ಅಂದು ‘ದಿ ಕೇರಳ ಸ್ಟೋರಿ’, ಇಂದು ‘ಬಸ್ತರ್’: ವಿವಾದದ ಸುಳಿಯಲ್ಲಿ ಅದಾ ಸಿನಿಮಾ

Public TV
1 Min Read

ದಿ ಕೇರಳ ಸ್ಟೋರಿ ಮೂಲಕ ಸಂಚಲನ ಸೃಷ್ಟಿ ಮಾಡಿದ್ದ ಸುದೀಪ್ತೋ ಸೇನ್ (Sudipto Sen) ಮತ್ತು ಅದಾ ಶರ್ಮಾ (Adah Sharma) ಕಾಂಬಿನೇಷನ್ ಇದೀಗ ಮತ್ತೊಂದು ಸಿನಿಮಾ ಮಾಡಿ ಅದನ್ನು ರಿಲೀಸ್ ಕೂಡ ಮಾಡಿದೆ. ಬಸ್ತರ್ ಹೆಸರಿನ ಸಿನಿಮಾ ಈ ವಾರ ದೇಶದಾದ್ಯಂತ ಬಿಡುಗಡೆ ಆಗಿದ್ದು, ಈ ಸಿನಿಮಾ ಕೂಡ ವಿವಾದಕ್ಕೆ (Controversy) ಕಾರಣವಾಗಿದೆ. ಅಂದು ದಿ ಕೇರಳ ಸ್ಟೋರಿ ಕೂಡ ವಿವಾದ ಸಿಲುಕಿಕೊಂಡಿತ್ತು.

ಬಸ್ತರ್ (Bastar) ನಕ್ಸಲೈಟ್ ಕುರಿತಾದ ಸಿನಿಮಾವಾಗಿದ್ದು,  ಸುಳ್ಳಿನ ಹಿಂದಿರುವ ಸತ್ಯವನ್ನು ಈ ಸಿನಿಮಾ ಮೂಲಕ ಹೇಳುವುದಾಗಿ ಚಿತ್ರತಂಡ ತಿಳಿಸಿತ್ತು. ಆ ಸತ್ಯವನ್ನೂ ಸಿನಿಮಾದಲ್ಲಿ ಹೇಳಲಾಗಿದೆ. ನಕ್ಸಲ್ ಹಿಂಸಾಚಾರದ ಕುರಿತಾಗಿ ಕಥೆಯನ್ನು ಈ ಸಿನಿಮಾದಲ್ಲಿ ಹೇಳಲಾಗಿದೆ. ಇದೇ ವಿವಾದಕ್ಕೆ ಕಾರಣವಾಗಿದೆ.

ಭಾರತೀಯ ಸೈನಿಕರನ್ನು ನಕ್ಸಲ್ ರು ಹೇಗೆ ಹತ್ಯೆ ಮಾಡಿದರು ಎನ್ನುವುದನ್ನು ಸಿನಿಮಾದಲ್ಲಿ ಎಳೆ ಎಳೆಯಾಗಿ ಬಿಚ್ಚಿಡಲಾಗಿದೆ. ಇದೇ ಆಕ್ರೋಶಕ್ಕೆ ಕಾರಣವಾಗಿದೆ. ಅನಗತ್ಯ ವಿಷಯಗಳನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ ಎಂದು ಹಲವರು ಆಕ್ರೋಶ ಹೊರ ಹಾಕಿದ್ದಾರೆ. ಕೆಲವು ಕಡೆ ಸಿನಿಮಾ ಪ್ರದರ್ಶನವನ್ನೂ ನಿಲ್ಲಿಸಿದ್ದಾರೆ.

ಕಡಿಮೆ ಬಜೆಟ್ ನಲ್ಲಿ ತಯಾರಾದ ದಿ ಕೇರಳ ಸ್ಟೋರಿ ಸಿನಿಮಾ ಕಡಿಮೆ ಅವಧಿಯಲ್ಲಿ ನೂರಾರು ಕೋಟಿ ಕಲೆಕ್ಷನ್ ಮಾಡಿತು. ವಿವಾದ, ಬೈಕಾಟ್, ಬ್ಯಾನ್ ನಡುವೆಯೂ ಹಲವು ರಾಜ್ಯಗಳಲ್ಲಿ ಇದು ತುಂಬಿದ ಪ್ರದರ್ಶನ ಕಂಡಿತು. ಕೆಲ ರಾಜ್ಯಗಳು ಚಿತ್ರಕ್ಕೆ ತೆರಿಗೆ ವಿನಾಯತಿ ಘೋಷಣೆ ಮಾಡಿದ್ದರಿಂದ ಹೆಚ್ಚಿನ ಮೊತ್ತ ನಿರ್ಮಾಪಕರಿಗೆ ಹರಿದು ಬಂದಿತ್ತು. ಬಸ್ತರ್ ಕೂಡ ಅದೇ ಹಾದಿಯಲ್ಲಿ ಸಾಗುತ್ತಿದೆ.

Share This Article