ಜೊಲ್ಲೆ ಒಡೆತನದ ಬ್ಯಾಂಕ್‌ಗೆ ಕನ್ನ – 20 ಲಕ್ಷ ನಗದು, 40 ಲಕ್ಷ ಚಿನ್ನಾಭರಣ ಕಳವು

Public TV
1 Min Read

ಧಾರವಾಡ: ಸಚಿವೆ ಶಶಿಕಲಾ ಜೊಲ್ಲೆ (Shashikala Jolle) ಹಾಗೂ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಒಡೆತನದ ಶ್ರೀ ಬೀರೇಶ್ವರ ಸಹಕಾರಿ ಬ್ಯಾಂಕ್‌ನಲ್ಲಿ (Shri Beereshwar Co-Op Credit Society) ಜನವರಿ 1ರ ತಡರಾತ್ರಿ ಕಳ್ಳತನವಾಗಿದೆ.

ಧಾರವಾಡದ (Dharwad) ಕೋರ್ಟ್ ವೃತ್ತದ ಬಳಿ ಇರುವ ಬ್ಯಾಂಕ್‌ಗೆ ಖದೀಮರು ನಿನ್ನೆ ಕನ್ನ ಹಾಕಿದ್ದಾರೆ. ಬ್ಯಾಂಕ್‌ನಲ್ಲಿದ್ದ ಸುಮಾರು 20 ಲಕ್ಷ ನಗದು ಹಾಗೂ 40 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದೊಯ್ದಿದ್ದಾರೆ. ಇದನ್ನೂ ಓದಿ: ಪಂಜಾಬ್‌ ಸಿಎಂ ಭಗವಂತ್‌ ಮಾನ್‌ ಮನೆ ಸಮೀಪ ಬಾಂಬ್‌ ಪತ್ತೆ – ಸ್ಥಳಕ್ಕೆ ದೌಡಾಯಿಸಿದ ಬಾಂಬ್‌ ನಿಷ್ಕ್ರಿಯ ದಳ 

ಖದೀಮರು ತಮ್ಮ ಗುರುತು ಪತ್ತೆಯಾಗಬಾರದು ಎಂದು ಸಿಸಿಟಿವಿ (CCTV) ಹಾಗೂ ಬ್ಯಾಂಕ್‌ನಲ್ಲಿದ್ದ ದಾಖಲೆಗಳನ್ನೂ ಸುಟ್ಟು ಹಾಕಿದ್ದಾರೆ. ಸಿಸಿಟಿವಿಯ ಡಿವಿಆರ್ ಅನ್ನೂ ಹೊತ್ತೊಯ್ದಿದ್ದಾರೆ. ಇದನ್ನೂ ಓದಿ: ‘ವೀರ ಕಂಬಳ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ

ಧಾರವಾಡದ ಶಹರ ಠಾಣೆ ಪೊಲೀಸರು ಹಾಗೂ ಎಸಿಪಿ ವಿಜಯಕುಮಾರ ತಳವಾರ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ದೂರು ದಾಖಲಿಸಿಕೊಂಡಿದ್ದಾರೆ. ಕಳ್ಳರಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *