ಮೋದಿಯವರ ಸುಳ್ಳಾಟ ಬಯಲಿಗೆ ಎಳೆಯಲು ಒಳ್ಳೆಯ ಅವಕಾಶವಿದೆ: ಸಂತೋಷ್ ಲಾಡ್

By
1 Min Read

ಧಾರವಾಡ: ಈಗ ರಾಹುಲ್ ಗಾಂಧಿ (Rahul Gandhi) ವಿಪಕ್ಷ ನಾಯಕರಾಗಿದ್ದಾರೆ. ಈಗ ಮೋದಿಯವರ (Narendra Modi) ಸುಳ್ಳಾಟ ಬಯಲಿಗೆ ಎಳೆಯಲು ಒಳ್ಳೆಯ ಅವಕಾಶವಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ (Santosh Lad) ಹೇಳಿದ್ದಾರೆ.

ಲೋಕಸಭೆ ವಿಪಕ್ಷ ನಾಯಕರಾಗಿ ರಾಹುಲ್ ಗಾಂಧಿ ಆಯ್ಕೆ ವಿಚಾರದ ಕುರಿತು ಧಾರವಾಡದಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವುದು ಖುಷಿ ಇದೆ. ಇಂಡಿ ಒಕ್ಕೂಟಕ್ಕೆ ಧನ್ಯವಾದ ಹೇಳುವೆ. ರಾಹುಲ್ ಗಾಂಧಿ ಸಮರ್ಥರಿದ್ದಾರೆ. ಹದಿನೈದು ವರ್ಷ ಸುದ್ದಿಗೋಷ್ಠಿ ಮಾಡದೇ ದೇಶ ನಡೆಸಿದ್ದಾರೆ. ಇನ್ನು ರಾಹುಲ್ ಗಾಂಧಿ ವಿಪಕ್ಷ ನಾಯಕರಾಗಿ ನಡೆಸಲು ಆಗಲ್ವಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ನನ್ನ ಹನಿಟ್ರ್ಯಾಪ್ ನಡೆದಿಲ್ಲ: ಶಾಸಕ ಹರೀಶ್ ಗೌಡ ಸ್ಪಷ್ಟನೆ

ವಯನಾಡ್‌ನಲ್ಲಿ ಪ್ರಿಯಂಕಾ ಗಾಂಧಿ ಸ್ಪರ್ಧಿಸಿ, ಗೆಲ್ಲುತ್ತಾರೆ. ಅವರು ಸಂಸತ್‌ಗೆ ಬಂದರೆ ನಮಗೆ ಮತ್ತಷ್ಟು ಶಕ್ತಿ ಬರುತ್ತದೆ ಎಂದರು. ಡಿಕೆಶಿ ಸಿಎಂ ಆಗಲಿ ಎಂದು ಚನ್ನಗಿರಿ ಶಾಸಕರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಅದು ಅವರ ವೈಯಕ್ತಿಕ ಅಭಿಪ್ರಾಯ ಎಂದು ಹೇಳಿದರು. ಇದನ್ನೂ ಓದಿ: ಉಸಿರಾಡುವ ಗಾಳಿಗೊಂದು ಟ್ಯಾಕ್ಸ್ ಹಾಕೋದು ಬಾಕಿ ಇದೆ: ಸಿ.ಟಿ ರವಿ ಕಿಡಿ

Share This Article