ಬೆಂಗಳೂರು: ಮರ ಕಡಿತಲೆಯನ್ನು ಒಳಗೊಂಡ ಯಾವುದೇ ರಸ್ತೆ ಯೋಜನೆಯಲ್ಲಿ ಕಡಿಯುವ ಒಂದು ಮರದ (Tree) ಬದಲಿಗೆ 10 ಪಟ್ಟು ಸಸಿ (Saplings ) ನೆಡಲು ವಿಧಿಸುವ ಶುಲ್ಕದ ಮೊದಲ ಪ್ರತಿ ಸಸಿಗೆ 411.27 ಆಗಿದ್ದು, ಇದನ್ನು ಉಪಯೋಗಿ ಸಂಸ್ಥೆ ಪಾವತಿಸಬೇಕಾಗುತ್ತದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ (Eshwar Khandre) ವಿಧಾನಸಭೆಗಿಂದು ಸ್ಪಷ್ಟಪಡಿಸಿದ್ದಾರೆ.
ಸದಸ್ಯ ತಮ್ಮಯ್ಯ ಹೆಚ್.ಡಿ. ಅವರು ರಾ.ಹೆ.373 ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ಶುಲ್ಕ ವಿನಾಯಿತಿ ನೀಡುವ ಕುರಿತಂತೆ ಗಮನ ಸೆಳೆದ ಪ್ರಸ್ತಾಪಕ್ಕೆ, ಉತ್ತರಿಸಿದ ಸಚಿವರು, ಬೆಳೆದ ಮರಗಳನ್ನು ಕಡಿಯುವುದನ್ನು ಒಳಗೊಂಡ ರಸ್ತೆ ಯೋಜನೆಗಳ ವಿಚಾರದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪ್ರತಿ ಕಿ.ಮೀ.ಗೆ 9.06 ಲಕ್ಷ ಶುಲ್ಕ ವಿಧಿಸಲಾಗಿರುತ್ತದೆ. ಆದರೆ ಎನ್ಹೆಚ್ಎಐನ ವಿಸ್ತೃತ ಯೋಜನಾ ವರದಿಯಲ್ಲಿ ಈ 9 ಲಕ್ಷ ಸೇರಿಸಿ, ಗುತ್ತಿಗೆದಾರರ ಕಡೆಯಿಂದಲೇ ಸಸಿ ನೆಡಿಸುವ ಕೆಲಸ ಮಾಡುತ್ತಿದ್ದು, ಇದಕ್ಕೆ ಮಾತ್ರ ವಿನಾಯಿತಿ ನೀಡಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ದಂತ ವೈದ್ಯಕೀಯ ವಿದ್ಯಾರ್ಥಿನಿ ಆತ್ಮಹತ್ಯೆ – ಡೆತ್ನೋಟ್ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಕೇಸ್ ಉಲ್ಲೇಖ
ಎನ್ಹೆಚ್ಎಐಗೆ ಈಗ ನೀಡಿರುವ ಈ ವಿನಾಯಿತಿಯ ಪರಾಮರ್ಶೆ ಮಾಡಲಾಗುತ್ತಿದ್ದು, ಅವರು ರಸ್ತೆಯ ಬದಿಯಲ್ಲಿ ಗುತ್ತಿಗೆದಾರರಿಂದ ಸಸಿ ನೆಡಿಸದಿದ್ದರೆ, ಈಗ ನೀಡಿರುವ ಅನುಮತಿ ಹಿಂಪಡೆಯುತ್ತೇವೆ ಎಂದು ಸದನಕ್ಕೆ ತಿಳಿಸಿದರು. ಇದನ್ನೂ ಓದಿ: ಆನೆ-ಮಾನವ ಸಂಘರ್ಷ ಶಾಶ್ವತ ಪರಿಹಾರಕ್ಕೆ ಪ್ರಾಮಾಣಿಕ ಯತ್ನ: ಈಶ್ವರ ಖಂಡ್ರೆ
ರಾಷ್ಟ್ರೀಯ ಹೆದ್ದಾರಿ ವಿಭಾಗಗಳು, ರಾಜ್ಯ ಹೆದ್ದಾರಿ ವಿಭಾಗಗಳು, ರಾಜ್ಯ ಲೋಕೋಪಯೋಗಿ ಇಲಾಖೆ, ಪಿಆರ್ಇಡಿ, ಕೆಶಿಪ್, ಕೆಆರ್ಡಿಸಿಎಲ್ ಅಥವಾ ಯಾವುದೇ ಇತರ ಪ್ರಾಧಿಕಾರದಿಂದ ಕೈಗೊಳ್ಳಲಾಗುವ ರಸ್ತೆ ಯೋಜನೆಗಳಿಗೆ ಈ ವಿನಾಯಿತಿ ಆದೇಶ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಪಿಜಿ ವೈದ್ಯಕೀಯ: ಉಳಿಕೆ ಸೀಟಿಗೆ ಮಾ.11ರಂದು ಮತ್ತೊಂದು ಸುತ್ತಿನ ಕೌನ್ಸೆಲಿಂಗ್ – ಕೆಇಎ

