ಕಾಂಗ್ರೆಸ್‌ನಲ್ಲಿ ಯಾವ ಕ್ರಾಂತಿಯೂ ನಡೆಯೋದಿಲ್ಲ: ಹೆಚ್‌ಡಿಕೆ ಭವಿಷ್ಯ

Public TV
1 Min Read

ಬೆಂಗಳೂರು: ಕಾಂಗ್ರೆಸ್‌ನಲ್ಲಿ (Congress) ಯಾವ ಕ್ರಾಂತಿಯೂ ನಡೆಯೋದಿಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಭವಿಷ್ಯ ನುಡಿದರು.

ಬೆಂಗಳೂರಿನಲ್ಲಿ ಮಾತಾಡಿದ ಕುಮಾರಸ್ವಾಮಿ, ಯಾವ ಕ್ರಾಂತಿಯೂ ನಡೆಯಲ್ಲ. ನವೆಂಬರ್ ಕ್ರಾಂತಿಯೂ ನಡೆಯಲ್ಲ. ಇವರು ಜನರಿಗೆ ಅಭಿವೃದ್ಧಿ ಕ್ರಾಂತಿ ಮಾಡಲಿ ಸಾಕು ಅಂತ ಗುಡುಗಿದರು. ಇದನ್ನೂ ಓದಿ: ದೀಪಾವಳಿ ಹಿನ್ನೆಲೆ ಜಾತಿಗಣತಿ ಸಮೀಕ್ಷೆಗೆ ಅ.23ರವರೆಗೆ ತಾತ್ಕಾಲಿಕ ಬ್ರೇಕ್

ಸರ್ಕಾರದಿಂದ ಸಂಘದ ಚಟುವಟಿಕೆಗಳಿಗೆ ನಿರ್ಬಂಧ ಪ್ರಯತ್ನಗಳು ನಡೆಯುತ್ತಿವೆ. ಈ ಸರ್ಕಾರ ಹಲವು ಸಮಸ್ಯೆ ಇದ್ರೂ ಬಗೆಹರಿಸ್ತಿಲ್ಲ. ಆರ್‌ಎಸ್‌ಎಸ್ ಬಗ್ಗೆ ಚರ್ಚೆ ಮಾಡ್ತಿದೆ. ಇದರಿಂದ ಜನತೆಗೇನು ಉಪಯೋಗ? ಆರ್‌ಎಸ್‌ಎಸ್ ಪಥಸಂಚಲನದಿಂದ ರಾಜ್ಯದಲ್ಲಿ ಎಲ್ಲೂ ಸಮಸ್ಯೆ ಆಗಿಲ್ಲ, ಅಶಾಂತಿ ಮೂಡಿಲ್ಲ. ಅವರು ಮೊದಲಿಂದಲೂ ಪಥಸಂಚಲನ ಮಾಡ್ಕೊಂಡು ಬರ್ತಿದ್ದಾರೆ. ಇವರು ಈಗ ಅದಕ್ಕೆ ಮಹತ್ವ ಕೊಡ್ತಿದ್ದಾರೆ. ಆಕಾಶದಲ್ಲಿ ಹಾರಾಡ್ಕೊಂಡಿದ್ರೆ ಜನತೆ ಕಷ್ಟ ಕಾಣ್ಸಲ್ಲ, ನೆಲಕ್ಕೆ ಇಳೀರಿ ಜನರ ಕಷ್ಟ ಗೊತ್ತಾಗುತ್ತೆ ಅಂತ ಕಿಡಿಕಾರಿದರು.

ಧರ್ಮಸ್ಥಳ ವಿಚಾರದಲ್ಲಿ ಮೂರು ತಿಂಗಳು ಬುರುಡೆ ಕತೆ ಹೇಳಿದ್ರು. ದೂರುದಾರನೇ ಆರೋಪಿ ಈಗ. ಷಡ್ಯಂತ್ರ ಮಾಡಿದ ಯಾರನ್ನು ಬಂಧಿಸಿದ್ದಾರೆ ಇವರು? ನಿಜವಾದ ಸಮಸ್ಯೆ ಬಗೆಹರಿಸಲು ಮುಂದಾಗ್ತಿಲ್ಲ. ಸಿಎಂ ಬದಲಾವಣೆ ಕತೆ ಹೇಳ್ಕೊಂಡೇ ಕಾಲ ತಳ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಫಲಿತಾಂಶ ಪ್ರಕಟ – ಭಾರೀ ಮತಗಳ ಅಂತರದಿಂದ ಲಕ್ಷ್ಮಣ್ ಸವದಿ ಗೆಲುವು

Share This Article