಷೆ ಕೊಡಿಸಿಲ್ಲ ಅನ್ನೋದು ಬಹಿರಂಗಗೊಂಡಿದೆ.

ದೇಶದ್ರೋಹಿಗಳ ವಿರುದ್ಧದ ಕ್ರಮ ತನಿಖೆ ಹಂತದಲ್ಲೇ ನಿಂತಿದೆ. ಈ ಸಂಬಂಧ ಗೃಹ ಇಲಾಖೆಯಿಂದಲೇ ಅಂಕಿಅAಶಗಳು ಬಿಡುಗಡೆಯಾಗಿವೆ. ಕಳೆದ 3 ವರ್ಷಗಳಲ್ಲಿ ಕರ್ನಾಟಕದಲ್ಲಿ ಪಾಕಿಸ್ತಾನ ಜಿಂದಾಬಾದ್ ಹಾಗೂ ಬಾಂಗ್ಲಾದೇಶ ಜಿಂದಾಬಾದ್ ಅಂತ ಘೋಷಣೆ ಕೂಗಿದವರಿಗೆ ಶಿಕ್ಷೆ ಆಗಿಲ್ಲ. ಈ ಬಗ್ಗೆ ರಾಜ್ಯ ಸರ್ಕಾರ, ಗೃಹ ಇಲಾಖೆ ಮಾಹಿತಿ ಬಿಡುಗಡೆ ಮಾಡಲಾಗಿದೆ. ಇದನ್ನೂ ಓದಿ: ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ ಕೇಸ್‌; ಪರಪ್ಪನ ಅಗ್ರಹಾರ ಜೈಲು ಸೇರಿದ ನಾಶೀಪುಡಿ

ವಿಧಾನ ಪರಿಷತ್‌ನ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಡಿ.ಎಸ್.ಅರುಣ್ ಚುಕ್ಕೆ ಗುರುತಿನ ಪ್ರಶ್ನೆಗೆ ಸ್ವತಃ ಗೃಹ ಸಚಿವ ಪರಮೇಶ್ವರ ಉತ್ತರ ನೀಡಿದ್ದಾರೆ. 2023 ರಿಂದ 2026 ರವರೆಗೆ 17 ಕೇಸ್ ರಾಜ್ಯದಲ್ಲಿ ದಾಖಲಾಗಿದೆ. 17 ಕೇಸ್ ಪೈಕಿ ಒಂದೇ ಒಂದು ಕೇಸ್‌ನಲ್ಲೂ ದೇಶದ್ರೋಹಿಗಳಿಗೆ ಶಿಕ್ಷೆ ಆಗಿಲ್ಲ. ಕೆಲವು ಕೋರ್ಟ್ನಲ್ಲಿ ಕೇಸ್ ಇದ್ದರೆ, ಕೆಲವು ತನಿಖಾ ಹಂತದಲ್ಲಿ ಇವೆ. ಕೆಲವು ಕೇಸ್‌ಗೆ ಬಿ ರಿಪೋರ್ಟ್ ಸಲ್ಲಿಕೆ ಮಾಡಲಾಗಿದೆ.

ಯಾವ ವರ್ಷ ಎಷ್ಟು ಕೇಸ್ ದಾಖಲು?
ಪಾಕ್ ಪರ ಜಿಂದಾಬಾದ್ ಕೇಸ್‌ಗಳು
* 2023- 3 ಕೇಸ್
* 2024- 8 ಕೇಸ್
* 2025- 6 ಕೇಸ್
* ಒಟ್ಟು 17 ಕೇಸ್ ದಾಖಲು ಆಗಿದೆ.

ಬಾಂಗ್ಲಾದೇಶ ಜಿಂದಾಬಾದ್ ಕೇಸ್
2026- 1 ಕೇಸ್ ದಾಖಲು

ಯಾವ ಕೇಸ್ ಯಾವ ಹಂತದಲ್ಲಿ ಇದೆ!?
ಬೆಂಗಳೂರು
2024 ವಿಧಾನಸೌಧ- ತನಿಖೆಯಲ್ಲಿದೆ
2025 ವೈಟ್ ಫೀಲ್ಡ್- ತನಿಖೆಯಲ್ಲಿದೆ
2026 ಹೆಬ್ಬಗೋಡಿ-ತನಿಖೆಯಲ್ಲಿದೆ

ಬೆಳಗಾವಿ
2023 ತಿಲವಾಡಿ- ಆರೋಪಿ ಪತ್ತೆ ಆಗಬೇಕು
2024- ಮಾರ್ಕೆಟ್- ಆರೋಪಿತನಿಗೆ ಸಮನ್ಸ್ ಜಾರಿ

ಮೈಸೂರು
2025 ಹುಣಸೂರು- ಆರೋಪಿ ಪತ್ತೆ ಆಗಬೇಕು. ತನಿಖೆಯಲ್ಲಿದೆ.

ಶಿವಮೊಗ್ಗ
2025 ಹಳೆ ನಗರ ಠಾಣೆ- ಬಿ ರಿಪೋರ್ಟ್ ಸಲ್ಲಿಕೆ

ಚಿಕ್ಕಮಗಳೂರು
2024 ಕೊಪ್ಪ- ಬಿ ರಿಪೋರ್ಟ್ ಸಲ್ಲಿಕೆ
2025 ತರೀಕೆರೆ- ತನಿಖೆಯಲ್ಲಿದೆ.

Share This Article