ದೇಶದಲ್ಲಿ ಹಿಜಬ್‌ಗೆ ಯಾವುದೇ ನಿಷೇಧವಿಲ್ಲ: ಕೇಂದ್ರ ಸಚಿವ ಮುಖ್ತರ್‌ ಅಬ್ಬಾಸ್‌

Public TV
1 Min Read

ನವದೆಹಲಿ: ಜನರು ಏನು ತಿನ್ನಬೇಕು, ತಿನ್ನಬಾರದು ಎಂದು ಹೇಳುವುದು ಸರ್ಕಾರದ ಕೆಲಸವಲ್ಲ. ದೇಶದಲ್ಲಿ ಪ್ರತಿಯೊಬ್ಬ ಪ್ರಜೆಗೂ ತಮ್ಮ ಇಷ್ಟದ ಆಹಾರ ಸೇವಿಸುವ ಸ್ವಾತಂತ್ರ್ಯವಿದೆ ಎಂದು ಕೇಂದ್ರ ಸಚಿವ ಮುಖ್ತರ್‌ ಅಬ್ಬಾಸ್‌ ನಖ್ವಿ ಅಭಿಪ್ರಾಯಪಟ್ಟಿದ್ದಾರೆ.

ವಿವಿಧೆಡೆ ನಡೆಯುತ್ತಿರುವ ಧಾರ್ಮಿಕ ಗಲಭೆಗಳ ಕುರಿತು ಮಾತನಾಡಿದ ಅವರು, ಭಾರತೀಯರಿಗೆ ತಮ್ಮ ನಂಬಿಕೆಯನ್ನು ಆಚರಿಸಲು ಸ್ವಾತಂತ್ರ್ಯವಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಧಾರ್ಮಿಕ ಸಮುದಾಯಗಳ ನಡುವೆ ಅಸಹಿಷ್ಣುತೆ ಬೆಳೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಹನುಮಾನ್ ಮೆರವಣಿಗೆಗೆ ಪುಷ್ಪವೃಷ್ಟಿ ಸುರಿಸಿದ ಮುಸ್ಲಿಮರು

HIJAB

ದೇಶದಲ್ಲಿ ಶಾಂತಿ ಮತ್ತು ಸಮೃದ್ಧಿಯನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗದ ಗುಂಪುಗಳು, ಭಾರತದ ಅಂತರ್ಗತ ಸಂಸ್ಕೃತಿ ಮತ್ತು ಬದ್ಧತೆಯನ್ನು ದೂಷಿಸಲು ಪ್ರಯತ್ನಿಸುತ್ತವೆ ಎಂದು ಹೇಳಿದ್ದಾರೆ.

ಹಿಜಬ್‌ ಕುರಿತು ಮಾತನಾಡಿದ ಅವರು, ಭಾರತದಲ್ಲಿ ಹಿಜಬ್‌ಗೆ ಯಾವುದೇ ನಿಷೇಧವಿಲ್ಲ. ಮಾರುಕಟ್ಟೆ ಮತ್ತು ಇತರೆ ಸ್ಥಳಗಳಲ್ಲಿ ಹಿಜಬ್‌ ಧರಿಸಬಹುದಾಗಿದೆ. ಆದರೆ ಕಾಲೇಜು ಮತ್ತು ಶಿಕ್ಷಣ ಸಂಸ್ಥೆಗಳು ವಸ್ತ್ರಸಂಹಿತೆ ಹಾಗೂ ಶಿಸ್ತನ್ನು ರೂಢಿಸಿವೆ. ಅದನ್ನು ನಾವು ಪಾಲಿಸಲೇಬೇಕಾಗುತ್ತದೆ. ನಿಮಗೆ ಇದು ಇಷ್ಟವಿಲ್ಲದಿದ್ದರೆ, ಬೇರೆ ಶಿಕ್ಷಣ ಸಂಸ್ಥೆಯನ್ನು ಆಯ್ಕೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಬಿಜೆಪಿ ಬೆಂಬಲದೊಂದಿಗೆ ಹೊಸ ಹಿಂದೂ ಓವೈಸಿ ಉದಯ : ರಾಜ್ ಠಾಕ್ರೆ ವಿರುದ್ಧ ಸಂಜಯ್ ರಾವತ್ ವಾಗ್ದಾಳಿ

NARENDRA MODI

ಹನುಮ ಜಯಂತಿ ನಿಮಿತ್ತ ಶನಿವಾರ ನವದೆಹಲಿಯಲ್ಲಿ ಹಿಂದೂ ಧಾರ್ಮಿಕ ಮೆರವಣಿಗೆ ವೇಳೆ ಧಾರ್ಮಿಕ ಘರ್ಷಣೆಗಳು ನಡೆದಿದ್ದು, ಆರು ಪೊಲೀಸರು ಸೇರಿದಂತೆ ಹಲವಾರು ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ಬಲಪಂಥೀಯ ಸರ್ಕಾರದ ಭಾಗವಾಗಿರುವ ಮುಖ್ತರ್‌ ಅಬ್ಬಾಸ್‌ ನಖ್ವಿ, ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರಾಗಿದ್ದಾರೆ. ಇತ್ತೀಚೆಗೆ ದೇಶದ ವಿವಿಧೆಡೆ ನಡೆಯುತ್ತಿರುವ ಕೋಮುಗಲಭೆ, ಹಿಂಸಾಚಾರ ಕುರಿತು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಬುಲ್ಡೋಜರ್ ಬಾಬಾ ರಾಜ್ಯವನ್ನು ತಪ್ಪು ದಾರಿಯಲ್ಲಿ ನಡೆಸುತ್ತಿದ್ದಾರೆ: ಅಖಿಲೇಶ್ ಯಾದವ್

Share This Article
Leave a Comment

Leave a Reply

Your email address will not be published. Required fields are marked *