ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಅನೇಕ ಗ್ರಾಮಗಳಲ್ಲಿ ಆರು ದೇವಸ್ಥಾನಗಳಲ್ಲಿ ಕಳ್ಳತನವಾಗಿರುವ ಘಟನೆ ನಡೆದಿದೆ.
ಬನ್ನಿತಾಳಪುರ ಗ್ರಾಮದಲ್ಲಿರುವ ಶ್ರೀ ಕಿಕ್ಕೇರಿ ಮಹಾಲಕ್ಷ್ಮಿ ದೇವಸ್ಥಾನ, ಸಾಗಡೆ ರಾಕಸಮ್ಮ ದೇವಸ್ಥಾನ, ಉತ್ತನಹಳ್ಳಿ ಮಾರಮ್ಮ ದೇವಸ್ಥಾನ, ಮಲೆಯೂರು ಮಾರಮ್ಮ ದೇವಸ್ಥಾನ, ಗೋನಳ್ಳಿ ದೇವಸ್ಥಾನ, ಹಿಮವದ್ ಗೋಪಾಲಸ್ವಾಮಿ ದೇವಸ್ಥಾನ ಒಟ್ಟು ಆರು ದೇವಸ್ಥಾನಗಳಲ್ಲಿ ಸರಣಿ ಕಳ್ಳತನ ಆಗಿದೆ.
ದೇವಸ್ಥಾನದ ಬೀಗಗಳನ್ನು ಒಡೆದು ಒಳಗೆ ಪ್ರವೇಶಿಸಿ ಚಿನ್ನದ ತಾಳಿಗಳು, ಬೆಳ್ಳಿ ಕೊಳಲು, ಚಿನ್ನದ ಕಾಸುಗಳು, ಚಿನ್ನದ ಗುಂಡುಗಳನ್ನು ಕಳ್ಳತನ ಮಾಡಿ ಗೋಲಕಗಳನ್ನು ಒಡೆದು ಹಣವನ್ನು ತೆಗೆದುಕೊಂಡು ಹೋಗಿರುವ ಬಗ್ಗೆ ಸ್ಥಳೀಯರು ತಿಳಿಸಿದ್ದಾರೆ. ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

